

ಮೈಸೂರು: ಕಾನೂನು ಬಾಹಿರವಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇಲೆ ಮೈಸೂರು ಅರಮನೆಯ 11 ನೌಕರರನ್ನು ಮಂಗಳವಾರ ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ.
2008ರಲ್ಲಿ 11ಮಂದಿಯನ್ನು ಮೈಸೂರು ಅರಮನೆ ಮಂಡಳಿಯು ನೇಮಕ ಮಾಡಿಮಾಡಿತ್ತು. ಈ ನೇಮಕವು ಕಾನೂನು ಬಾಹಿರವಾಗಿದೆ ಎಂದು ಹೇಳಿ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಾಗಿತ್ತು.
ಇದರಂತೆ ಇಂದು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಕಾನೂನು ಬಾಹಿರವಾಗಿ ನೇಮಕ ಮಾಡಿರುವುದನ್ನು ವಜಾಮಾಡಬೇಕೆಂದು ಆದೇಶ ಹೊರಡಿಸಿದೆ. ಸುಪ್ರೀಂ ಆದೇಶದಂತೆ ಈಗಾಗಲೇ 11 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಜಾಗೊಂಡಿರುವ 11 ಮಂದಿಯಲ್ಲಿ ಇಬ್ಬರು ಈಗಾಗಲೇ ನಿಧನರಾಗಿದ್ದು, ಮತ್ತಿಬ್ಬರು ನಿವೃತ್ತಿ ಹೊಂದಿದ್ದಾರೆ. ಉಳಿದ 7 ಮಂದಿಯನ್ನು ಇದೀಗ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.