ಕೃಷಿಕರಿಗೆ ತಂತ್ರಜ್ಞಾನ, ಇಸಾಕ್ಷರತೆ, ಐಸಿಟಿ ತಲುಪಿಸುವಂತಾಗಬೇಕು: ಸಿಎಂ

ನಮ್ಮ ರೈತರು ನೈರುತ್ಯ ಮಾರುತಗಳಿಂದಗುವ ಅತಿವೃಷ್ಟಿಯನ್ನಷ್ಟೇ ಅಲ್ಲ ಮಾರುಕಟ್ಟೆಯ ಬೆಲೆ ಮತ್ತು ಮಾರುಕಟ್ಟೆ ಬಗೆಗಿನ ಮಾಹಿತಿ...
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುಸ್ಥಿರ ಅಭಿವೃದ್ಧಿಗಾಗಿ ಹೊಸತನದ ಡಿಜಿಟಲ್ ಅನ್ವಯಗಳು ಕುರಿತ 8ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಸಿಎಂ ಸಿದ್
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುಸ್ಥಿರ ಅಭಿವೃದ್ಧಿಗಾಗಿ ಹೊಸತನದ ಡಿಜಿಟಲ್ ಅನ್ವಯಗಳು ಕುರಿತ 8ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಸಿಎಂ ಸಿದ್
Updated on: 
ಬೆಂಗಳೂರು: `ನಮ್ಮ ರೈತರು ನೈರುತ್ಯ ಮಾರುತಗಳಿಂದಗುವ ಅತಿವೃಷ್ಟಿಯನ್ನಷ್ಟೇ ಅಲ್ಲ ಮಾರುಕಟ್ಟೆಯ ಬೆಲೆ ಮತ್ತು ಮಾರುಕಟ್ಟೆ ಬಗೆಗಿನ ಮಾಹಿತಿ ಕೊರತೆಯಂತಹ ಗಂಭಿೀರ ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ `ಸುಸ್ಥಿರ ಅಭಿವೃದ್ಧಿಗಾಗಿ ಹೊಸತನದ ಡಿಜಿಟಲ್ ಅನ್ವಯಗಳು' ಕುರಿತ 8ನೇ ಅಂತಾರಾಷ್ಟ್ರೀ ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಮುಖ್ಯವಾಗಿ ಮಾರುಕಟ್ಟೆ ಬೆಲೆಯಿಂ ದಾಗಿ ಲಾಭದಾಯಕ ಆದಾಯ ಗಳಿಸಲು ಹವಣಿಸುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿ ಹೊಂದಿದ ಡಿಜಿಟಲ್ ತಂತ್ರಜ್ಞಾನ ಬಳಸಿ ರೈತರಿಗೆ ಆಯಾ ಸಮಯಕ್ಕೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡುವಂತಾಗಬೇಕು. 
ಈ ಸಮ್ಮೇಳನದಲ್ಲಿ ಡಿಜಿಟಲ್ ತಂತ್ರಜ್ಞಾನ, ಇಸಾಕ್ಷರತೆ ಹಾಗೂ ಇತರೆ ಐಸಿಟಿ ಅನ್ವಯಗಳನ್ನು ತಲುಪಿಸುವಂತಾಗ ಬೇಕು ಎಂದರು. ರಾಜ್ಯದ ಎಲ್ಲಾ ಕೃಷಿ ವಿವಿಗಳು ನಾವೀನ್ಯ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿ ರೈತರಿಗೆ ವಿಳಂಬವಾಗಿ ತಲುಪುತ್ತಿರುವ ಕೃಷಿ ತಂತ್ರಜ್ಞಾನದ ಬಳಕೆಯನ್ನು ಆದಷ್ಟು ಬೇಗ ಮುಟ್ಟಿಸಬೇಕು. ಕೇವಲ ತಂತ್ರಜ್ಞಾನ ರೂಪಿಸುವುದಲ್ಲ, ಅದು ಎಷ್ಟರ ಮಟ್ಟಿಗೆ ತಲುಪುತ್ತಿದೆ ಎಂಬುದನ್ನು ಗಮನಿಸಬೇಕು. ನಾವಿಂದು ಡಿಜಿಟಲೀಕರಣ ಯುಗ ದಲ್ಲಿದ್ದೇವೆ. ನಮ್ಮ ಇತಿಮಿತಿಯೊಳಗೆ ಮಾನವ ಸಂಪನ್ಮೂಲ ಬಳಸುತ್ತಿದ್ದೇವೆ. ಐಸಿಟಿ (ಇನ್ಫಾರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ) ಮಾತ್ರ ರೈತರಿಗೆ ತಂತ್ರಜ್ಞಾನ ತಲುಪಿಸುವ ಸಾಧನವಾಗಿದೆ.
ಕರ್ನಾಟಕದಲ್ಲಿ ಕೃಷಿಯೇ ಮೂಲ ಕಸುಬಾಗಿದ್ದು, ಭಾರತದ ಆರ್ಥಿಕತೆಯ ಬೆನ್ನಲುಬಾ ಗಿದೆ. ಇದೀಗ ಎರಡನೇ ಹಸಿರುಕ್ರಾಂತಿ ಏನಾದರೂ ನಡೆದರೆ ಅದು ತಂತ್ರಜ್ಞಾನದಿಂದ ಮಾತ್ರ ಸಾಧ್ಯ ಎಂದು ಸಿಎಂ ಅಭಿಪ್ರಾಯಪಟ್ಟರು. ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಅಂಕಿ ಸಂಖ್ಯೆಗಳ ಆಟದಿಂದಲೇ ರೂಪುಗೊಂಡಿರುವ ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. 
ಮಣ್ಣಿನ ಪರೀಕ್ಷೆಗೆ ತಂತ್ರಜ್ಞಾನ ಬಳಕೆಯಾದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿನ ದರ, ಮೊಬೈಲ್ ಸೇವೆ, ಟ್ಯಾಬ್‍ಗಳ ಬಳಕೆ ಬಗ್ಗೆ ರೈತರಿಗೆ ಮಾಹಿತಿ ನೀಡುವಂತಾಗಬೇಕು. ನಮ್ಮ ಸರ್ಕಾರ ರಾಷ್ಟ್ರ ಮಟ್ಟದ ತಂತ್ರಜ್ಞಾನ ಅಳವಡಿಸಿಕೊಂಡು ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡಲು ಕಾರ್ಯಯೋಜನೆ ರೂಪಿಸಿದೆ. 
ರೈತರೇ ನೇರವಾಗಿ ಮಾರುಕಟ್ಟೆಗೆ ಹೋಗಿ ಬೆಳೆದ ಫಸಲನ್ನು ಮಾರಾಟ ಮಾಡಿ ಬರುವಂತಹ ವಾತಾವರಣ ಸೃಷ್ಟಿಸುವುದು ನಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯಪಟ್ಟರು. ಯುನೆಸ್ಕೋ ಜ್ಞಾನ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಇಂದ್ರಜಿತ್ ಬ್ಯಾನರ್ಜಿ, ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ, ಕರ್ನಾಟಕ ಕೌಶಲ್ಯಾಭಿವೃದ್ಧಿ ಮತ್ತು ಔದ್ಯೋಗಿಕ ಶಿಕ್ಷಣ ಮಂಡಳಿ ಅಧ್ಯಕ್ಷೆ ಪುಷ್ಪ ಲಕ್ಷ್ಮಣಸ್ವಾಮಿ, ಐಸಿಎಆರ್ ಉಪ ಪ್ರಧಾನ ನಿರ್ದೇಶಕ ಡಾ.ಎ.ಕೆ.ಸಿಂಗ್, ಪ್ರಾಧ್ಯಾಪಕ ಡಾ.ಬಿ.ಕೆ.ರವಿ, ಕೃಷಿ ವಿವಿ ಕುಲಪತಿ ಡಾ.ಎಚ್.ಶಿವಣ್ಣ, ಪ್ರಾಧ್ಯಾಪಕ ಡಾ.ಎನ್.ಆರ್. ಗಂಗಾಧರಪ್ಪ ಉಪಸ್ಥಿತರಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com