ಬೆಂಗಳೂರು: ಹಾಲಿನ ದರ ಏರಿಕೆ ಹಾಗೂ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಖಂಡಿಸಿರುವ ಬಿಜೆಪಿ ನಾಯಕರು ಗುರುವಾರ ಪ್ರತಿಭಟನೆಗಿಳಿಸಿದಿದ್ದಾರೆ.
ಈಗಾಗಲೇ ನಗರದ ಪುರಭವನದ ಎದುರು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರವನ್ನು ಕೂಗುತ್ತಿದೆ. ಹಾಲಿನ ದರ ಏರಿಕೆ, ಹೆಲ್ಮೆಟ್ ಖಡ್ಡಾಯದ ಆದೇಶ ಜನ ವಿರೋಧಿ ನಿಯಮವಾಗಿದ್ದು, ಹಾಲಿನ ದರ ಏರಿಕೆಯಿಂದಾಗಿ ಗ್ರಾಹಕರು ಪರದಾಡುವಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಹಾಲಿನ ದರವನ್ನು ಇಳಿಕೆ ಮಾಡಿ, ಹೆಲ್ಮೆಟ್ ಕಡ್ಡಾಯವನ್ನು ಹಿಂಪಡೆಯುಬೇಕು ಎಂದು ನಾಯಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾಡಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ನಟ ಬುಲೆಟ್ ಪ್ರಕಾಶ್, ನಟಿ ತಾರಾ, ಶಾಸಕ ವಿಜಯ್ ಕುಮಾರ್, ಪಾಲಿಕೆಯ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಮಾಜಿ ಮೇಯರ್ ಎಸ್.ಕೆ, ನಟರಾಜ್, ಬಿಬಿಎಂಪಿ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದಾರೆ.