

ಬೆಂಗಳೂರು: ಬೆಂಗಳೂರಿನ ಕಾವೇರಿ ನಗರದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದಿಂದ ಬಂಧಕ್ಕೊಳಗಾಗಿದ್ದ ಅಲ್ ಖೈದಾ ಸಂಘಟನೆಯ ಶಂಕಿತ ಉಗ್ರ ಮೌಲ್ವಿ ಅನ್ಜರ್ ಷಾ ಖಾಸ್ಮಿ ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಪ್ರೇರಣೆ ನೀಡುತ್ತಿದ್ದ ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಬಹಿರಂಗಗೊಂಡಿದೆ.
ಬಂಧಿತ ಖಾಸ್ಮಿ ಯುವಕರನ್ನು ಸೆಳೆಯಲು ವೆಬ್ಸೈಟ್ವೊಂದನ್ನು ತೆರೆದಿದ್ದ. ಅಲ್ಲದೇ ಅದಕ್ಕಾಗಿ ಉತ್ತರಪ್ರದೇಶ, ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಗೆ ಭೇಟಿ ನೀಡಿ, ಕೆಲ ಯುವಕರನ್ನು ಭೇಟಿ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ದೇಶದ ಪ್ರಮುಖ ನಗರಗಳಲ್ಲಿ ಈತನಿಗೆ ಇರುವ ಸಂಪರ್ಕದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಬಂಧಿತ ಮೌಲ್ವಿಯಿಂದ ಎರಡು ಪಾಸ್ ಪೋರ್ಟ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಈತ ಪಾಕಿಸ್ತಾನಕ್ಕೂ ಭೇಟಿ ನೀಡಿರುವ ಸಾಧ್ಯತೆಯಿದೆ. ಅಲ್ಲದೇ ಅಲ್ಖೈದಾ ಸಂಘಟನೆಗೆ ಸಹಕಾರ ನೀಡುತ್ತಿದ್ದ ಎನ್ನಲಾಗಿದೆ.