ಸಾಲ ನೀಡಿದವನ ಮಗುವನ್ನೇ ಅಪಹರಿಸಿದ

ಸಾಲಗಾರರ ಕಿರಿಕಿರಿ ತಾಳಲಾರದೆ ತಪ್ಪಿಸಿಕೊಂಡು ಓಡಾಡುವರರ ಬಗ್ಗೆ ಗೊತ್ತೇ ಇದೆ. ಆದರೆ, ಇಲ್ಲೊಬ್ಬ ಭೂಪ ಸಾಲಗಾರನ ಕಿರಿಕಿರಿ ತಾಳಲಾರದೆ ಅವರ ಮಗುವನ್ನೇ ಅಪಹರಿಸಿ ಸಿಕ್ಕಿ ಬಿದ್ದಿದ್ದಾನೆ!...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಸಾಲಗಾರರ ಕಿರಿಕಿರಿ ತಾಳಲಾರದೆ ತಪ್ಪಿಸಿಕೊಂಡು ಓಡಾಡುವರರ ಬಗ್ಗೆ ಗೊತ್ತೇ ಇದೆ. ಆದರೆ, ಇಲ್ಲೊಬ್ಬ ಭೂಪ ಸಾಲಗಾರನ ಕಿರಿಕಿರಿ ತಾಳಲಾರದೆ ಅವರ ಮಗುವನ್ನೇ ಅಪಹರಿಸಿ ಸಿಕ್ಕಿ ಬಿದ್ದಿದ್ದಾನೆ!

ಆರ್.ಟಿ.ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅಪಹರಣಕ್ಕೊಳಗಾದ ಬಾಲಕನನ್ನು ರಕ್ಷಿಸಲಾಗಿದೆ. ರಘು ಅಲಿಯಾಸ್ ನಾಗರಾಜು ಬಂಧಿತ ಆರೋಪಿ.

ನಡೆದದ್ದೇನು?
ಬನಶಂಕರಿಯ ಪ್ರಗತಿಪುರ ವಾರ್ಡ್ ನಲ್ಲಿ ನೆಲೆಸಿದ್ದ ಆರೋಪಿ ರಘು ಹಾಗೂ ಮಗುವಿನ ತಂದೆ ಫ್ರಾನ್ಸಿಸ್ ಪರಿಚಿತರು.

ಇದನ್ನೇ ನೆಪ ಮಾಡಿಕೊಂಡು ರಘು ಫ್ರಾನ್ಸಿಸ್ ತಾಯಿಯ ಬಳಿ 30 ಸಾವಿರ ರೂಪಾಯಿ ಸಾಲ ಪಡೆದಿದ್ದ. ಬಹಳ ದಿನಗಳಾದರೂ ಇದನ್ನು ತೀರಿಸಿರಲಿಲ್ಲ. ಹಲವು ಬಾರಿ ಕೇಳಿದಾಗಲೂ ರಘು ಒಂದೊಂದು ಕಥೆ ಹೇಳುತ್ತಿದ್ದ. ಬನಶಂ ಕರಿಯ ಇನ್ನೊಂದು ಬಡಾವಣೆಯಲ್ಲಿ ಮನೆ ಮಾಡಲು ಸಾಕಷ್ಟು ಜನರ ಬಳಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ.

ಸಾಲಗಾರರ ಒತ್ತಡ ಹೆಚ್ಚಾಗಿತ್ತು. ಈ ನಡುವೆ ಕೊಟ್ಟ ಹಣ ವಾಪಸ್ ಕೊಡದಿದ್ದಾಗ ಫ್ರಾನ್ಸಿಸ್‍ನ ತಾಯಿ, ರಘು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ರು. 7 ಲಕ್ಷಕ್ಕೆ ಬೇಡಿಕೆಯಿಟ್ಟ: ಗಲಾಟೆ ಯಿಂದಾಗುವ ಅವಮಾನದಿಂದಾಗಿ ರಘು ದ್ವೇಷ ಸಾಧಿಸಲು ಹವಣಿಸುತ್ತಿದ್ದ. ಒಂದೇ ಕಲ್ಲಿನಲ್ಲಿ ಎರಡೇಟು ಹೊಡೆಯಲು ಬಯಸಿದ್ದ ರಘು ಒಂದಿನ ಫ್ರಾನ್ಸಿಸ್ ಅವರ 4 ವರ್ಷದ ಮಗುವನ್ನು ಅಪಹರಣ ಮಾಡಿ ತನ್ನ ಬನಶಂಕರಿಯ ಮನೆಯಲ್ಲಿ ಇಟ್ಟುಕೊಂಡುಬಿಟ್ಟ. ದೂರವಾಣಿ ಕರೆಯಲ್ಲಿ ದ್ವನಿ ಬದಲಾ ಯಿಸಿ ಮಗು ಬಿಡುಗಡೆ ಮಾಡಲು ರು. 7 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ.

ಠಾಣೆಗೂ ಹೋಗಿದ್ದ: ಮಗು ಕಾಣೆಯಾಗಿ ದ್ದ ಹಿನ್ನೆಲೆಯಲ್ಲಿ ಫ್ರಾನ್ಸಿಸ್ ಮನೆಯವರು ದೂರು ನೀಡಲು ನಿರ್ಧರಿಸಿದಾಗ ಅವರೊಂದಿಗೆ ದೂರು ನೀಡಲು ಠಾಣೆವರೆಗೂ ಹೋಗಿದ್ದ. ಮಗು ಅಲ್ಲಿರಬಹುದು, ಇಲ್ಲಿರಬಹುದು ಎಂದು ಪಾಲಕರನ್ನು ಪಿಗ್ಗಿ ಬಿಳಿಸುತ್ತ ಮಗುವಿನ ಹುಡುಕಾಟದಲ್ಲಿಯೂ ಸಹಕರಿಸುತ್ತಿದ್ದ ಆದರೆ, ಈತನ ಚಲನವಲನದ ಬಗ್ಗೆ ಅನುಮಾನ ಗೊಂಡ ಪೊಲೀಸರು, ಈತನ ಮೊಬೈಲ್ ನೆಟ್‍ವರ್ಕ್ ಪರಿಶೀಲಿಸಿ ದ್ದಾರೆ. ಬನಶಂಕರಿಯಲ್ಲಿ ನೆಟ್‍ವರ್ಕ್ ಲೊಕೇಷನ್ ಸಿಕ್ಕಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಈತನ ಮನೆಯನ್ನು ಪರಿಶೀಲಿಸಿದ್ದಾರೆ. ಮಗು ಮನೆಯ ಕೊಠಡಿಯಲ್ಲಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಂತರ ಈತನನ್ನು ವಿಚಾರಣೆಗೊಳಪಡಿಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com