

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಾದಹಳ್ಳಿ ಬೈಯ್ಯಣ್ಣ ಲೇಔಟ್‍ನ ಟೆಕ್ಸ್‍ಟೈಲ್ಸ್ ಎದುರು ರೌಡಿ ಸತೀಶ್ ಅಲಿಯಾಸ್ ಗುಂಡಾನನ್ನು ಹತ್ಯೆಗೈದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳದ ಮಹೇಶ್ (34), ಮಂಜು ಮಿಥುನ್ (27), ಹರೀಶ್ (34) ಮತ್ತು ಚಿರಂಜೀವಿ(26) ಬಂಧಿತ ಆರೋಪಿಗಳು. ಜ.13ರಂದು ಹೆಬ್ಬಾಳ ವ್ಯಾಪ್ತಿಯ ಸಾದಹಳ್ಳಿ ಬೈಯಣ್ಣ ಲೇಔಟ್‍ನ ಬಾಲಾಜಿ ಟೆಕ್ಸ್‍ಟೈಲ್ಸï ಅಂಗಡಿ ಬಳಿಯಲ್ಲಿ ಸ್ನೇಹಿತರೊಂದಿಗೆ ಟೀ ಕುಡಿಯುತ್ತಾ ನಿಂತಿದ್ದ ಸತೀಶ್‍ನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ವಿಶೇಷ ತಂಡ ರಚಿಸಿ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಸತೀಶ್ ಸಹಚರರು ಮತ್ತು ಆರೋಪಿ ಮಹೇಶ ಅಲಿಯಾಸ್ ತಟ್ಟೆ ಸಹಚರರ ನಡುವೆ 2011ರಿಂದಲೇ ಹಳೆಯ ದ್ವೇಷವಿತ್ತು. ಈ ಸಂಬಂಧವಾಗಿ ಹಲವು ಬಾರಿ ಇಬ್ಬರು ಪರಸ್ಪರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.