

ಬೆಂಗಳೂರು: ಕಾರಿನ ಗಾಜು ಒಡೆದ ದುಷ್ಕರ್ಮಿಗಳು, ಡ್ಯಾಷ್ ಬೋರ್ಡ್‍ನಲ್ಲಿದ್ದ ರು.5 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಮೂಲದ ರಾಜಣ್ಣ ಹಣ ಕಳೆದುಕೊಂಡವರು. ಕೆಲಸದ ನಿಮಿತ್ತ ಆನಂದ್ ರಾವ್ ವೃತ್ತದಲ್ಲಿರುವ ಪಿಡಬ್ಲ್ಯೂಡಿ ಕಚೇರಿ ಎದುರು ಕಾರು ನಿಲ್ಲಿಸಿದ್ದ ವೇಳೆ ದುಷ್ಕರ್ಮಿಗಳು ತಮ್ಮ ಕೈಚಳಕ ತೋರಿದ್ದಾರೆ. ರಾಜಣ್ಣ ಅವರು ಮಧ್ಯಾಹ್ನ 3ರ ಸುಮಾರಿಗೆ ಕಾರು ನಿಲ್ಲಿಸಿ ಕಚೇರಿಗೆ ತೆರಳಿದ್ದರು. ತಮ್ಮ ಕೆಲಸ ಮುಗಿಸಿ ಅರ್ಧ ಗಂಟೆಯಲ್ಲಿ ಕಾರಿನ ಬಳಿಗೆ ಬಂದಾದ ಹಣ
ಕಳವಾಗಿರುವುದು ತಿಳಿದಿದೆ.
ಮೊದಲು ಕಾರಿನ ಕಿಟಕಿ ಗಾಜು ಒಡೆದಿರುವ ದುಷ್ಕರ್ಮಿಗಳು ಬಳಿಕ ಕಾರಿನ ಡ್ಯಾಷ್ ಬೋರ್ಡ್ ತೆರೆದು ಅದರಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ