ಬೆಂಗಳೂರು ಗ್ರಾಮಾಂತರ

ಭ್ರಷ್ಟಾಚಾರ ರಹಿತ ಆಡಳಿತ ನೀಡಿ'

Published On :

ಹೊಸಕೋಟೆ: ಕಂದಾಯ ಇಲಾಖೆ ವಿರುದ್ಧ ಹಲವಾರು ದೂರುಗಳು ಬರುತ್ತಿದ್ದು ಪಾರದರ್ಶಕವಾಗಿ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಎಂದು ನೂತನ ಶಾಸಕ ಎಂಟಿಬಿ ನಾಗರಾಜ್ ತಾಕೀತು ಮಾಡಿದ್ದಾರೆ.  ಹೊಸಕೋಟೆ ತಾಲೂಕಿನಲ್ಲಿ ಹಮ್ಮಿಕೊಂಡಿರುವ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಸಂಬಳ ಕೊಡುತ್ತಿರುವುದು ಪಾರದರ್ಶಕ ಆಡಳಿತ ನೀಡಲಿ ಎಂದು, 6 ತಿಂಗಳಿಂದ  ಒಂದು ಖಾತೆಯೂ ಆಗಿಲ್ಲ, ಕಚೇರಿಯಲ್ಲಿ ಏನು ಮಾಡುತ್ತಿದ್ದೀರಿ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
  ಸರ್ಕಾರದ ನಿಯಮಾವಳಿ ಪ್ರಕಾರ ನೀವು ಯಾರಿಗೂ ಹೆದರದೆ, ಯಾವುದೇ ಆಮಿಷಕ್ಕೆ ಒಳಗಾಗದೇ ಕೆಲಸ ಮಾಡಿ. ಇಂದು ರಾಜಕಾರಣ ಮತ್ತು ಸರ್ಕಾರಿ ಕೆಲಸ ವ್ಯಾಪಾರೀಕರಣವಾಗಿಬಿಟ್ಟಿದೆ. ಅಂತಹ ತಪ್ಪುಗಳು ಇನ್ನು ಮುಂದೆ ಈ ತಾಲೂಕಿನಲ್ಲಿ ನಡೆಯಬಾರದು ಎಂದು ಹೇಳಿದರು. ನೀವು  ಮಾಡುವ ಕೆಲಸ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕವಾಗಿರಬೇಕು.
 ನಾನು ಯಾರ ಮೇಲೂ ಒತ್ತಡ ಹೇರಲ್ಲ. ಇದನ್ನು ಎಲ್ಲಾ ಅಧಿಕಾರಿಗಳು ತಿಳಿದುಕೊಂಡು ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಕಠಿಣ ಕ್ರಮ: ಕೆಲವು ಹೋಬಳಿಗಳಲ್ಲಿ ಸರ್ಕಾರಿ ಗೊಮಾಳ ಜಮೀನನ್ನು ಕೆಲವು ಪ್ರಭಾವಿ ವ್ಯಕ್ತಿಗಳು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಸ್ವತ್ತನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಕೆಲಸ. ಅದನ್ನು ಮೀರಿಮಾಡಿರುವವರನ್ನು ಪತ್ತೆ ಹಚ್ಚಲಾಗುವುದು. ಈಗಾಗಲೇ ನಕಲಿ ದಾಖಲೆ ಸೃಷ್ಟಿ ಮಾಡಿರುವುದರ ಬಗ್ಗೆ ನನ್ನ ಬಳಿ ಕೆಲ ಆಧಾರಗಳು ಇವೆ. ಅಂಥವರಿಗೆ ಸರಿಯಾದ ಪಾಠ ಕಲಿಸುವೆ ಎಂದರು.   ಶಾಸಕಾಂಗ ಮತ್ತು ಕಾರ್ಯಾಂಗ ಎರಡೂ ಒಟ್ಟಿಗೆ ಕೆಲಸಮಾಡಬೇಕು. ತಾಲೂಕಿನ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಅನ್ನುವ ಮಾನದಂಡವನ್ನು ಅನುಸರಿಸಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ್ ಸೇರಿದಂತೆ ತಾಲೂಕು ಕಚೇರಿಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

ಮನೆ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು
ನೆಲಮಂಗಲ:
ಪಟ್ಟಣದ ಇಂದಿರಾನಗರದ ಮನೆಯೊಂದರ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಪಲ್ಸರ್ ಬೈಕನ್ನು ಸೋಮವಾರ ರಾತ್ರಿ ಕಳ್ಳರು ಕದ್ದುಕೊಂಡು ಹೋಗಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪಿಯಲ್ಲ್ತಿ ನಡೆದಿದೆ.
 ಇಂದಿರಾ ನಗರದ ವಾಸಿ ವಸಂತ್‌ಕುಮಾರ್ ಅವರು ಪ್ರತಿನಿತ್ಯದಂತೆ ತಮ್ಮ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದಾಗ ರಾತ್ರಿ ವೇಳೆ ಕಳ್ಳತನವೆಸಗಿದ್ದಾರೆ. ಬೈಕ್ ಕಳೆದುಕೊಂಡ ವಸಂತ್‌ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.