ಲಾಟರಿ ಮೂಲಕ ಮರು ಆಯ್ಕೆ
ರಾಮನಗರ: 2013-14ನೇ ಸಾಲಿನಲ್ಲಿ ತಾಲೂಕಿನ ಖಾಸಗಿ ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಗೆ ಆರ್ಟಿಇ ಯೋಜನೆಯಡಿಯಲ್ಲಿ ಆಯ್ಕೆಯಾಗದೆ ಉಳಿದ ಸೀಟುಗಳಿಗೆ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಮರು ಆಯ್ಕೆ ಮಾಡಲಾಗುವುದು.
ಮೇ 24ರಂದು ಬಿಡದಿಯ ಸೆಂಟ್ ಥಾಮಸ್ ಹಿರಿಯ ಪ್ರಾಥಮಿಕ ಶಾಲೆ, ವಿಶ್ವಸಾಯಿ ಹಿರಿಯ ಪ್ರಾಥಮಿಕ ಶಾಲೆ, ಎಸ್ಎಲ್ಎನ್ ಶಾಲೆ, ಸಿಮ್ರಾನ್ ಶಾಲೆ, ರಾಮನಗರದ ನೇತಾಜಿ ಪಾಪುಲರ್ ಶಾಲೆ, ಶಾಂತಿನಿಕೇತನ ಶಾಲೆ, ಯೂನಿವರ್ಸಲಲ್ಶಾಲೆಯಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ. ಮೇ 25 ರಂದು ಬಿಡದಿಯ ಜೆವಿಎನ್ ಪಿಎಸ್, ಬೈರಮಂಗಲದ ತ್ಯಾಗರಾಜ ಸೆಂಟ್ರಲ್ ಶಾಲೆ, ಲಕ್ಷ್ಮೀಸಾಗರದ ಸುವಿಶೇಷ ಜ್ಞಾನಪೀಠ ಶಾಲೆ, ರಾಮನಗರದ ಎಂ.ಹೆಚ್. ಶಾಲೆ, ವಾಸವಿ ಹಿರಿಯ ಪ್ರಾಥಮಿಕ ಶಾಲೆ, ತಿಲಕ್ ಶಾಲೆಗಳಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ.
ಮೇ 27 ರಂದು ಜಾಲಮಂಗಲದ ಟಿ.ಗಿರಿಯಪ್ಪ ಶಾಲೆ, ಶ್ಯಾನುಭೋಗನಹಳ್ಳಿಯ ಅರುಣೋದಯ ಪಬ್ಲಿಕ್ ಶಾಲೆ, ರಾಮನಗರದ ಹೋಲಿಕ್ರೆಸೆಂಟ್ ಶಾಲೆ. ಮೇ 28 ರಂದು ಬೈರಮಂಗಲದ ಶ್ರೀ ವಾಗ್ದೇವಿ ಶಾಲೆ, ಲಕ್ಷ್ಮೀಸಾಗರದ ಮಹರ್ಷಿ ಇಂಟರ್ ನ್ಯಾಷನಲ್ ಶಾಲೆ, ರಾಮನಗರ ಪವಿತ್ರ ರಾಷ್ಟ್ರೀಯ ವಿದ್ಯಾಲಯ ಶಾಲೆಗಳಲ್ಲಿ ಲಾಟರಿ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಆಯ್ಕೆಯಾಗಿರದ ವಿದ್ಯಾರ್ಥಿಗಳನ್ನು ಮರು ಆಯ್ಕೆ ಮಾಡಲಾಗುವುದು.
ಉಳಿಕೆ ಸೀಟುಗಳ ಬಗ್ಗೆ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ಮೇಲ್ಕಂಡ ಶಾಲಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ರಾಮನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಕೆಂಪೇಗೌಡ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

