ಮೌಕ್ತಿಕಾಂಬ ಅಮ್ಮನವರ ಕರಗ
ದೇವನಹಳ್ಳಿ: ಇಲ್ಲಿನ ವರಳುಬಾಗಿಲು ರಸ್ತೆಯಲ್ಲಿರುವ ಮೌಕ್ತಿಕಾಂಬ ದೇವಾಲಯದಲ್ಲಿರುವ ಶಕ್ತಿಸ್ವರೂಪಳಾಗಿ ನೆಲಸಿರುವ ಮೌಕ್ತಿಕಾಂಬ ಅಮ್ಮನವರ ಕರಗ ಮಹೋತ್ಸವ ಪಟ್ಟಣದ ಹಬ್ಬವಾಗಿ ವಿಜೃಂಭಣೆಯಿಂದ ಮೌಕ್ತಿಕಾಂಬ ವಹ್ನಿಕುಲ ಕ್ಷತ್ರೀಯ ಸಂಘದವರಿಂದ ಶನಿವಾರ ರಾತ್ರಿ ನಡೆಯಿತು.
ರಾತ್ರಿ ದೇವಾಲಯ ಮುಂಭಾಗದ ವೇದಿಕೆಯಲ್ಲಿ ವಿಜಯಪುರ ಲಕ್ಷ್ಮೀಪತಿ ಸಂಗಡಿಗರಿಂದ ಭಕ್ತಿಗೀತೆಗಳ ಗಾಯನ ನಡೆಯಿತು, ದೇವಾಲಯದಿಂದ ಕರಗ ಹೊರಬರುವುದಕ್ಕೆ ಮುನ್ನ ಸಾವಿರಕ್ಕೂ ಹೆಚ್ಚು ವೀರಪುರುಷರು ಕತ್ತಿಗಳನ್ನು ಹಿಡಿದು ದೇವಿಗೆ ಅವಗು ಸೇವೆ ಸಲ್ಲಿಸಿದರು. ರಾತ್ರಿ 2.30 ಕ್ಕೆ ಸರಿಯಾಗಿ ದೇವಾಲಯದಿಂದ ಹೊರಬಂದ ಕರಗ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಪ್ರಥಮವಾಗಿ ಹತ್ತಿರದಲ್ಲೇ ಇರುವ ಗರಡಿ ಮನೆ ಬಳಿ ಆಗಮಿಸಿ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮನೆಗಳಲ್ಲಿನ ಬಹುತೇಕ ಕುಟುಂಬದವರು ಪೂಜೆ ಸಲ್ಲಿಸಿದರು. ಕರಗ ಸಂಚರಿಸುವ ಎಲ್ಲ ಮನೆಗಳ ಮುಂದೆ ಸಾರಿಸಿ ರಂಗೋಲಿಗಳನ್ನು ಹಾಕಿದ್ದು ಸಾಮಾನ್ಯವಾಗಿತ್ತು. ಕರಗವನ್ನು ದೇವಾಲಯದ ಪೂಜಾರಿ ಕೃಷ್ಣಪ್ಪ ಅವರ ಪುತ್ರ ರವಿಕುಮಾರ್ ಹೊತ್ತಿದ್ದರು.
ಕರಗ ಮಹೋತ್ಸವ ಅಂಗವಾಗಿ ಬೆಂಗಳೂರಿನ ಮಂಜುನಾಥ ಸ್ವಾಮೀಜಿ, ಮಾಜಿ ಸಂಸದರಾದ ಸಿ.ನಾರಾಯಣಸ್ವಾಮಿ, ಶಾಸಕರಾದ ಪಿಳ್ಳಮುನಿಶಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಪುರಸಭಾ ಸದಸ್ಯ ವೈ.ಸಿ. ಸತೀಶ್ ಕುಮಾರ್, ಎಂ.ಮೂರ್ತಿ, ಜಿ. ವೇಣುಗೋಪಾಲ್ ಹಾಗೂ ಪುರಸಭೆ ಮಾಜಿ ಅಧ್ಯಕ್ಷರಾದ ವಸಂತಬಾಬು ಹಾಗೂ ಗಣ್ಯರು ಆಗಮಿಸಿದ್ದರು. ಎಲ್ಲ ಮುಖಂಡರಿಗೆ ದೇವಾಲಯದ ಪರವಾಗಿ ಭಕ್ತಮಂಡಳಿಯವರು ಹಾರ ಹಾಕಿ ಗೌರವಿಸಿದರು.
ಕರಗ ಮಹೋತ್ಸವ ಅಂಗವಾಗಿ ಪಟ್ಟಣದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾಕಾರ್ಯಗಳು ಮತ್ತು ಅಲಂಕಾರ ಆಯೋಜಿಸಲಾಗಿತ್ತು. ಪ್ರಮುಖವಾಗಿ ಮೌಕ್ತಿಕಾಂಬ ದೇವಿ, ಮಾರ್ಕೆಟ್ ಆಂಜನೇಯಸ್ವಾಮಿ, ಮುನೇಶ್ವರ ಸ್ವಾಮಿ, ಗಂಗಾಪರಮೇಶ್ವರಿ ಹಾಗೂ ದೊಡ್ಡಮ್ಮ ದೇವಿ ದೇವರುಗಳ ಪಲ್ಲಕ್ಕಿ ಉತ್ಸವಗಳು ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

