ಸರ್ವಮತ ಸಮನ್ವಯ ಪಾಲಿಸೋಣ
ಕ.ಪ್ರ.ವಾರ್ತೆ ಮಾಗಡಿ ಮೇ 26
ರಾಮಾನುಜಚಾರ್ಯರು ಬೋಧಿಸಿದ ಸರ್ವಮತ ಸಮನ್ವಯವನ್ನು ನಾವೆಲ್ಲರೂ ಪಾಲಿಸೋಣ ಎಂದು ಮೇಲುಕೋಟೆ ಮನವಾಳ, ಮಾಮುನಿಗಲ್ ಮಠದ ಶಟಗೋಪ ರಾಮಾನುಜ ಜೀಯರ್ ಕರೆ ನೀಡಿದರು.
ಅವರು ಶ್ರೀರಂಗ ಸೇವಾ ಟ್ರಸ್ಟ್ ಏರ್ಪಡಿಸಿದ್ದ ನೂತನ ವಜ್ರಖಚಿತ ಚಿನ್ನದ ಕಿರೀಟಧಾರಣೆ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭವನ್ನು ಜೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಧರ್ಮಕ್ಕೆ ಭಾರತ ದೇಶ ಹೆಸರಾಗಿದೆ. ಧರ್ಮಕ್ಕೆ ಜೀವತುಂಬಿದ್ದು ಭಾರತೀಯರು. ಅತಿಥಿ ಸತ್ಕಾರ ಹೆಸರಾದವರು ಕರ್ನಾಟಕದವರು. ಜನಸೇವೆಗೆ ಜಾತಿಗೋಡೆ ಬೇಡ. ಇಲ್ಲಿನ ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದ ಧಾರ್ಮಿಕ ಆಚರಣೆ, ರಂಗನ ಮುಡಿಗೆ ವಜ್ರಖಚಿತ ಕಿರೀಟ ಧಾರಣೆ, ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯವಾದುದು. ಟಸ್ಟ್ನೊಂದಿಗೆ ಪ್ರತಿಯೊಬ್ಬ ಭಕ್ತರು ಕೈಜೋಡಿಸಿ ಸೇವಾ ಕೈಂಕರ್ಯಕ್ಕೆ ಮುಂದಾಗಬೇಕು ಎಂದು ಆಶೀರ್ವಚನದಲ್ಲಿ ತಿಳಿಸಿದರು.
ಹಲವು ವೈಶಿಷ್ಟ್ಯ: ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದ ಮಲಯ ಶಾಂತವೀರ ಶಿವಾಚಾರ್ಯಸ್ವಾಮೀಜಿ ಮಾತನಾಡಿ ಭರತ ಖಂಡ ಹಲವು ವೈಶಿಷ್ಟಗಳನ್ನು ಕಾಪಾಡಿಕೊಂಡು ಬಂದಿದೆ. ಜಗತ್ತಿನ ಸೃಷ್ಟಿಕರ್ತ ದೇವರು. ಭಗವಂತ ಅಲಂಕಾರ ಪ್ರಿಯ, ದೇವರನ್ನು ಹುಡುಕಿಕೊಂಡು ಸಂಪತ್ತು ಬಂದಿದೆ. ದೇವರ ರೂಪದಲ್ಲಿ ಜನ ಸೇವೆಯನ್ನು ಶ್ರೀರಂಗ ಸೇವಾ ಟ್ರಸ್ಟ್ ಮೂಲಕ ಮಾಡಿಕೊಂಡು ಬಂದಿದೆ. ಭಗವಂತನ ದರ್ಶನ ಪಡೆದರೆ ಮುಕ್ತಿ ಸಿಗುತ್ತದೆ. ಆದರೆ ಸ್ವಾರ್ಥ ಭಕ್ತಿ ಬೇಡ, ಜನಸೇವೆ ಮಾಡುವ ಮೂಲಕ ದೇವರ ಪ್ರೀತಿಗೆ ಪಾತ್ರರಾಗಬೇಕು ಎಂದರು.
ಶ್ಲಾಘನೀಯ: ಶಾಸಕ ಎಚ್.ಸಿ. ಬಾಲಕೃಷ್ಣ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಟ್ರಸ್ಟ್ ವತಿಯಿಂದ ಧಾರ್ಮಿಕ ಸೇವೆಯ ಜತೆಗೆ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು. ಈಗಾಗಲೇ ಜಲಕ್ಷಾಮ ತಲೆದೋರಿದ್ದು, ನೀರಿನ ಸಮಸ್ಯೆ ಉಂಟಾಗದಂತೆ ಅಲಲ್ಲಿ ನಾಲ್ಕೈದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯ ಕ್ರಮ ವಹಿಸುತ್ತೇನೆ. ದೇಗುಲಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಿನಿವಾಸ ನಿರ್ಮಾಣಕ್ಕೆ 1 ಕೋಟಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು. ಶ್ರೀರಂಗ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ್ ಅಯ್ಯಂಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಶ್ರೀರಂಗನಾಥಸ್ವಾಮಿ ಮೂಲ ದೇವರ ಮುಡಿಗೆ ವಿಷ್ಟು ಸಹಸ್ರನಾಮ ಪಾರಾಯಣದೊಂದಿಗೆ ವಜ್ರಖಚಿತ ಚಿನ್ನದ ನೂತನ ಕಿರೀಟಧಾರಣೆ ನೆರವೇರಿತು. ಶ್ರೀರಂಗ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸಿದರು. ಅಂಧ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥಸ್ವಾಮೀಜಿ, ಬೆಂಗಳೂರು ಓಂಕಾರ ಆಶ್ರಮದ ಪೀಠಾಧಿಪತಿ ಮಧುಸೂದನಾನಂದ ಸ್ವಾಮೀಜಿ, ರಾಮಕೃಷ್ಣ ಯೋಗಾಶ್ರವುದ ಸ್ವಾಮಿಯೋಗಾನಂದ, ಭವತಾರಣಿ ಆಶ್ರಮದ ಮಾತಾ ವಿವೇಕಾಮಯಿ, ಗುಮ್ಮಸಂದ್ರ ಮಠದ ಚಂದ್ರಶೇಖರಸ್ವಾಮಿ, ರಾಮಚಂದ್ರ ಭಟ್ ಕೋಟೆ ಮನೆ, ಜಿ.ಪಂ. ಅಧ್ಯಕ್ಷ ಕೆ.ಮುದ್ದುರಾಜ ಯಾದವ್, ತಹಸೀಲ್ದಾರ್ ಡಾ.ಹರೀಶ್ ನಾಯಕ್, ಕೆಪಿಸಿಸಿ ಸದಸ್ಯ ಎ.ಮಂಜ, ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ್, ಮಹೇಶ್, ನಾಗೇಂದ್ರ, ರಾಜಲಕ್ಷ್ಮೀ ಹೀನಾ ಸತೀಶ್, ಶ್ರೀರಂಗ, ಶಾಂತಿ ಹರೀಶ್, ಪ್ರಕಾಶ್, ಪ್ರಭು ನಿಜಗುಣ, ನಾರಾಯಣಸ್ವಾಮಿ, ಎಸ್.ಸುನೀಲ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

