ಜೆಡಿಎಸ್ ಗೆಲವಿಗೆ ಮನವಿ
ಸೂಲಿಬೆಲೆ: ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಗೆಲವಿಗೆ ಮತದಾರರು ಕೈ ಜೋಡಿಸಬೇಕು ಎಂದು ಮಾಲೂರು ಶಾಸಕ ಮಂಜುನಾಥಗೌಡ ಮನವಿ ಮಾಡಿದರು.
ಇಲ್ಲಿನ ಜನತಾ ಕಾಲೋನಿಯ ಒಂದನೇ ಸರ್ಕಲ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತ ಯಾಚನೆ ಸಮಾರಂಭದಲ್ಲಿ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಕ್ಷ ಯಾವುದು ಎನ್ನುವದು ಮುಖ್ಯವಲ್ಲ. ಕುಮಾರಣ್ಣ ನಮ್ಮಗೆ ಮುಖ್ಯವಾಗಬೇಕು. ಹೊಸಕೋಟೆ ಕ್ಷೇತ್ರದಿಂದ ಜೆಡಿಎಸ್ಗೆ 30 ಸಾವಿರ ಮತ ಲೀಡ್ ಕೊಡುತ್ತೇವೆ ನೀಡುತ್ತೇವೆ ಎಂದು ನಾನು ಮತಕೊಟ್ಟಿದ್ದೇನೆ. ಇದನ್ನು ಉಳಿಸಿಕೊಳ್ಳಲು ಮತದಾರರು ಕೈಜೋಡಿಸಬೇಕು. ಕುಮಾರಣ್ಣ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆಲ್ಲಲ್ಲಿಲ್ಲ ಎಂದರೆ
ನಾನು ರಾಜಕೀಯನೇ ಮಾಡೋಲ್ಲ. ಏ.13 ರಂದು ಚಿಕ್ಕತಿರುಪತಿಯಿಂದ ಹೊಸಕೋಟೆ, ಸೂಲಿಬೆಲೆ ಮಾರ್ಗವಾಗಿ ರೋಡ್ ಶೋ ನಡೆಯಲಿದ್ದು, ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.
ಬೈಕ್ ರ್ಯಾಲಿ ನಡೆಯಲಿದೆ. ಕೋಲಾರ ಜಿಲ್ಲೆ ಜವಾಬ್ದಾರಿ ಹೊತ್ತಿರುವ ಕಾರಣ ತಾಲೂಕಿನ ಪ್ರತಿ ಗ್ರಾಮಕ್ಕೆ ಬರಲು ಆಗೋಲ್ಲ. ಈ ಬಾರಿ ಕೋಲಾರದಲ್ಲಿ ಮುನಿಯಪ್ಪ ಸೋಲಿಸಲು ಜೆಡಿಎಸ್ ವಿಶ್ವಾಸದಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದೆ. ಕೋಡಹಳ್ಳಿ ಮನೆತನದ ಮೇಲೆ ಇಟ್ಟ ಪ್ರೀತಿಯನ್ನೇ ಕುಮಾರಣ್ಣನ ಮೇಲಿಡಿ ಎಂದು ಮನವಿ ಮಾಡಿದರು. ಸ್ಥಳೀಯ ಮುಖಂಡರು ಹಾಜರಿದ್ದರು.
'ಲೂಟಿಗೆ ಕುಮ್ಮಕ್ಕು'
ರಾಮನಗರ: ರಾಜ್ಯಾದ್ಯಂತ ಎಲ್ಲ ಪ್ರಮುಖ ನದಿ ಪಾತ್ರಗಳಲ್ಲೂ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗಿದ್ದು, ಪ್ರಾಕೃತಿಕ ಸಂಪತ್ತಿನ ಲೂಟಿಗೆ ಸಿಎಂ ಸಿದ್ದರಾಮಯ್ಯ ಕುಮ್ಮಕ್ಕೇ ಕಾರಣ ಎಂದು ಬೆಂಗಳೂರು ಗ್ರಾಮಾಂತರ ಸ್ವತಂತ್ರ ಅಭ್ಯರ್ಥಿ, ಹೋರಾಟಗಾರ ಸಿದ್ದರಾಮ ಹೆಗ್ಗಡೆ ಆರೋಪಿಸಿದರು.
ಮಿತಿಮೀರಿದ ಅಕ್ರಮ ಮರಳುಗಾರಿಕೆಯಿಂದ ನದಿಗಳಷ್ಟೆ ಬರಿದಾಗಿಲ್ಲ. ಕೆರೆ, ಕಟ್ಟೆಗಳೂ ಬರಿದಾಗಿವೆ. ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಹಾಹಾಕಾರ ಉಂಟಗಿದೆ. ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಸಿದ್ದರಾಮಯ್ಯ ಅವರೊಬ್ಬ ತೊರೆಗಳ್ಳ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ಲೂಟಿ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಸಿದ್ದರಾಮ ಹೆಗ್ಗಡೆ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

