ಬೀದರ್

ದೇಶಭಕ್ತರ ಆದರ್ಶ ಪಾಲಿಸಿ: ಶರಣರ ಸಲಹೆ

Published On :

ಬೀದರ್: ಸಂಘಟನೆಗಳು ದೇಶ ಭಕ್ತರ ಆದರ್ಶಗಳನ್ನು ಪಾಲಿಸಿದರೆ ಮಾತ್ರ ಕನಸು ನನಸಾಗಲು ಸಾಧ್ಯ ಎಂದು ಕೌಠಾ ಬಸವ ಯೋಗಾಶ್ರವುದ ಸಿದ್ದರಾಮ ಶರಣ ಬೆಲ್ದಾರ್ ನುಡಿದರು.
  ನಗರದ ರಂಗಮಂದಿರದಲ್ಲಿ ಗುರುವಾರ ರಾಜ್ಯ ಮಟ್ಟದ ಯುವ ಕ್ರಾಂತಿ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಯುವಕರು ಇಂದಿನ ಆಧುನೀಕರಣದ ಹಂಗಿನಲ್ಲಿ ಸಿಕ್ಕು ಬಿದ್ದು ಅಹಿತಕರ ಸುಖದಲ್ಲಿ ಅಡ್ಡದಾರಿ ಹಿಡಿದು ಮಕ್ಕಳು, ಮಹಿಳೆಯರಿಗೆ ಕಂಟಕಪ್ರಾಯವಾಗಿದ್ದಾರೆ. ಇಂತಹ ಸಮಯದಲ್ಲಿ ಯುವಕ್ರಾಂತಿ ಸಂಘಟನೆ ಜನ್ಮ ತಾಳಿದ್ದು ಸಂತೋಷದ ಸಂಗತಿ ಎಂದರು.
ಇಂದು ರಾಷ್ಟ್ರ ದುರ್ಬಲವಾಗುತ್ತಿದೆ. ಮತೀಯ ಗಲಭೆ, ಧರ್ಮ ಆಧಾರಿತ ಗಲಭೆಗಳು, ಆರ್ಥಿಕ ಏರುಪೇರು, ಪ್ರಜಾಪ್ರಭುತ್ವ ಅಧೋಗತಿಯತ್ತ ಸಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ದೇಶದ ಏಕತೆ, ಸಂರಕ್ಷಣೆ ಅವಶ್ಯಕತೆಯಾಗಿದೆ.
ಪ್ರಜಾಪ್ರಭುತ್ವದ ಸಂರಕ್ಷಣೆಯೇ ಇಲ್ಲ: ಇಂದು ನಿಜವಾದ ಸ್ವಾಮಿ ವಿವೇಕಾನಂದರಾಗಬೇಕಾಗಿದೆ. ನಿಜ ಸ್ವಾಮಿಯ ಸ್ವರೂಪ ಮರೆಮಾಚುತ್ತಿದ್ದಾರೆ. ಅವರ ಹೆಸರಿನಲ್ಲಿ ಕೆಲವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದ ಅವರು, ಸ್ವಾಮಿಗಳು ರಾಷ್ಟ್ರದ ಭದ್ರತೆ, ಸಮೃದ್ಧತೆ, ಅಖಂಡತೆ ಎಂದಿದ್ದರು. ಆದರೆ ಇಂದು ಪ್ರಜಾಪ್ರಭುತ್ವದ ಸಂರಕ್ಷಣೆಯೇ ಇಲ್ಲದಂತಾಗಿದೆ ಎಂದರು.
  ದೇಶಕ್ಕೆ ಇಂದು ನಿಸ್ವಾರ್ಥ ಸಂಘಟಕರ ಅವಶ್ಯಕತೆ ಇದೆ. ಯಾರಿಗೆ ವಿವಿಧ ರೀತಿಯ ಆಸೆಗಳಿರುತ್ತವೆ ಅವರಿಗೆ ದೇಶಕ್ಕೆ ಯಾವುದೇ ಕೊಡುಗೆ ನೀಡಲು ಆಗಲ್ಲ. ಆಸೆಗಳಿದ್ದರೆ ಅದನ್ನು ತೆಗೆದು ಬೀಸಾಡಬೇಕೆಂದು ಸಲಹೆ ನೀಡಿದರು.
ರಾಜಕೀಯ ದಬ್ಬಾಳಿಕೆ: ಸಂಘಟನೆ ಜಾತಿ- ಧರ್ಮ, ಭೇದ- ಭಾವ ಇರದೆ ಎಲ್ಲರನ್ನೂ ಸಮನಾಗಿ ಕಾಣಬೇಕು. ಅಲ್ಲದೆ ಮಾತು ಮನಸ್ಸು ಒಂದಾಗಿರಬೇಕು ಎಂದ ಅವರು, ಇಂದಿನ ರಾಜಕೀಯ ದಬ್ಬಾಳಿಕೆ ನಡುವೆ ಸಂಘಟನೆ ಕಟ್ಟುವುದು ಕಷ್ಟಕರವಾಗಿದೆ ಎಂದರು.
ವಾಲಿಗೆ ಕ್ರಾಂತಿ ಪುರುಷ ಪ್ರಶಸ್ತಿ ಪ್ರದಾನ: ನೇತೃತ್ವ ವಹಿಸಿದ್ದ ಡಾ. ಬಸವಲಿಂಗ ಪಟ್ಟದ್ದೇವರಿಗೆ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರಿಗೆ ಕ್ರಾಂತಿ ಪುರುಷ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
  ಹುಮನಾಬಾದ್ ಉರ್ಸ್ವ ಮುಕ್ಕಿನಾಥ ಮಹಾಮಠದ ಶಂಕರಲಿಂಗ ಸ್ವಾಮಿ, ಡಾ. ರಾಜಶೇಖರ ಸ್ವಾಮಿ ಗೋರ್ಟಾ, ಮಲ್ಯಗುಡ್ಡ ಸಂಗಮದ ಬಸವಲಿಂಗ ಅವಧೂತ ಮಹಾರಾಜ, ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಗುಂಡು ರೆಡ್ಡಿ, ಮಾಜಿ ಶಾಸಕ ಎಂ.ಜಿ. ಮುಳೆ, ಜಿಪಂ ಮಾಜಿ ಅಧ್ಯಕ್ಷ ನಸಿಮೊದ್ದೀನ್ ಪಟೇಲ್, ಜಿ.ಎಂ. ಯಾತನೂರ್, ಜಗನ್ನಾಥ ಜಮಾದಾರ, ಬಿಎಸ್ಸೆಸ್ಕೆ ಅಧ್ಯಕ್ಷ ಸಂಜಯ ಖೇಣಿ, ಮಾಣಿಕರೆಡ್ಡಿ, ಹುಮನಾಬಾದ್- ಬಸವಕಲ್ಯಾಣ ತಾಪಂ ಎಲ್ಲ ಸದಸ್ಯರು, ಎಪಿಎಂಸಿ ಅಧ್ಯಕ್ಷ ಸಿದ್ರಾಮಪ್ಪ, ಉದಯ ಪಾಟೀಲ್ ಗುಲ್ಬರ್ಗ, ಜಗನ್ನಾಥರೆಡ್ಡಿ ಕಿಟ್ಟಾ, ವೀರಣ್ಣ ಕಾರಭಾರಿ, ಅರವಿಂದ ಅರಳಿ, ಸಾವಿತ್ರಿ ಪ್ರಕಾಶ ಹಾಗೂ ಜಿಲ್ಲಾಧ್ಯಕ್ಷ ಶ್ರೀಮಂತ ಸಪಾಟೆ ಮತ್ತಿತರರು ಇದ್ದರು.
  ಇದಕ್ಕೂ ಮುನ್ನ ನಗರದ ಶಹಾಪುರಗೇಟ್‌ನಿಂದ ಆರಂಭವಾದ ಮೆರವಣಿಗೆಯು ನಗರದ ಮುಖ್ಯ ರಸ್ತೆಗಳ ಮೂಲಕ ರಂಗಮಂದಿರ ತಲುಪಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.