ಶೋಷಣೆ ದೂರ ಮಾಡಲು ಬಸವ ತತ್ವದಲ್ಲಿ ಸರಳ ಪರಿಹಾರ
ಬೀದರ್: ಮೇಲು ಕೀಳಿನ ವೈರುದ್ಯಕ್ಕೆ ಅತ್ಯಂತ ಸರಳವಾದ ಪರಿಹಾರ ಒದಗಿಸಿದ್ದು, ಮಹಾತ್ಮ ಬಸವೇಶ್ವರರು ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್ ನುಡಿದರು.
ತಾಲೂಕಿನ ಕಮಠಾಣಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಸವ ಜಯಂತಿ ಆಚರಣೆಯ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಜಾತಿ- ಜನಾಂಗ, ಗಂಡು- ಹೆಣ್ಣು, ಬಡವ- ಬಲ್ಲಿದನೆಂಬ ಭೇದಕ್ಕೆ ಮದ್ದು ನೀಡಿದ ಮಂತ್ರ ಪುರುಷ ಬಸವಣ್ಣನವರಾಗಿದ್ದರು. ಅವರ ತತ್ವವನ್ನು ಆಚರಣೆಯಲ್ಲಿ ತಂದರೆ ಪ್ರಸಕ್ತ ಎಲ್ಲ ಸಮಸ್ಯೆಗಳಿಗೆ ಪರಿಹಾರ ತನ್ನಿಂದ ತಾನೆಯೇ ದೊರೆಯುತ್ತದೆ ಎಂದರು.
ಚಿತ್ರದುರ್ಗದ ಎಸ್ಜೆಎಮ್ ವಿದ್ಯಾಪೀಠದ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಸುರೇಶ ಚನ್ನಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಬೇಕು. ಇಂದಿನ ಜ್ಞಾನದ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ನಮ್ಮ ಜ್ಞಾನ ವೃದ್ಧಿಸಿಕೊಳ್ಳದಿದ್ದರೆ ಕಾಲದ ಓಟದಲ್ಲಿ ನಾವು ಹಿಂದೆ ಬೀಳಬೇಕಾಗುತ್ತದೆ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಚನ್ಮಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಪ್ರಾಂಶುಪಾಲರಾದ ಚನ್ನಬಸವ ಹೇಡೆ ಅಧ್ಯಕ್ಷತೆ ವಹಿಸಿದರು. ಕುವೆಂಪು ಪತ್ತಿನ ಸೌಹಾರ್ದ ಸಹಕಾರಿಯ ನಿರ್ದೇಶಕ ಮಾಣಿಕಪ್ಪ ಖಾಶೆಂಪುರ, ಶಂಕರ ಜೋಗಿ, ಪ್ರಕಾಶ ಜಿ. ಸಂತೋಷ ಚನ್ನವೀರೆ, ಸಪ್ನಾ, ಜ್ಯೋತಿ ಸತ್ಯವಾನ್, ಜಗನ್ನಾಥ, ಗೀತಾ ಇದ್ದರು. ಸುರೇಶ ಮುದುಕಣ್ಣನವರ ಸ್ವಾಗತಿಸಿ, ಪ್ರಶಾಂತ ಹೊನ್ನಾ ನಿರೂಪಿಸಿ, ಗೌತಮ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

