ಸಂಸ್ಕೃತಿ ಉಳಿಸಲು ಯುವಜನ ಮೇಳಗಳು ಅವಶ್ಯ: ರೇಖಾ
ಬೀದರ್: ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಲು ಯುವಜನ ಮೇಳಗಳು ಅವಶ್ಯ ಎಂದು ಜಿಪಂ ಸದಸ್ಯೆ ರೇಖಾ ಮಲ್ಕಾಪುರೆ ನುಡಿದರು.
ತಾಲೂಕಿನ ಚಿಮಕೋಡ ಗ್ರಾಮದಲ್ಲಿ ಜಿಲ್ಲಾಮಟ್ಟದ ಯುವಜನ ಮೇಳ ಉದ್ಘಾಟಿಸಿ ಮಾತನಾಡಿ, ದೇಶದ ಸಂಸ್ಕೃತಿ, ಯುವಕರಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಹೊರತರುವ ಉದ್ದೇಶಕ್ಕಾಗಿ ಮೇಳ ಅವಶ್ಯ ಎಂದರು.
ಯುವ ಮುಖಂಡ ಸೋಮನಾಥ ಕಂದಗೂಳೆ ಮಾತನಾಡಿ, ದೇವಿದಾಸ ಚಿಮಕೋಡೆ ಹಾಗೂ ವಿಜಯಕುಮಾರ ಸೋನಾರೆ ಇವರು ತಮ್ಮ ಕಲಾ ಪ್ರತಿಭೆಯನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜಿಲ್ಲಾಮಟ್ಟದ ಯುವಜನ ಮೇಳಕ್ಕೆ ಇನ್ನು ಹೆಚ್ಚಿನ ಪ್ರಚಾರ ಆಗಬೇಕಾಗಿದೆ. ಅಂದಾಗ ಮಾತ್ರ ಮೇಳವು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೇ ಇಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ. ಭಾಗವಹಿಸಬೇಕೆಂದು ಯುವಕರಲ್ಲಿ ಮನವಿ ಮಾಡಿದ್ದರು.
ಜಿಲ್ಲಾ ಮಟ್ಟದ ಯುವಜನ ಮೇಳದ ಅಂಗವಾಗಿ ಚಿಮಕೋಡ ಗ್ರಾಮದಲ್ಲಿ ಏರ್ಪಡಿಸಲಾದ ಜಾಥಾಗೆ ಸಂಸ್ಕೃತಿಕ ಹವ್ಯಾಸಿ ಯುವಕ ಸಂಘದ ಅಧ್ಯಕ್ಷ ವಿಜಯಕುಮಾರ ಸೋನಾರೆ ಉದ್ಘಾಟಿಸಿದರು.
ಜಾಥಾವು ಗ್ರಾಮದ ಯಲ್ಲಾಲಿಂಗೇಶ್ವರ ಪ್ರೌಢಶಾಲೆಯಿಂದ ಆರಂಭಗೊಂಡು ಬಸವೇಶ್ವರ ವೃತ್ತ, ಕನಕದಾಸ ವೃತ್ತ, ಗ್ರಾಪಂ ಕಚೇರಿ ಮೂಲಕ ಮತ್ತೆ ಪ್ರೌಢಶಾಲೆಗೆ ಮರಳಿ ಮುಕ್ತಾಯವಾಯಿತು.
ಡಾ. ಭರಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಗುಣವಂತರಾವ ಪಾಟೀಲ್, ನೀಲಮ್ಮ ಜಾಂಪಾಡೆ, ಸೂರ್ಯಕಾಂತ ಪಾಟೀಲ್, ತಿಪ್ಪಣ್ಣ ಭೋಸ್ಲೆ, ಚಂದ್ರಕಾಂತ ಚೆನ್ನಪ್ಪನೋರ, ಶಾಲಿವಾನ, ಯುವಜನ ಸೇವಾಧಿಕಾರಿ ಜೆ.ಎಸ್. ಕ್ಷೀರಸಾಗರ, ಕಲಾವಿದರಾದ ದೇವಿದಾಸ ಚಿಮಕೋಡೆ, ಸುನೀಲ ಕಡ್ಡೆ, ಯಶ್ವಂತ ಕುಚಬಾಳ, ಯೇಸುದಾಸ ಹಳೆಂಬರ, ಮಾರುತಿರಾವ ಚಾಂಬೋಳ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

