ಬೀದರ್

ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ ಆರೋಗ್ಯ ಮೇಳ

Published On :

ಬೀದರ್: ತಾಲೂಕಿನ ಅಂಗನವಾಡಿ ಕಾರ್ಯಕರ್ತರಿಗೆ ಆಯುಷ್ ಆರೋಗ್ಯ ಮೇಳ ಇತ್ತೀಚೆಗೆ ನಗರದಲ್ಲಿ ಜರುಗಿತು.
  ಆಯುಷ್ ಇಲಾಖೆಯ ಐಇಸಿ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಸಕ್ತ ಸಾಲಿನಲ್ಲಿ ಆಯೋಜಿಸಲಾದ ಮೇಳದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಹಾಫೀಜ್ ಅಶ್ಫಾಕ್ ಅಹ್ಮದ ಮಾತನಾಡಿ, ಇಂದಿನ ದಿನಗಳಲ್ಲಿ ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಹಾಗೂ ಭಾರತೀಯ ಪುರಾತನ ಚಿಕಿತ್ಸಾ ಪದ್ಧತಿಯಾದ ಆಯುಷ್ ಚಿಕಿತ್ಸಾ ಪದ್ಧತಿಯ ಮಹತ್ವದ ಬಗ್ಗೆ ತಿಳಿಸಿದರು.
  ವಿವಿಧ ಸಂಪನ್ಮೂಲ ವ್ಯಕ್ತಿಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಗರ್ಭವತಿ ತಾಯಿ ಹಾಗೂ ಮಗುವಿನ ಆರೋಗ್ಯದ ಕುರಿತು ಅಮೂಲಾಗ್ರವಾಗಿ ಉಪನ್ಯಾಸ ನೀಡಿದರು. ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಆಗಮಿಸಿದ ಡಾ. ಅಶೋಕ ಸಾಳ್ವೆ ಅವರು ಆಹಾರ ಪದ್ಧತಿಯ ಕುರಿತು ತಿಳಿಸಿದರು. ಡಾ. ಬಾಬಾ ಸಾಹೇಬ್ ಗಡ್ಡೆ ಯೋಗದ ಮಹತ್ವ ಕುರಿತು ತಿಳಿಸಿದರು.
  ಡಾ. ರುದ್ರಯ್ಯ ಲೋಣಿಮಠ ಮನೆ ಮದ್ದು ಹಾಗೂ ಸ್ಥಳೀಯವಾಗಿ ಸಿಗುವ ಔಷಧ ಸಸ್ಯಗಳ ಮಹತ್ವ ಹಾಗೂ ಉಪಯೋಗದ ಬಗ್ಗೆ ತಿಳಿಸಿದರು. ಸದರಿ ಮೇಳದಲ್ಲಿ ಹಿರಿಯ ವೈದ್ಯರಾದ ಡಾ. ಶಾರದಾ ಸಾಂಬ್ರೇಕರ್, ಜಿಲ್ಲಾ ನೋಡಲ್ ಅಧಿಕಾರಿ ಡಾ. ಶಿವಕುಮಾರ ನೇಳಗೆ ಅಲ್ಲದೇ ಜಿಲ್ಲೆಯ ಎಲ್ಲ ವೈದ್ಯರು ಹಾಗೂ ಜಿಲ್ಲಾ ಆಯುಷ್ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಜಲ ನಿರ್ಮಲ ಯೋಜನೆಯ ಯಾಜನಾ ನಿರ್ದೇಶಕರಾದ ಸೂರ್ಯಕಾಂತ ಮೇತ್ರೆ ಇದ್ದರು. ಡಾ. ಶಶಿಕಲಾ ಚಿಂಚಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.