ಪಂಪ್ಸೆಟ್ಗಳಿಗೆ ವಿದ್ಯುತ್ ಖೋತಾ: ಪ್ರತಿಭಟನೆ
ಕ.ಪ್ರ.ವಾರ್ತೆ, ಹುಮನಾಬಾದ್, ಮಾ.16
ರೈತರ ಪಂಪ್ಸೆಟ್ಗಳಿಗೆ ದಿನದ 3 ಗಂಟೆಯೂ ವಿದ್ಯುತ್ ನೀಡದೆ ಇರುವುದನ್ನು ವಿರೋಧಿಸಿ ವಿವಿಧ ಗ್ರಾಮಗಳ ರೈತರು ತಾಲೂಕಿನ ಮನ್ನಾಏಖೆಳ್ಳಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಶನಿವಾರ ಮಿಂಚಿನ ಪ್ರತಿಭಟನೆ ನಡೆಸಿದರು.
ರೈತರು ದೇಶದ ಬೆನ್ನೆಲಬು ಎಂದು ಹೇಳಿಕೊಳ್ಳುವ ಸರ್ಕಾರಗಳು ರೈತರ ಪಂಪ್ಸೆಟ್ಟಿಗೆ ಕನಿಷ್ಠ ಮೂರು ಗಂಟೆಯಾದರೂ ವಿದ್ಯುತ್ ನೀಡದೆ ರೈತರೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡುತ್ತಿವೆ. ಜೆಸ್ಕಾಂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಅವರ ವಿರುದ್ಧ ರೈತರು ಕಿಡಿ ಕಾರಿದರು. ಅಲ್ಲದೆ, ಜೆಸ್ಕಾಂ ಕಚೇರಿಯಲ್ಲಿ ಕೆಲ ಆಸನಗಳನ್ನು ಧ್ವಂಸಗೊಳಿಸಿರುವ ಘಟನೆಯೂ ನಡೆದಿದೆ.
ಕಳೆದ ನಾಲ್ಕೈದು ದಿನಗಳಿಂದ ಹಗಲು ಮತ್ತು ರಾತ್ರಿ ಸೇರಿ ಕೇವಲ ಮೂರು ಗಂಟೆ 3 ಫೇಸ್ ವಿದ್ಯುತ್ ನೀಡದೆ ರೈತರಿಗೆ ತೀವ್ರ ತೊಂದರೆ ನೀಡಲಾಗುತ್ತಿದೆ. ಹಗಲು ರಾತ್ರಿ ಎನ್ನದೆ ವಿದ್ಯುತ್ ಬರುವಿಕೆಗೆ ತೋಟದಲ್ಲಿ ಕಾಯುವ ಪ್ರಸಂಗ ಎದುರಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಗದ್ದಲ ವಾತಾವರಣ: ತಾಲೂಕಿನ ತಾಳಮಡಗಿ, ಮಂಗಲಗಿ ಸೇರಿದಂತೆ ಮತ್ತಿತರ ಗ್ರಾಮಗಳ ರೈತರ ಸುಮಾರು 10 ಗಂಟೆಯಿಂದ 1 ಗಂಟೆವರೆಗೆ ನೂರಾರು ರೈತರು ಪ್ರತಿಭಟನೆ ನಡೆಸಿದರು. ಕೆಲ ಕಾಲ ಗದ್ದಲ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಶಾಸಕ ರಾಜಶೇಖರ ಪಾಟೀಲ್ ಭೇಟಿ ನೀಡಿ, ರೈತರ ಹಾಗೂ ಜೆಸ್ಕಾಂ ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಿದರು. ಜೆಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲೆಯಾದಂತ್ಯ ವಿವಿಧ ಗ್ರಾಮಗಳಿಗೆ ನೀಡುತ್ತಿರುವ ವಿದ್ಯುತ್ ಮನ್ನಾಏಖೆಳ್ಳಿ ಸುತ್ತಮುತ್ತಲಿನ ಗ್ರಾಮಗಳಿಗೂ ಒದಗಿಸಬೇಕೆಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.
ಕಡೆಗಣನೆ ಸಾಧ್ಯವಿಲ್ಲ: ರೈತರ ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮುಕಿ ನಡೆಯಿತು ಶಾಸಕ ಪಾಟೀಲ್ ಮಧ್ಯಸ್ಥಿಕೆ ವಹಿಸಿ, ಯಾವುದೇ ಕಾರಣಕ್ಕೂ ರೈತರನ್ನು ಕಡೆಗಣಿಸಲು ಸಾಧ್ಯವಿಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವುದು ಅನಿವಾರ್ಯ. ಮುಂದಿನ ದಿನಗಳಲ್ಲಿ ರೈತರ ಪಂಪಸೆಟ್ಟಿಗಳಿಗೆ ಕನಿಷ್ಠ ಐದರಿಂದ ಏಳು ಗಂಟೆಯಾದರೂ, ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದಲ್ಲಿ ರೈತರು ಕಂಗಾಲಾಗುತ್ತಾರೆ. ಈ ಸಂಬಂದ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.
ರೈತರ ಮುಖಂಡರಾದ ಶ್ರೀಮಂತ ಪಾಟೀಲ್, ಮಾಣಿಕರಾವ ಹಾವಶಟ್ಟಿ, ನಾರಾಯಣರಾವ್ ಬಿರಾದಾರ್, ಮಾಣಿಕಪ್ಪಾ ತಂಬಾಕೆ, ಸಲಾಮ್ ಪಾಶಾ, ಶರಣಪ್ಪಾ, ಮಾಣಿಕಪ್ಪ ಕುಂದನ್, ಶರೀಫ ಪಟೇಲ್, ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಶಿಂದೆ, ಕಾಶಿನಾಥ, ಪಿಎಸ್ಐ ಬಸವರಾಜ ಫುಲಾರಿ ಸೇರಿದಂತೆ ರೈತರು, ಅಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

