ಮೂಲ ಸೌಲಭ್ಯವಂಚಿತ ಮಲಘಾಣ
ಆಲಮೇಲ: ದೇವಣಗಾಂವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಮಲಘಾಣ ಗ್ರಾಮ ಹತ್ತು ಹಲವು ಮೂಲ ಸೌಲಭ್ಯದಿಂದ ವಂಚಿತವಾಗಿದೆ.
9 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಸಮಸ್ಯೆಗಳ ಮಹಾಪೂರವೇ ಕಾಣ ಸಿಗುತ್ತದೆ. ಪ್ರತಿ ಹಂತದಲ್ಲೂ ಇಲ್ಲಿನ ಗ್ರಾಮಸ್ಥರು ಪರದಾಡಬೇಕಾದ ಸ್ಥಿತಿ ಇದೆ.
ಗ್ರಾಮದಲ್ಲಿ ಮುಖ್ಯವಾಗಿ ಮಹಿಳಾ ಶೌಚಾಲಯ ಇಲ್ಲ. ಶೌಚಾಲಯಕ್ಕೆಂದೆ ಮೀಸಲಾದ ಪ್ರದೇಶವಿದೆ. ಆದರೆ, ಅದಕ್ಕೆ ತಡೆಗೋಡೆ ನಿರ್ಮಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಇನ್ನು ಇಲ್ಲಿನ ರಸ್ತೆಗಳು ಆ ದೇವರಿಗೇ ಪ್ರೀತಿ ಎನ್ನುವಷ್ಟರ ಮಟ್ಟಿಗೆ ಇದೆ. ಅಲ್ಲಲ್ಲಿ ಸಿಮೆಂಟ್ ರಸ್ತೆಯನ್ನು ಮಾಡಲಾಗಿದೆ. ಆದರೆ, ಕಾಮಗಾರಿ ಕಳಪೆಯಾಗಿದ್ದರಿಂದ ಅವೂ ಸಹ ಉಪಯೋಗಕ್ಕೆ ಬರುತ್ತಿಲ್ಲ. ಮಳೆಗಾದಲ್ಲೂ ಸಂಚಾರ ಸಂಪೂರ್ಣ ಅಸ್ಥವ್ಯಸ್ಥ ವಾಗಿರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಪ್ರತಿ ಗುರುವಾರ ಗ್ರಾಮದ ಕೊಳಚೆ ಪ್ರದೇಶದಲ್ಲಿಯೆ ಸಂತೆ ನಡೆಯುತ್ತದೆ. ಸುವ್ಯವಸ್ಥಿತ ಚರಂಡಿಗಳಿಲ್ಲದ ಕಾರಣ ಚರಂಡಿ ನೀರು ರಸ್ತೆಗೆ ಹರಿದು ಬರುವುದರಿಂದ ರಸ್ತೆಗಳು, ಕೊಳಚೆ ಪ್ರದೇಶವಾಗುತ್ತವೆ.
ಕೈಕೊಡುತ್ತಿರುವ ವಿದ್ಯುತ್ನಿಂದ ನೀರಿಗೆ, ಕೃಷಿ ಪರ ಚಟುವಟಿಕೆಗೆ ತೊಂದರೆಯಾಗುತ್ತದೆ. ದಿನಕ್ಕೆ ಕೇವಲ 2 ರಿಂದ 3 ಗಂಟೆ ಮಾತ್ರ ವಿದ್ಯುತ್ ಇರುತ್ತದೆ. ಈ ಬಗ್ಗೆ ರೈತರು ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ಗ್ರಾಮವನ್ನು ಸಂಪೂರ್ಣ ನಿರ್ಲಕ್ಷ್ಯಿಸಿದ್ದಾರೆ ಎಂದು ತಾಲೂಕು ನೀರು ಬಳಕೆದಾರರ ಸಂಘದ ಅಧ್ಯಕ್ಷ ಯಶವಂತ್ರಾಯಗೌಡ ರೂಗಿ ಹಾಗೂ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಗ್ರಂಥಾಲಯ ಮಾಯ: ಗ್ರಾಮದಲ್ಲಿ ಎರಡು ಹಿರಿಯ ಪ್ರಾಥಮಿಕ ಶಾಲೆಗಳು, ಒಂದು ಪ್ರೌಢ ಶಾಲೆ, ಒಂದು ಪದವಿ ಪೂರ್ವ ಮಹಾವಿದ್ಯಾಲಯವಿದೆ. ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು 10 ವರ್ಷದ ಹಿಂದೆ ಗ್ರಾಮ ಪಂಚಾಯತಿ ಅಡಿಯಲ್ಲಿ ಗ್ರಂಥಾಲಯ ಪ್ರಾರಂಭಗೊಂಡಿತ್ತು. ಆದರೆ 5-6 ವರ್ಷಗಳಿಂದ ಗ್ರಂಥಾಲಯ ಕಾಣುತ್ತಿಲ್ಲ. ಅಲ್ಲಿಯ ಪುಸ್ತಕಗಳು, ಪೀಠೋಪಕರಣಗು, ಕಪಾಟುಗಳು ಎಲ್ಲಿ ಹೋಯಿತು ಎಂಬುದು ಗೊತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಾಪಂ ಇಒ ಡಾ. ಎಂ.ಎಸ್. ಗಂಗನಳ್ಳಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

