ಬಿಜಾಪುರ

ತಾಲೂಕಿಗಾಗಿ ಆಲಮೇಲ ಬಂದ್

Published On :

ಆಲಮೇಲ:  ಆಲಮೇಲ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಆಲಮೇಲ ತಾಲೂಕಾ ಹೋರಾಟ ಸಮಿತಿ ಗುರುವಾರ ಕರೆ ನೀಡಿದ ಆಲಮೇಲ್ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಪ್ರತಿಭಟನೆ ನೇತೃತ್ವ ವಹಿಸಿದ ಹಿರಿಯ ಸಾಹಿತಿ ಸಿದ್ದರಾಮ ಉಪ್ಪಿನ ಮಾತನಾಡಿ, ಈ ಹಿಂದೆ ಸರಕಾರ ರಚಿಸಿದ ಎಂ. ವಾಸುದೇವ ಸಮಿತಿ, ಟಿ.ಎಂ. ಹುಂಡೇಕಾರ, ಪಿ.ಸಿ. ಗದ್ದಿಗೌಡರ ಸಮಿತಿಗಳ ವರದಿ ಆದಾರದ ಮೇಲೆ ಆಲಮೇಲ ತಾಲೂಕು ಕೇಂದ್ರಕ್ಕೆ ಅರ್ಹವಾಗಿದೆ ಎಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಆದರೂ ಸರ್ಕಾರ ಇದ್ಯಾವದನ್ನು ಲೆಕ್ಕಿಸದೆ ಆಲಮೇಲನ್ನು ತಾಲೂಕು ಪಟ್ಟಿಯಿಂದ ನಿರ್ಲಕ್ಷಿಸಿದೆ. ಇದರಿಂದ ತೀವ್ರ ನೋವಾಗಿದೆ ಎಂದರು.
 ಇದೇ ಸಂದರ್ಭದಲ್ಲಿ ಆಲಮೇಲ ತಾಲೂಕು ಹೋರಾಟ ಸಮಿತಿ ಸದಸ್ಯ ಶಿವಾನಂದ ಮಾರ್ಸನಳ್ಳಿ ಮಾತನಾಡಿ, ಇಲ್ಲಿನ ಜನತೆ ಆಡಳಿತಾತ್ಮಕ ದೃಷ್ಟಿಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಇಂಡಿ ಏತ ನೀರಾವರಿ ಕಾಲುವೆಗಳಿಂದ ಈ ಭಾಗವು ಸಂಪೂರ್ಣ ನೀರಾವರಿಗೆ ಒಳಪಟ್ಟಿದೆ. ತಾಲೂಕು ಕೇಂದ್ರವಾದರೆ ಹಲವಾರು ರಂಗಗಳಲ್ಲಿ ಈ ಭಾಗ ಅಭಿವೃದ್ಧಿಯಾಗುತ್ತದೆ ಎಂದರು.
ತಾಲೂಕು ಹೋರಾಟ ಸಮಿತಿ ಸದಸ್ಯ ಅಶೋಕ ಕೋಳಾರಿ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲೆಯಲ್ಲಿ 7 ತಾಲೂಕು ಕೇಂದ್ರಗಳನ್ನು ಹೊಸದಾಗಿ ರಚಿಸಿದೆ. ಆದರೆ, ಆಲಮೇಲನ್ನು ನಿರ್ಲಕ್ಷ್ಯಿಸಿ ಅನ್ಯಾಯ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಸಾಧಿಕ ಸುಂಭಡ, ಪ್ರಭು ವಾಲೀಕಾರ, ಬಸವರಾಜ ತೆಲ್ಲೂರ, ಶಿವುಕುಮಾರ ಗುಂದಗಿ, ಜಿಪಂ ಸದಸ್ಯ ಮಲ್ಲಪ್ಪ ತೋಡಕರ, ವಿಶ್ವನಾಥ ಬಡದಾಳ ಇತರರು ಮಾತನಾಡಿದರು.
ಬಂದ್ ಹಿನ್ನೆಯಲ್ಲಿ ವ್ಯಾಪರ ವಹಿವಾಟು ಸ್ಥಗಿತಗೊಂಡಿತ್ತು. ಪ್ರತಿಭಟನೆ ಸ್ಥಳೀಯ ವಿರಕ್ತ ಮಠದಿಂದ ಪ್ರಾರಂಭಗೊಂಡು ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣದಕ್ಕೆ ಸೇರಿತು. ಅನಂತರ ಉಪ ತಹಸೀಲ್ದಾರ ಕೆ.ವಿ. ಕುಲಕರ್ಣಿ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ಅಪ್ಪು ಶೆಟ್ಟಿ, ಅಶೋಕ ಕೋಳಾರಿ, ಗುಂಡು ಮೇಲಿನಮನಿ, ಮಲ್ಲು ಅಚಲೇರಿ, ಶ್ರೀಶೈಲ ಭೋವಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಂದ್ ಕೆರೆಗೆ ಜೆಡಿಎಸ್ ಧುರೀಣ ಅಶೋಕ ಮನಗೂಳಿ, ಕೆಜೆಪಿ ಮುಖಂಡ ಯಶವಂತರಾಯಗೌಡ ರೂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಸುಣಗಾರ ಬೆಂಬಲ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.