ಚಾಮರಾಜನಗರ

ಉಚಿತ ಶಾಲಾ ಬ್ಯಾಗ್ ವಿತರಣೆ

Published On :

ಹನೂರು: ಹನೂರು ಕ್ಷೇತ್ರದ ಗೋಪಿನಾಥಂನ ಗಡಿ ಅಂಚಿನ ಉನ್ನತೀಕರಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ 30 ವಿದ್ಯಾರ್ಥಿಗಳಿಗೆ ಸಿಕಂದರಬಾದ್ ಗೋಕರ್ಣ  ಲಿಮಿಟೆಡ್ ಗ್ರಾನೇಟ್ ಡಿವಿಜನ್ ಜನರಲ್ ಮ್ಯಾನೇಜರ್ ಪಿ.ಗೋವಿಂದನ್ ಉಚಿತ ಶಾಲಾ ಬ್ಯಾಗ್ ವಿತರಿಸಿದರು.
ನಂತರ ಮಾತನಾಡಿ, ಇಂಥ ಕಾರ್ಯಕ್ರಮಗಳಿಂದ ಶಾಲಾ ದಾಖಲಾತಿ ಉತ್ತಮಪಡಿಸುವುದು, ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು, ಮಕ್ಕಳಲ್ಲಿ ಸಮಾನತೆಯ ಮನೋಭಾವ ಮೂಡಿಸಲು ಸಹಾಯವಾಗುತ್ತವೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮುರುಗೇಶ್ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ, ಅಕ್ಷರ ದಾಸೋಹ, ಶಾಲಾ ಕೈ ತೋಟ ನಿರ್ವಹಣೆ, ಕಂಪ್ಯೂಟರ್ ಆಧಾರಿತಾ ಕಲಿಕಾ ಕಾರ್ಯಕ್ರಮಗಳು, ಪಠ್ಯೇತರ ಚಟುವಟಿಕೆಗಳು ಶಿಕ್ಷಕರ ಹಾಗೂ ಎಸ್‌ಡಿಎಂಸಿ ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ನಡೆಯುತ್ತಿದೆ ಎಂದರು. ಸಭೆಯಲ್ಲಿ ಮುಖ್ಯೋಪಾಧ್ಯಾಯ ಕೆ.ಎಸ್.ನಂಜುಂಡಾಚಾರ್ ಶಾಲಾ ಪ್ರಗತಿಯ ವರದಿ ತಿಳಿಸಿದರು. ಸಿಆರ್‌ಪಿ ನಾಗಸುಂದರ್, ಬಿಆರ್‌ಪಿ ಮಾದೇಶ್, ಶಿಕ್ಷಕರಾದ ಸಂತೋಷ್ ಕುಮಾರ್, ನಾಗಜ್ಯೋತಿ, ಸೌಭಾಗ್ಯ, ನಾಗರಾಜು, ದೈವಾಣಿ, ಅಭಿಮನ್ಯು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.