ಚಿಕ್ಕಮಗಳೂರು

ಏನು ಮಾಡಬೇಕೆಂಬ ಅರಿವಿರಬೇಕು

Published On :

ಕನ್ನಡಪ್ರಭ ವಾರ್ತೆ ಸೊರಬ ಏ.1
ಬೇರೆಬೇರೆ ಪಕ್ಷಗಳು ಏನು ಮಾಡಿದ್ದಾರೆ, ಮಾಡಿಲ್ಲ ಎನ್ನುವುದಕ್ಕಿಂತ ನಾವೇನು ಮಾಡಬೇಕು ಎಂಬುದರ ಅರಿವು ನಮಗೆ ಬೇಕು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದರು.
ಆನವಟ್ಟಿ ಗ್ರಾಮದಲ್ಲಿ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿ, ದಿ. ಬಂಗಾರಪ್ಪ ಅವರು ಪೂರೈಸಲಾಗದ ಕನಸುಗಳನ್ನು ನಾವೀಗ ನನಸು ಮಾಡುವತ್ತ ಚಿಂತನೆ ನಡೆಸಬೇಕು, ಪ್ರಸ್ತುತ ರೈತರ ಜೀವನಾಡಿಯಾಗಿರುವ ನೀರಾವರಿ ವ್ಯವಸ್ಥೆಗೆ ನಮ್ಮದು ಮೊದಲ ಆದ್ಯತೆ. ಕೃಷಿ ಭೂಮಿಗೆ ಅಗತ್ಯವಿರುವ ಶಾಶ್ವತ ನೀರಾವರಿ ಒದಗಿಸುವ ಕಾರ್ಯ ಅತ್ಯಗತ್ಯವಾಗಿದೆ ಎಂದರು.
ಮನೆ ಎಂಬ ಭಾವನೆ ಇರಲಿ: ಚುನಾವಣಾ ಆಯೋಗದ ಬಿಗಿಯಾದ ನೀತಿನಿಯಮಾವಳಿಗಳನ್ನು ವಿವರಿಸಿದ ಅವರು ಕಾನೂನು ವ್ಯಾಪ್ತಿಯಲ್ಲಿ ಶಾಂತಿಯುತ ಚುನಾವಣೆ ನಡೆಸಲು ಸಿದ್ಧರಾಗಬೇಕು. ಯಾವುದೇ ಮನಸ್ತಾಪವಿದ್ದರೂ, ಬದಿಗೊತ್ತಿ ಒಗ್ಗಟ್ಟಿನಿಂದಿದ್ದು, ಕಾಂಗ್ರೆಸ್ ನಮ್ಮ ಮನೆ ಎಂಬ ಭಾವನೆಯಿಂದ ಚುನಾವಣೆ ಎದುರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿದ್ದ ಜೆ. ಶಿವಾನಂದಪ್ಪ, ರಂಗಪ್ಪ ಕಾರಳ್ಳಿ, ಕೃಷ್ಣಪ್ಪ ಮಟ್ಟೇರಾ, ರವಿರುಮಾರ್, ಕೇಶವ, ಚಾಂದ್ ಸಾಬ್, ರಫಿಕ್, ಜಾಫರ್ ಸಾಬ್, ಮಂಜಪ್ಪ ಈಟೇರಾ, ಮಲ್ಲಪ್ಪ, ಇಬ್ರಾಹಿಂ ಲೋಹಾರ್, ಕಾಂಗ್ರೇಸ್‌ಗೆ ಸೇರ್ಪಡೆಗೊಂಡರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಬಲಿ ಬಂಗಾರಪ್ಪ, ಬ್ಲಾಕ್ ಅಧ್ಯಕ್ಷರಾದ ಕೆ. ಮಂಜುನಾಥ್, ಮಲ್ಲಿಕಾರ್ಜುನ್ ಗುತ್ತೇರಾ, ಎಚ್.ಸಿ. ಪಾಟೀಲ್, ಉಮಾ ಪಾಟೀಲ್, ಪಾಲಾಕ್ಷಪ್ಪ, ಪಿ.ಎಸ್. ಪ್ರಶಾಂತ್, ಗ್ರಾಪಂ ಉಪಾಧ್ಯಕ್ಷ ಮಧುಕೇಶ್ವರ ಪಾಟೀಲ್, ಹೊಸಳ್ಳಿ ಹನುಮಂತಪ್ಪ, ಎಂ.ಡಿ, ಉಮೇಶ್, ಕಂಚಿ ಶಿವರಾಂ, ಹಂಚಿ ವೀರಭದ್ರಗೌಡ, ಗಣಪತಿ ಕುಳುಗಾ, ಮಧುಕೇಶ್ವರ ಪಾಟೀಲ್, ಮಾಸ್ತಪ್ಪ,  ಹಿರಿಯ ಮುಖಂಡ ಚೆನ್ನವೀರಪ್ಪಗೌಡ, ಇಬ್ರಾಹಿಂ, ಶಿವಮೂರ್ತಿಗೌಡ, ರುದ್ರಗೌಡ ಮಲ್ಲಾಪುರ ಸೇರಿದಂತೆ ಹಲವು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.