ಬೇಸಿಗೆ ಶಿಬಿರ
ಶಿವಮೊಗ್ಗ: ಎಂ.ಪಿ. ಪ್ರಕಾಶ್ ಆರ್ಟ್ ಫೌಂಡೇಶನ್ ಏಪ್ರಿಲ್ 11 ರಿಂದ ಮೇ 11 ರವರೆಗೆ ನಗರದ ವೈಸ್ ಕಿಡ್ಸ್ ಶಾಲೆಯ ಆವರಣದಲ್ಲಿ ಬೇಸಿಗೆ ಶಿಬಿರ ಏರ್ಪಡಿಸಿದೆ. 10ರಿಂದ 16 ವರ್ಷದೊಳಗಿನ ಮಕ್ಕಳಿಗೆ ಅವಕಾಶವಿದ್ದು, ಆಸಕ್ತ ಮಕ್ಕಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಶಿಬಿರದಲ್ಲಿ ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟಕಗಳ ಕುರಿತು ತರಬೇತಿ, ನೈತಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಪರಿಸರ ಕಾಳಜಿಗಳಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ತರಬೇತಿ ಪಡೆದ ಮಕ್ಕಳಿಂದ ಮೇ 11ರಂದು ಕುವೆಂಪು ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಇರುತ್ತದೆ ಎಂದು ಫೌಂಡೇಶನ್ನ ನಿರ್ದೇಶಕರು ತಿಳಿಸಿದ್ದಾರೆ.
ಗಾಯನ ಶಿಬಿರ
ಶಿವಮೊಗ್ಗ: ಗುರು ಗುಹ ಸಂಗೀತ ಮಹಾವಿದ್ಯಾಲಯ ಏಪ್ರಿಲ್ 3 ರಿಂದ ಬಸವೇಶ್ವರ ಹಾಗೂ ಶಂಕರ ಭಗವತ್ಪಾದರ ಜಯಂತಿ ಅಂಗವಾಗಿ ನಗರದ ವಿವಿಧ ಬಡಾವಾಣೆಗಳ ಮಾತೆಯರಿಗೆ ವಚನ ಮತ್ತು ಪದಗಳ ಉಚಿತ ಗಾಯನ ಶಿಬಿರ ನಡೆಸಲಿದೆ. ಕೂಡಲೇ ನಗರದ ಆಸಕ್ತ ಮಹಿಳಾ ಸಂಘಗಳು ವಿದ್ಯಾಲಯವನ್ನು ಸಂಪರ್ಕಿಸುವಂತೆ ಶೃಂಗೇರಿ ಎಚ್.ಎಸ್. ನಾಗರಾಜ್ ಕೋರಿದ್ದಾರೆ. ವಿವರಗಳಿಗಾಗಿ- 9448241149.
ಪುಸ್ತಕ ಬಿಡುಗಡೆ
ಶಿವಮೊಗ್ಗ: ಎಡ್ಯುರೈಟ್ ಇಂಗ್ಲಿಷ್ಲ್ಯಾಬ್ಸ್ ಏಪ್ರಿಲ್ 2 ರಂದು ಸಂಜೆ 5.30ಕ್ಕೆ ಸವಳಂಗ ರಸ್ತೆಯ ಎಡ್ಯುರೈಟ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಿದೆ. ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಂಶೋಧಕ ಫ್ರಾನ್ಸಿಸ್ ಡಿಸೋಜ ಬರೆದಿರುವ ಸ್ಪೀಕಿಂಗ್ ಇಂಗ್ಲಿಷ್ ಎಂಬ ಪುಸ್ತಕ ಬಿಡುಗಡೆಗೊಳ್ಳಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕ ಪ್ರೊ. ಡೇವಿಡ್ ಬಾಂಡ್ ಅತಿಥಿಯಾಗಿ ಪಾಲ್ಗೊಳ್ಳವರು ಎಂದು ಲ್ಯಾಬ್ಸ್ನ ಡಾ. ಶಂಕನಾರಾಯಣ್ ತಿಳಿಸಿದ್ದಾರೆ.
ತೆರಿಗೆ ಹೆಚ್ಚಳ
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಸ್ವಯಂಘೋಷಿತ ಆಸ್ತಿ ತೆರಿಗೆ ನಿಧಾರಣೆಯನ್ನು 3 ವರ್ಷಕ್ಕೊಮ್ಮೆ ಶೇ.15 ರಿಂದ 30 ರಷ್ಟು ಹೆಚ್ಚಿಸುವ ಬಗ್ಗೆ ಆದೇಶ ಇದ್ದು, ಈ ಬಗ್ಗೆ ಇತ್ತೀಚೆಗೆ ನಗರಸಭೆಯ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚರ್ಚೆಯಲ್ಲಿ ನಗರಸಭೆಯ ಆರ್ಥಿಕ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಮೇಲೆ ಕನಿಷ್ಠ ಶೇ.15 ಹೆಚ್ಚಿಸಿ ಸದರಿ ತೆರಿಗೆಯನ್ನು 2013-14ನೇ ಸಾಲಿನ ಏ.1ರಿಂದ ಅನ್ವಯವಾಗುವಂತೆ ಜಾರಿಗೊಳಿಸಬಹುದು ಎಂದು ತೀರ್ಮಾನಿಸಲಾಗಿದೆ.
ಅದರಂತೆ ಏ.1ರಿಂದ ಮೂಲ ಆಸ್ತಿಯ ತೆರಿಗೆ ಮೇಲೆ ಶೇ. 15 ರಷ್ಟು ಹೆಚ್ಚಿಸಿದ್ದು, ತೆರಿಗೆಯನ್ನು ಸ್ವಯಂ ಘೋಷಿಸಿಕೊಳ್ಳಲು ಪೌರಾಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

