12 ರಿಂದ 'ಬನ್ನಿ ನಮ್ಮ ಹಾಡಿಗೆ' ಭಾವಗೀತೆ ಶಿಬಿರ
ತರೀಕೆರೆ: ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ಟ್ ಬೆಂಗಳೂರು, ಪ್ರಕೃತಿಶ್ರೀ ಕಲಾ ಕುಟೀರ ತರೀಕೆರೆ ವತಿಯಿಂದ ಮೃತ್ಯುಂಜಯ ದೊಡ್ಡವಾಡ್ ಸಂಗೀತ ನಿರ್ದೇಶನದಲ್ಲಿ 12 ಮತ್ತು 13 ರಂದು ಪಟ್ಟಣದ ರೋಟರಿ ಶಾಲೆ ಸಭಾಂಗಣದಲ್ಲಿ ಬನ್ನಿ ನಮ್ಮ ಹಾಡಿಗೆ ಆನಂದಕಂದ ವಿರಚಿತ ಭಾವಗೀತೆಗಳ ಶಿಬಿರವನ್ನು ಏರ್ಪಡಿಸಲಾಗಿದೆ.
12 ರಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಮಗಳೂರು ಆಕಾಶವಾಣಿ ಕಲಾವಿದೆ ಶಶಿಕಲಾ ಶಿವಶಂಕರ್ ಉದ್ಘಾಟಿಸಲಿದ್ದು, ರೋಟರಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಸಿ. ಶರತ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 13 ರಂದು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ಕಾದಂಬರಿಕಾರ ಡಾ. ರಾಘವೇಂದ್ರ ಪಾಟೀಲ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಅರುಣೋದಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಎಚ್. ಶ್ರೀಹರ್ಷ, ಭದ್ರಾವತಿ ಸರ್.ಎಂ.ವಿ. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಭಾರತಿ ಆಯಿಷಾ, ಸಂಜೆ ಸಮಯ ಸಂಪಾದಕ ಜಿ.ಎಚ್. ಅನಿಲ್ಕುಮಾರ್ ಭಾಗವಹಿಸುತ್ತಾರೆ.
ಮೃತ್ಯಂಜಯ ದೊಡ್ಡವಾಡ, ಶ್ರಿಧರ್ ಆಯ್ಯರ್ ಮತ್ತು ಶಿಬಿರಾರ್ಥಿಗಳಿಂದ ಆನಂದಕಂದರ ವಿರಚಿತ ಗೀತೆಗಳ ಗಾಯನವನ್ನು ಏರ್ಪಡಿಸಲಾಗಿದೆ. ಹಾವೇರಿ ಸತೀಶ ಕುಲಕರ್ಣಿ, ಬೆಳಗಾವಿ ಆಶಾ ಕಟಪಟ್ಟಿ ಶಿಬಿರವನ್ನು ಸಂಯೋಜಿಸಲಿದ್ದು, ಟ್ರಸ್ಟ್ ಸಮಿತಿ ಅಧ್ಯಕ್ಷ ಶ್ರೀಧರ್ ಆಯ್ಯರ್, ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಭಾಗವಹಿಸಲಿದ್ದಾರೆ.
ಶ್ರೀಧರ್ ಆಯ್ಯರ್ ಸಾರಥ್ಯದಲ್ಲಿ ಈ ಕಲಿಕಾ ಶಿಬಿರ ಈಗಾಗಲೇ ರಾಜ್ಯದ ನಾನಾ ಭಾಗದಲ್ಲಿ ಆಯೋಜನಗೊಂಡಿದ್ದು ಸಾವಿರಾರು ಮಕ್ಕಳು, ಹಲವಾರು ವಾಹಿನಿ ವೇದಿಕೆಗಳಲ್ಲಿ ಹಾಡಿ ಹೆಸರು ಮಾಡಿದ್ದಾರೆ. ಶಿಬಿರದಲ್ಲಿ ಮ್ಯೂಜಿಕ್ ಟ್ರ್ಯಾಕ್ನೊಂದಿಗೆ ಭಾವಗೀತೆಗಳ ಗಾಯನ ತರಬೇತಿ ನೀಡಲಾಗುವುದು ಹಾಗೂ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು ವಿವರಗಳಿಗೆ ಪ್ರಕೃತಿ ಶ್ರೀ ಕಲಾ ಕುಟೀರದ ಅಧ್ಯಕ್ಷೆ ಉಮಾಪ್ರಕಾಶ್ ಮೊ-8123116521 ಸಂಪರ್ಕಿಸಲು ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

