ತರೀಕೆರೆ ಕ್ಷೇತ್ರದಲ್ಲಿ 219 ಮತಗಟ್ಟೆ: ಅನುರಾಧ
ತರೀಕೆರೆ: ವಿಧಾನ ಸಭಾ ಕ್ಷೇತ್ರದಲ್ಲಿ 219 ಮತಗಟ್ಟೆಗಳಿದ್ದು, ಅದರಲ್ಲಿ 32 ಅತಿಸೂಕ್ಷ್ಮ, 97 ಸೂಕ್ಷ್ಮ ಮತಗಟ್ಟೆಗಳಿವೆ ಎಂದು ಚುನಾವಣಾಧಿಕಾರಿ ಜಿ. ಅನುರಾಧ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಒಟ್ಟು 1,54,820 ಮತದಾರರಿದ್ದು, ಅದರಲ್ಲಿ 80,405 ಪುರುಷರು, 74,397 ಮಹಿಳೆಯರು ಇದ್ದಾರೆ, ಪ್ರತಿ ಹೋಬಳಿಗೆ 2 ರಂತೆ ಆರು ಹೋಬಳಿಯಿಂದ 12 ಎಂಸಿಸಿ ತಂಡ ರಚಿಸಲಾಗಿದೆ. ತಾಲೂಕಿನ ಮೂರು ಗಡಿ ಭಾಗಗಳಾದ ಎಂ.ಸಿ. ಹಳ್ಳಿ, ಆಹ್ಮದ್ ನಗರ ಮತ್ತು ಮೆಣಸಿನಹಳ್ಳಿಗಳಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸ್ಥಿರ ಕಣ್ಗಾವಲು ಸಮಿತಿ ರಚಿಸಲಾಗಿದೆ ಹಾಗೂ ಕಂದಾಯ ಇಲಾಖೆಯಲ್ಲಿ ಎನ್. ನಾರಾಯಣರಾವ್, ತಾಪಂನಲ್ಲಿ ಜೈರಾಂ, ಪುರಸಭಾ ಕಾರ್ಯಾಲಯದಲ್ಲಿ ಶೇಷಪ್ಪ, ಪೊಲೀಸ್ ಠಾಣೆಯಲ್ಲಿ ರುದ್ರೇಶಪ್ಪರನ್ನು ಏಕ ಗವಾಕ್ಷಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದರು.
ನಾಮಪತ್ರ ಸ್ವೀಕಾರ: ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ 10 ರಿಂದ 17ರ ವರೆಗೆ (ಎರಡು ರಜಾ ದಿನ ಹೊರತುಪಡಿಸಿ) ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರಗೆ ನಾಮಪತ್ರ ಸ್ವೀಕಾರ ಕಾರ್ಯ ನೆಡೆಯಲಿದ್ದು, 18 ರಂದು ನಾಮಪತ್ರ ಪರಿಶೀಲನೆ, 20 ರಂದು ನಾಮಪತ್ರ ಹಿಂದಕ್ಕೆ ಪಡೆಯುವ ದಿನಾಂಕವಾಗಿದ್ದು ಮೇ 5 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನೆಡೆಯಲಿದೆ ಎಂದು ತಿಳಿಸಿದರು.
ಠೇವಣಿ ಹಣ: ತರೀಕೆರೆ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವವರು ಸಾಮಾನ್ಯ ವರ್ಗ 10,000 ಮತ್ತು ಎಸ್.ಸಿ, ಎಸ್.ಟಿ 5,000 ರು.ಠೇವಣಿ ಪಾವತಿಸಬೇಕು ಎಂದು ತಿಳಿಸಿದ ಅವರು ಪಟ್ಟಣದ ಎಸ್.ಜೆ.ಎಂ. ಕಾಲೇಜಿನಲ್ಲಿ ಮೇ 4 ಮತ್ತು 5 ರಂದು ಚುನಾವಣಾ ಪರಿಕರಗಳ ವಿಲೇವಾರಿ ಮತ್ತು ಸಂಗ್ರಹಣೆಗೆ ಸ್ಥಳ ಗೊತ್ತುಪಡಿಸಲಾಗಿದ್ದು ಮಿನಿ ವಿಧಾನ ಸೌಧದ
ಟೋಲ್ ಫ್ರೀ ಸಂಖ್ಯೆ 18004252645 ಅಗಿರುತ್ತದೆ ಮತ್ತು ತರೀಕೆರೆ ಡಿವೈಎಸ್ಪಿ ಸದಾನಂದ್ ಬಿ. ನಾಯಕ್ರನ್ನು ನಾಮಪತ್ರ ಸ್ವೀಕರಿಸುವ ಸ್ಥಳದಲ್ಲಿ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದರು. ಸಹಾಯಕ ಚುನಾವಣಾಧಿಕಾರಿ ರಂಜಿತ ಸಭೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

