ಚಿಕ್ಕಮಗಳೂರು

ಬಿಜೆಪಿ ಜತೆ ಶಾಂತೇಗೌಡ ಒಳ ಒಪ್ಪಂದ: ಆರೋಪ

Published On :

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಏ.9
ವ್ಯಾವಹಾರಿಕವಾಗಿ ಬಿಜೆಪಿ ಅಭ್ಯರ್ಥಿಯೊಂದಿಗೆ ಕೈಜೋಡಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡರು ಅದನ್ನು ರಾಜಕೀಯ ಬಂಡವಾಳವನ್ನು ಮಾಡಿಕೊಂಡು ಚುನಾವಣೆಯಲ್ಲಿ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಆರೋಪಿಸಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಪಕ್ಷದ ಕಾರ್ಯಕರ್ತರ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕೀಯ ದೊಂಬರಾಟ: ರವಿಯವರ ಸುಳ್ಳಿನ ರಾಜಕಾರಣಕ್ಕೆ ಜನ ಬೇಸತ್ತು ಬಿಜೆಪಿ ಅಧಿಕಾರ ಕೊನೆ ಗಾಣಿಸಬೇಕೆಂಬ ನಿರ್ಧಾರ ಮಾಡಿದ್ದಾರೆ, ಕಾಂಗ್ರೆಸ್‌ನಲ್ಲಿ ವಿಧಾನಪರಿಷತ್ ಸದಸ್ಯರಾಗಿ ಅಧಿಕಾರ ಇದ್ದರೂ ಒಂದೇ ಮನೆಯಲ್ಲಿ ಮತ್ತೋರ್ವ ವ್ಯಕ್ತಿ ಅಧಿಕಾರಕ್ಕಾಗಿ ಹಾತೊರೆಯುತ್ತಿರುವುದು ಅವರ ದುರಾಸೆಗಿಡಿದ ಕೈಗನ್ನಡಿಯಾಗಿದೆ. ಜನ ಸೇವೆ ಮಾಡುವ ಮನಸ್ಸಿದ್ದರೆ ಈಗಿರುವ ಅಧಿಕಾರದಲ್ಲಿ ಮಾಡಬಹುದಿತ್ತು. ಸ್ಥಳೀಯ ಸಚಿವರ ಜತೆ ಕೈಜೋಡಿಸುವ ಹುನ್ನಾರದಿಂದ ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ಭೋಜೆಗೌಡ ಮಾತನಾಡಿ, ಸ್ವಾಮೀಜಿ ಎದುರು ಸತ್ಯ ಮಾಡಿ ನಿತ್ಯ ಒಂದೊಂದು ಅಕ್ರಮಗಳಲ್ಲಿ ತೊಡಗಿರುವ ರವಿಯವರು ಶಪಥ ಮಾಡಿದ ಕೆಲಸವನ್ನು ಪಾಲಿಸಲಾಗದಿದ್ದರೆ ನೇರವಾಗಿ ಒಪ್ಪಿಕೊಳ್ಳಬೇಕೆಂದರು.
ಬಿಜೆಪಿಯ ಭ್ರಷ್ಠಾಚಾರ ಮತ್ತು ಕಾಂಗ್ರೆಸ್ ದುರಾಡಳಿತಕ್ಕೆ ಈ ಬಾರಿ ಜನರಿಂದ ತಕ್ಕಪಾಠ ದೊರೆಯಲಿದೆ. ಕ್ಷೇತ್ರದಲ್ಲಿ ಸಹಸ್ರಾರು ಮಂದಿ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್‌ಗೆ ಸೇರುತ್ತಿದ್ದಾರೆ. ಜನರು, ಸುಳ್ಳು ಆಶ್ವಾಸನೆಗಳಿಗೆ ಕಿವಿಗೊಡದೆ ನಮ್ಮ ಅಭ್ಯರ್ಥಿಗೆ ಬೆಂಬಲಿಸಿ ಪಾರದರ್ಶಕ ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಆಲೇನಹಳ್ಳಿ ಮತ್ತು ನಗರದ ವಿವಿಧ ಭಾಗದ ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ಅಕ್ಮಲ್, ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೊಲದಗದ್ದೆ ಗಿರೀಶ್, ನಗರಾಧ್ಯಕ್ಷ ಜಯರಾಜ್‌ಅರಸ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.