ನೀತಿ ಸಂಹಿತೆ ಉಲ್ಲಂಘನೆ: ಮಾಹಿತಿ ನೀಡಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.12
ವಿಧಾನಸಭಾ ಚುನಾವಣೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಇದರ ಉಲ್ಲಂಘನೆ ಬಗ್ಗೆ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಬೇಕು ಎಂದು ಚಿಕ್ಕಮಗಳೂರು ಮತ್ತು ಮೂಡಿಗೆರೆ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಪಮ್ಯಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಪಾಟಿಕ್ ಸರ್ವೆಲೆನ್ಸ್ ಸಮಿತಿ, ಕಣ್ಗಾವಲು ಸಮಿತಿ ಹಾಗೂ ಮಾಧ್ಯಮ ನಿಗಾ ಸಮಿತಿಯ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತಂತೆ ವಿವರಿಸಿದ ಅವರು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದರ ಜೊತೆಗೆ ವೀಡಿಯೋ ವೀವಿಂಗ್ ಟೀಮ್ ಹಾಗೂ ವೀಡಿಯೋ ಸರ್ವೆಲೆನ್ಸ್ ಟೀಮ್ನವರು ರಾಜಕೀಯ ಪಕ್ಷದವರು ನಡೆಸುವ ರ್ಯಾಲಿ, ಸಮಾವೇಶ, ರೋಡ್ ಶೋ, ಇನ್ನಿತರೆ ಕಾರ್ಯಕ್ರಮಗಳ ಬಗ್ಗೆ ಚಿತ್ರೀಕರಣ ಮಾಡಬೇಕು. ಕಾರ್ಯಕ್ರಮಕ್ಕೆ ಎಷ್ಟು ವಾಹನಗಳ ಬಳಕೆ, ಅವುಗಳ ನೋಂದಣಿ ಸಂಖ್ಯೆ, ತಾರಾ ಪ್ರಚಾರಕರು, ಮುಖಂಡರು ಭಾಗವಹಿಸಿರುವುದರ ಬಗ್ಗೆ, ಪೆಂಡಾಲ್ ಅಳತೆ, ಕುರ್ಚಿಗಳ ಬಳಕೆ, ಊಟದ ವ್ಯವಸ್ಥೆ, ಹೀಗೆ ಇತರ ಸಂಗತಿಗಳನ್ನು ವೀಡಿಯೋ ಮಾಡುವುದರೊಂದಿಗೆ ವಿ.ವಿ.ಟಿ. ಮುಖ್ಯಸ್ಥರು ಖರ್ಚು ಎಷ್ಟು ಎಂಬುದರ ಬಗ್ಗೆ ಅಂದಾಜಿಸಬೇಕು ಎಂದು ಸೂಚಿಸಿದರು.
ಎಸ್.ಎಸ್.ಟಿ. ತಂಡದವರು ರಾಜಕೀಯ ಪಕ್ಷದವರ ವಾಹನ ಹಾಗೂ ಇತರೆ ವಾಹನಗಳನ್ನು ತಪ್ಪದೇ ತಪಾಸಣೆಯನ್ನು ವೀಡಿಯೋ ಚಿತ್ರೀಕರಣದೊಂದಿಗೆ ಮಾಡುವುದರೊಂದಿಗೆ ಅನಧಿಕೃತವಾಗಿ ಭಾರಿ ಪ್ರಮಾಣದ ಹಣ, ಸೀರೆ, ಬಟ್ಟೆ, ಆಭರಣಗಳು ಹಾಗೂ ಮದ್ಯ ಮೊದಲಾದವುಗಳ ಸಾಗಾಣಿಕೆ ತಡೆಯಬೇಕೆಂದರು.
ಮಾಧ್ಯಮ ನಿಗಾ ಸಮಿತಿಯವರು ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೀಡುವ ಜಾಹಿರಾತು ಹಾಗೂ ಕಾಸಿಗಾಗಿ ಸುದ್ಧಿ, ಇದ್ದಲ್ಲಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕೆಂದರು.
ಸಭೆಯಲ್ಲಿ ಚುನಾವಣಾ ಅಧಿಕಾರಿ ಏಲಕ್ಕಿ ಗೌಡ, ವೀಕ್ಷಕರ ಸಂಪರ್ಕ ಅಧಿಕಾರಿ ಪರಮೇಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಚುನಾವಣಾ ವೆಚ್ಚ ವೀಕ್ಷಕರ ನೇಮಕ: ಕೇಂದ್ರ ಚುನಾವಣಾ ಆಯೋಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದೆ.
ಶೃಂಗೇರಿ, ತರೀಕೆರೆ, ಕಡೂರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ವೆಚ್ಚ ವೀಕ್ಷಕರಾಗಿ ವರುವೂರು ಯು.ಶ್ರೀಧರ್ (ಮೊಬೈಲ್ ಸಂಖ್ಯೆ 8762045702) ಹಾಗೂ ಇವರಿಗೆ ಸಂಪರ್ಕಾಧಿಕಾರಿಯಾಗಿ ಜಿಲ್ಲಾ ಪಂಚಾಯ್ಯ್ನ ಯೋಜನಾ ನಿರ್ದೇಶಕ ವಿಠಲ್ (9480860002), ಇವರನ್ನು ನೇಮಿಸಲಾಗಿದೆ.
ಮೂಡಿಗೆರೆ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ವೆಚ್ಚ ವೀಕ್ಷಕರಾಗಿ ಪಮ್ಯ ಕುಮಾರ್ (8762045703), ಇವರಿಗೆ ಸಂಪರ್ಕಾಧಿಕಾರಿಯಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪರಮೇಶ್ (9448475005) ಇವರನ್ನು ನೇಮಿಸಲಾಗಿದೆ.
ವೀಕ್ಷಕರು ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದು, ಪ್ರತಿದಿನ ಸಂಜೆ 4 ರಿಂದ 5ರವರೆಗೆ ಸಂಬಂಧಿಸಿದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯು ಈಗಾಗಲೇ ಜಾರಿಯಲ್ಲಿದ್ದು, ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ವಿ. ಯಶವಂತ್ ಹೇಳಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆಯ ಅಂಗವಾಗಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆ ಘೊಷಣೆಯಾದ ದಿನದಿಂದಲೇ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದ ಅವರು, ಮಾದರಿ ನೀತಿ ಸಂಹಿತೆ ಜಾರಿಗೆ ವೀಕ್ಷಕರು, ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಸಹವೀಕ್ಷಕರು, 40 ಮಾದರಿ ನೀತಿ ಸಂಹಿತೆ ಸಮಿತಿ ತಂಡ, 21 ಕಣ್ಗಾವಲು ಸಮಿತಿ ಹಾಗೂ ಮಾಧ್ಯಮ ನಿಗಾ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ನೀತಿ ಸಂಹಿತೆ ಜಾರಿ ತಂಡಗಳು ಗ್ರಾಮ, ಹೋಬಳಿ, ನಗರ ಪ್ರದೇಶಗಳಲ್ಲಿ ನಡೆಯುವ ಸಭೆ, ಸಮಾರಂಭ ಹಾಗೂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ವೆಚ್ಚಗಳು ಹಾಗೂ ಜಾಹಿರಾತು ಮತ್ತಿತರ ವೆಚ್ಚಗಳ ವಿವರಗಳ ಮೇಲೆ ನಿಗಾ ವಹಿಸಲಿದೆ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 20,336 ಹೆಸರುಗಳು ಹೊಸದಾಗಿ ಸೇರ್ಪಡೆಯಾಗಿದೆ ಎಂದ ಅವರು, ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕೆಂದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಮಾತನಾಡಿ, ಚುನಾವಣೆ ಅಕ್ರಮದ ಬಗ್ಗೆ ಮಾಹಿತಿ ನೀಡಿದಾಗ ಶೀಘ್ರದಲ್ಲೇ ಸ್ಪಂಧಿಸಬೇಕು ಮತದಾರ ಪಟ್ಟಿಯಲ್ಲಿ ಆಗುವ ಗೊಂದಲಗಳಿಗೆ ಆಸ್ಪದ ನೀಡಬಾರದೆಂದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

