ಚಿಕ್ಕಮಗಳೂರು

ಜಿಲ್ಲೆಯಲ್ಲಿ ಪಕ್ಷೇತರರೂ ಸೇರಿ16 ನಾಮಪತ್ರ ಸಲ್ಲಿಕೆ

Published On :

ಕಪ್ರವಾರ್ತೆ,ಚಿಕ್ಕಮಗಳೂರು, ಏ.16
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ 16 ನಾಮಪತ್ರಗಳು ಬಂದಿವೆ.
ಚಿಕ್ಕಮಗಳೂರು ಕ್ಷೇತ್ರಕ್ಕೆ 7, ಮೂಡಿಗೆರೆ- 2, ತರೀಕೆರೆ- 6, ಕಡೂರು  ಕ್ಷೇತ್ರಕ್ಕೆ 1 ನಾಮಪತ್ರ ಬಂದಿದೆ. ಶೃಂಗೇರಿ ಕ್ಷೇತ್ರಕ್ಕೆ ಯಾರೂ ಕೂಡ ನಾಮಪತ್ರ ಸಲ್ಲಿಸಿಲ್ಲ. ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷದಿಂದ ದೇವರಾಜ್, ಪಕ್ಷೇತರ ಅಭ್ಯರ್ಥಿಯಾಗಿ ಮೆಹಬೂಬ್, ಮಂಜುನಾಥ್, ಬಿಜೆಪಿಯಿಂದ ಅವಿನಾಶ್, ಲೋಕಸತ್ತಾ ಪಕ್ಷದಿಂದ ತೀರ್ಥಪ್ಪ. ಮೂಡಿಗೆರೆ ಕ್ಷೇತ್ರದಲ್ಲಿ ಸಿಪಿಐ (ಎಂ.ಎಲ್.) ರೆಡ್ ಕ್ರಾಸ್ ಪಕ್ಷದಿಂದ ಬಿ.ಕೆ. ಗೋಪಾಲ್, ಕುಮಾರ್, ಕಡೂರು ಕ್ಷೇತ್ರದಲ್ಲಿ ಲೋಕಸತ್ತಾ ಪಕ್ಷದಿಂದ ಬಿ.ಎಂ. ಮಧು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ನೇಕ್ ನರೇಶ್, ಕಲ್ಲೇಶ್ವರ, ರೇವಣ್ಣ, ಹಿಂದೂಸ್ಥಾನ್ ನಿರ್ಮಾಣ ದಳದಿಂದ  ದ್ವಾರಕೀಶ್, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಅಣ್ಣಾವೇಲು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಮಂಗಳವಾರ ಒಳ್ಳೆಯ ದಿನವಲ್ಲ. ಅದುದರಿಂದ ಹೆಚ್ಚಿನ ಮಂದಿ  ಅಂದು ಯಾವುದೇ ಶುಭ ಕಾರ್ಯಕ್ಕೆ ಕೈ ಹಾಕುವುದಿಲ್ಲ. ಈ ಕಾರಣದಿಂದಾಗಿ ಕಡಿಮೆ ನಾಮಪತ್ರಗಳು ಬಂದಿವೆ.
ನಾಮಪತ್ರ ಸಲ್ಲಿಕೆಗೆ ಬುಧವಾರ ಕಡೆಯ ದಿನ. ಮಧ್ಯಾಹ್ನ 3 ಗಂಟೆ ಡೆಡ್ ಲೈನ್. ಅದುದರಿಂದ  ಹೆಚ್ಚು ನಾಮಪತ್ರಗಳನ್ನು ನಿರೀಕ್ಷಿಸಲಾಗಿದೆ.
ಪ್ರಮುಖರ ನಾಮಪತ್ರ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಐದು ಮಂದಿ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ನಾಮಪತ್ರ ಸಲ್ಲಿಸಲಾಗಿದ್ದು, ಇನ್ನುಳಿದ ನಾಲ್ಕು ಕ್ಷೇತ್ರಗಳಾದ ತರೀಕೆರೆಗೆ ಟಿ.ಆರ್. ನಾಗರಾಜ್, ಕಡೂರಿನಲ್ಲಿ ವೈಎಸ್‌ವಿ ದತ್ತ, ಮೂಡಿಗೆರೆಯಲ್ಲಿ ಬಿ.ಬಿ. ನಿಂಗಯ್ಯ,  ಶೃಂಗೇರಿ ಕ್ಷೇತ್ರಕ್ಕೆ ತಲಖಾನೆ ರಾಜೇಂದ್ರ ಅವರು ಬುಧವಾರ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ನಾಲ್ಕು ಕ್ಷೇತ್ರಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿದ್ದು, ತರೀಕೆರೆ ಕ್ಷೇತ್ರದಲ್ಲಿ ಜಿ.ಕೆ. ಶ್ರೀನಿವಾಸ್ ಅವರು ಬುಧವಾರ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಕೆಜೆಪಿ ಪಕ್ಷದಿಂದ ತರೀಕೆರೆ ಮತ್ತು ಕಡೂರು ಕ್ಷೇತ್ರದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಡಾ. ಬಿ.ಕೆ. ವೇದಮೂರ್ತಿ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನುಳಿದಂತೆ ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಗೆ 24 ಗಂಟೆ ಬಾಕಿ ಇದ್ದರೂ ಅಭ್ಯರ್ಥಿಗಳ ಹೆಸರನ್ನು ಕೆಜೆಪಿ ಪ್ರಕಟಿಸಿಲ್ಲ.
ಇನ್ನುಳಿದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ, ಲೋಕಸತ್ತಾ, ಬಿಎಸ್ಪಿ ಪಕ್ಷಗಳಿಂದ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರು ಸಹ ಹೆಚ್ಚಿನ ಸಂಖ್ಯೆಯಲ್ಲಿ  ಅಖಾಡಕ್ಕೆ ಇಳಿಯಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.