ಚಿಕ್ಕಮಗಳೂರು

ಚುನಾವಣೆಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗೆ ಬೆಲೆ ಇಲ್ಲ

Published On :

ಕ.ಪ್ರ. ವಾರ್ತೆ, ಕೊಪ್ಪ, ಏ.17
ಇಂದಿನ ಚುನಾವಣೆಗಳಲ್ಲಿ ಪ್ರಾಮಾಣಿಕ ಅಭ್ಯರ್ಥಿಯ ವ್ಯಕ್ತಿತ್ವ ಮತ್ತು ಸೈದ್ದಾಂತಿಕ ನಿಲುವುಗಳಿಗೆ ಮತದಾರರು ಬೆಲೆಕೊಡದ ಹಿನ್ನೆಲೆಯಲ್ಲಿ ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ತಿಳಿಸಿದರು.
ಬುಧವಾರ ಪುರಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ರೈತಸಂಘದ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದವನಾಗಿದ್ದು, ಇಂದಿನ ರಾಜಕೀಯ ಗುಣಗಳನ್ನು ಮೈಗೂಡಿಸಿಕೊಳ್ಳದೇ, ಪ್ರಮಾಣಿಕವಾಗಿ ಸಮಾಜ ಸೇವೆಯಲ್ಲಿ ತೋಡಗಿಸಿಕೊಂಡಿದ್ದೇನೆ. ಇಂತಹ ಗುಣಗಳು ಪ್ರಸಕ್ತ ಚುನಾವಣೆಗಳಲ್ಲಿ ಉಪಯೋಗಕ್ಕೆ ಬರದೇ ಇರುವುದನ್ನು ಮನಗಂಡು ಸ್ವಂತ ನಿರ್ಧಾರಗಳಿಂದ ಚುನಾವಣೆಯಿಂದ ಹಿಂದೆ ಸರಿದ್ದಿದೇನೆ ಎಂದು ತಿಳಿಸಿದರು.
ಅಡಕೆ ಹಳದಿ ಎಲೆರೋಗ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ಜೀವಂತ ಸಮಸ್ಯೆಗಳ ಬಗ್ಗೆ ಸ್ಪಂದಿಸದ ಕಾರಣ ಅಡಕೆ ಹಳದಿ ಎಲೆರೋಗ ಪೀಡಿತ ರೈತರು ಗುಳೆ ಹೋಗುತ್ತಿದ್ದಾರೆ. ಇವರಿಗೆ ಬೇರೆ ಮಾರ್ಗೋಪಾಯ ಕಲ್ಪಿಸುವ ಗೋಜಿಗೆ ಹೋಗಿಲ್ಲ, ನಕ್ಸಲ್ ಸಮಸ್ಯೆ ಬಗೆಹರಿಸುವ ಕಾಳಜಿ ತೋರಿಲ್ಲ,ಬಗರ್ ಹುಕಂ ಸಾಗುವಾಳಿದಾರರಿಗೆ ಹಕ್ಕು ಪತ್ರ ವಿತರಣೆ ಮಾಡಿಲ್ಲ, ಇಂತಹ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿಯವರಿಗೆ ಕ್ಷೇತ್ರದಲ್ಲಿ ಮತ ಕೇಳಲು ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.
ಕೇಂದ್ರದ ನಿರ್ಲಕ್ಷ್ಯ: ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಷ್ಟೇ ಹೊಣೆಗಳಿದ್ದರೂ ಸಮಸ್ಯೆಗಳ ಬಗ್ಗೆ ಸ್ಪಂದಿಸಿಲ್ಲ. ಅಡಕೆ ಹಳದಿ ಎಲೆರೋಗದ ರೈತರ ಪರ ಪಕ್ಷ ಬೇದವಿಲ್ಲದೆ ಹೋರಾಟ ಮಾಡಿ ಕೇಂದ್ರ ಗಮನ ಸೆಳೆದರೂ ಒಪ್ಪಿಕೊಳ್ಳದ ಸಂಕುಚಿತ ಮನಸ್ಥಿತಿಯನ್ನು ಹೊಂದಿರುವ ಕೇಂದ್ರ ನಾಯಕರಿಗೆ ಕ್ಷೇತ್ರದಲ್ಲಿ ಮತ ಕೇಳುವ ನೈತಿಕಹಕ್ಕನ್ನು ಕಳೆದು ಕೊಂಡಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರ: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಟಿ. ಕಂಠಿ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಟಿ.ಡಿ. ರಾಜೇಗೌಡರು ಎರಡು ವರ್ಷದ ಕಾಲ ಬ್ರಷ್ಟಾಚಾರಕ್ಕೆ ಭದ್ರ ಬುನಾದಿ ಹಾಕಿಕೊಟ್ಟು ಪ್ರಮಾಣಿಕ ರಾಜಕಾರಣಿಗಳಿಗೆ ಬೆಲೆ ಇಲ್ಲದ ಹಾಗೆ ಮಾಡಿದ ಕೀರ್ತಿ ಟಿ.ಡಿ. ರಾಜೇಗೌಡರಿಗೆ ಸಲ್ಲುತ್ತದೆ ಎಂದು ಆರೋಪಿಸಿದರು. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ರವರು ಇದಕ್ಕೆ ಹೊರತಾಗಿಲ್ಲ ಅವರು ತಮ್ಮ ಅಧಿಕಾರ ಬಳಸಿ ಬೆಂಗಳೂರಿನಲ್ಲಿ 3 ಕೋಟಿ ಬೆಲೆಯ ನಿವೇಶನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಕೆ. ಸಾಯಿನಾಥ್ ವಹಿಸಿದ್ದರು. ತಲಕಾನೆ ರಾಜೇಂದ್ರ, ಲಕ್ಷ್ಮಿಕಾಂತ್, ಗಿಣಕ್ಲು ಸರೇಂದ್ರ, ಸುಭದ್ರಮ್ಮ, ಆಶಾಪೇರಿಸ್, ಶಾಂತಣ್ಣ, ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.