ಚಿಕ್ಕಮಗಳೂರು

ನಾಳೆ ಕ್ರಿಸ್ತ ಮಹಿಮೆ ಧ್ವನಿ ಬೆಳಕು ನಾಟಕ

Published On :

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಏ.19
ನಗರದ ಧರ್ಮಕ್ಷೇತ್ರದ ಸುವರ್ಣ ಮಹೋತ್ಸವದ ಅಂಗವಾಗಿ ಯೇಸು ಕ್ರಿಸ್ತ ಮಹಿಮೆ (ಕ್ರಿಸ್ತ- ಕಥನ) ಬೈಬಲ್ ಆಧಾರಿತ ಧ್ವನಿ ಬೆಳಕು ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಆಟದ ಮೈದಾನದಲ್ಲಿ ಏ. 21 ರಂದು ಏರ್ಪಡಿಸಲಾಗಿದೆ.
ಅಂದು ಸಂಜೆ 6 ರಿಂದ ರಾತ್ರಿ 10ರವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಧರ್ಮಕ್ಷೇತ್ರದ ಗುರು ಜಾರ್ಜ್ ಡಿಸೋಜಾ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತೀಯ ಶೈಲಿಯಲ್ಲಿ ನೃತ್ಯ ಪ್ರದರ್ಶನ ನಡೆಯಲ್ಲಿದ್ದು, ಚಿಕ್ಕಮಗಳೂರಿನ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪೂಜ್ಯ ಡಾ. ಟಿ. ಅಂತೋಣಿ ಸ್ವಾಮಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
250 ಮಂದಿ ಪಾತ್ರದಾರಿಗಳು: 3 ಗಂಟೆ ಅವಧಿಯ ಈ ನಾಟಕದಲ್ಲಿ 250 ಮಂದಿ ಮರಿಯಾಪುರದ ಪಾತ್ರಧಾರಿಗಳು ಹಾಗೂ ನೃತ್ಯ ಬಾಲೆಯರು ಭಾಗವಹಿಸಲಿದ್ದಾರೆ. 150ಕ್ಕೂ ಹೆಚ್ಚು ಸ್ಪಾಟ್ ಲೈಟ್ ಮತ್ತು ಹೊನಲು ಬೆಳಕು, ನುರಿತ ತಂತ್ರಜ್ಞರ ಧ್ವನಿಗ್ರಹಣ, ಪ್ರಸಿದ್ಧ ಹಿನ್ನಲೆ ಗಾಯಕರು, ಕಂಠದಾನ ಕಲಾವಿದರಿಂದ ಧ್ವನಿ ಮುದ್ರಣವನ್ನು ಈ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಬೈಬಲ್ ಗ್ರಂಥದ ಹೊಸ ಒಡಂಬಡಿಕೆಯ 4 ಶುಭ ಸಂದೇಶಗಳೇ ಯೇಸು ಕ್ರಿಸ್ತ ಮಹಿಮೆ ನಾಟಕದ ಐತಿಹಾಸಿಕ ಕಥಾವಸ್ತು. ಈ ಬೃಹತ್ ಧ್ವನಿ ಬೆಳಕು ಪ್ರದರ್ಶನವು ಪ್ರೇಕ್ಷಕರನ್ನು 2 ಸಾವಿರ ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತದೆ. 18 ವರ್ಷಗಳಿಂದ ಬೈಬಲ್ ಆಧಾರಿತ ನಾಟಕಗಳನ್ನು ಮರಿಯಾಪುರದಲ್ಲಿ ಪ್ರದರ್ಶಿಸಿ ಹೆಸರುಗಳಿಸಿರುವ ಕಲಾವಿದರು ಅಭಿನಯಿಸಲಿದ್ದಾರೆ. 200 ನರ್ತಕಿಯರು ಹಲವು ನೃತ್ಯಗಳಿಂದ ಜನಸ್ತೋಮವನ್ನು ರಂಜಿಸಲಿರುವರು.
ಪ್ರಥಮ ಬಾರಿಗೆ ಈ ಪ್ರದೇಶಗಳಲ್ಲಿ ಪ್ರದರ್ಶಿತವಾಗುತ್ತಿರುವ ಈ ಕಾರ್ಯಕ್ರಮ ಯೇಸುವಿನ ಜೀವನ, ಯಾತನೆ, ಮರಣ, ಪುನರುತ್ಥಾನ ಹಾಗೂ ಸ್ವರ್ಗಾರೋಹಣದ ಬಗ್ಗೆ ವಿವರ ನೀಡುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.