ಸಂಹಿತೆ ಉಲ್ಲಂಘನೆ ದೂರು: ಅಧಿಕಾರಿಗಳ ಪರಿಶೀಲನೆ
ಕೊಪ್ಪ: ತಾಲೂಕಿನ ನುಗ್ಗಿ ಗ್ರಾಪಂ ವ್ಯಾಪ್ತಿಯ ಮಾರಿಗಂಡಿ ಗ್ರಾಮದ ಬಳಿ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಶುಕ್ರವಾರ ರಸ್ತೆ ಕಾಮಗಾರಿ ಪ್ರಾರಂಭ ಮಾಡಿದ್ದಾರೆ ಎಂದು ಗ್ರಾಮಸ್ಥರು ಶೃಂಗೇರಿ ಚುನಾವಣಾಧಿಕಾರಿ ರತ್ನಾಕರ್ ನಾಯ್ಕ ದೂರು ಸಲ್ಲಿಸಿದರು.
ನುಗ್ಗಿ ಗ್ರಾಪಂ ವ್ಯಾಪ್ತಿಯ ಹೊಸೂರು ಬಳಿಯ ಮಾರಿಗಂಡಿ ರಸ್ತೆಯನ್ನು ಜೆಸಿಬಿ ಯಂತ್ರ ಬಳಿಸಿ ರಸ್ತೆ ರೀಪೇರಿ ಕಾಮಗಾರಿ ಭೂಸೇನಾ ನಿಗಮದ ಅಧಿಕಾರಿಗಳು ನೀತಿ ಸಂಹಿತೆ ಇದ್ದರೂ ಕಾಮಗಾರಿ ಪ್ರಾರಂಭಮಾಡಿದ್ದಾರೆ ಎಂದು ನುಗ್ಗಿ ಮಂಜುನಾಥ್, ಚಿಕ್ಕಮಗಳೂರು ಮತ್ತು ಉಡುಪಿ ಲೋಕಾಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಉಮೇಶ್ ಮತ್ತು ಇತರರು ದೂರು ಕೊಟ್ಟ ಹಿನ್ನಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಕಾರ್ಯಪಡೆ ತಂಡ ಸ್ಥಳಕ್ಕೆ ದಾವಿಸಿ ಭೂ ಸೇನಾ ನಿಗಮದ ಅಧಿಕಾರಗಳಿಂದ ದಾಖಲೆಗಳನ್ನು ಪರೀಶಿಲಿಸಿದ ನಂತರ ಕಾಮಗಾರಿಯನ್ನು ಕಾನೂನು ಬದ್ದವಾಗಿದೆ ಎಂದು ಸ್ಟಷ್ಟಪಡಿಸಿದರು.
ನಂತರ ಈ ದೂರಿನ ಸಂಬಂದ ನುಗ್ಗಿ ಗ್ರಾಪಂ ಸದಸ್ಯ ಎಚ್ .ಆರ್. ಜಗದೀಶ್ ಮಾಹಿತಿ ನೀಡಿದ ಅವರು, ಆರು ತಿಂಗಳ ಹಿಂದೆ ಮಾರಿಗಂಡಿ ರಸ್ತೆಯ ಕಾಮಗಾರಿ ಪ್ರಾರಂಭಮಾಡಿದ್ದು, ಕೂಲಿ ಕಾರ್ಮಿಕರ ಕೊರೆತೆಯಿಂದ ಸ್ಥಗಿತಗೊಳಿಸಿದ್ದರು. ನಂತರ ಈಗಗಾಲೇ ಮಳೆಗಾಲ ಸಮೀಪಿಸುತ್ತಿರುವುದರಿಂದ ರಸ್ತೆಯ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿರುವುದರಿಂದ ಕಾಮಗಾರಿಯನ್ನು ಪುನಾರಂಭಮಾಡಿದ್ದರು. ರಾಜಕೀಯ ದುರದ್ದೇಶದಿಂದ ದೂರು ನೀಡಿದ್ದರ ಹಿನ್ನಲೆಯಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರಿಂದ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಹೆದರಿ ಒಡಿಹೋಗಿದ್ದಾರೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

