ಬಿಜೆಪಿ, ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿ: ಗಿರೀಶ್
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.20
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ವಿರುದ್ಧ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರ ಆಕ್ರೋಶಕ್ಕೆ ಗುರಿಯಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನ ಸನ್ನದ್ದಾರಾಗಿದ್ದಾರೆಂದು ಎಚ್ಡಿಕೆ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಹೇಳಿದ್ದಾರೆ.
ಕೊಳಗಾಮೆ, ಹುಲುವತ್ತಿ, ಉಕ್ಕುಡ, ಮುತ್ತೋಡಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡರ ಪರ ಶನಿವಾರ ಮತಯಾಚನೆ ಮಾಡಿ ಜಾಗರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹಗರಣಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕೇಂದ್ರದ ಕಾಂಗ್ರೆಸ್ ಸರ್ಕಾರದ ಮಂತ್ರಿ ಮಹೋದಯರು ಮತ್ತು ಭೂಮಿ ಬಗೆದು ಅಕ್ರಮ ಮಾಡುವ ಮೂಲಕ ಸಾರ್ವಜನಿಕರ ಹಣದಲ್ಲಿ ಆಕಾಶಯಾನದಲ್ಲಿ ತೇಲುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರದ ಮಂತ್ರಿಗಳು ಜೈಲು ಸೇರಿದ್ದಾರೆ. ಇದೇ ಸಾಲಿಗೆ ಸೇರಲು ನಮ್ಮ ಸಚಿವರು ಸಿದ್ದರಾಗಬೇಕಾಗಿದ್ದು ಈ ಕ್ಷೇತ್ರದಲ್ಲಿನ ಮತದಾರರು ರವಿಯವರಿಗೆ ಭ್ರಷ್ಟಾಚಾರದ ಕೊಡುಗೆ ನೀಡಿ ಜೆಡಿಎಸ್ ಅಭ್ಯರ್ಥಿ ಧರ್ಮೇಗೌಡರಿಗೆ ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಜಾಗರ ಹೋಬಳಿ ಉಪಾಧ್ಯಕ್ಷ ಎಲೆನ್ ಲೋಬೋ ಮಾತನಾಡಿ, ಜನಸೇವೆ ಉದ್ದೇಶ ಹೊಂದಿ ಮೂರು ಬಾರಿ ಶಾಸಕರಾಗಿದ್ದ ಎಸ್.ಆರ್. ಲಕ್ಷ್ಮಯ್ಯನವರ ನೇರ ನುಡಿ ಸ್ವಭಾವದಿಂದ ಬಡ ಜನರಿಗೆ ಸ್ಪಂದಿಸಿ ಜನಮನ್ನಣೆಗಳಿಸಿದ್ದರು.
ಅದೇ ರೀತಿ ಧರ್ಮೇಗೌಡರು ಸಹಕಾರಿ ಕ್ಷೇತ್ರದಿಂದ ಪಟ್ಟಣ ಪಂಚಾಯಿತಿ ಮೂಲಕ ರೈತರು, ಕೃಷಿಕರು ಸಾಮಾನ್ಯ ಜನರ ನಾಡಿಮಿಡಿತವನ್ನು ಅರ್ಥೈಸಿಕೊಂಡು ಬೀರೂರು ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ತಮ್ಮಗಳ ಆಶೀರ್ವಾದದಿಂದ ಪುನರಾಯ್ಕೆಯಾಗುವ ನಿರೀಕ್ಷೆಯಲ್ಲಿದ್ದು ತಮ್ಮ ಬೆಂಬಲ ಅಗತ್ಯ ಎಂದರು.
ಮುಖಂಡರಾದ ಹರೀಶ್, ಚೇತನ, ನಂದೀಶ್, ಸಿರಿಲ್ ಲೋಬೋ, ದೀಕ್ಷೀತ್ ಗೌಡ, ಕೃಷ್ಣೇಗೌಡ, ಈರೇಗೌಡ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

