ಮತದಾರ ಮೊದಲು ಪರಿಶುದ್ಧನಾಗಲಿ
ಕ.ಪ್ರ.ವಾರ್ತ್ಣೆ ಚಿಕ್ಕಮಗಳೂರು ಏ. 21
ಆದರೆ ಇಂದು ದೇಶದಲ್ಲಿ ಸ್ವಾರ್ಥ, ಭ್ರಷ್ಟಚಾರ ತುಂಬಿ ತುಳುಕಾಡುತ್ತಿದೆ. ಮತದಾರರಾದ ನೀವು ಪರಿಶುದ್ಧರಾಗಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಹೇಳಿದ್ದಾರೆ.
ನಗರದ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪರಿಶುದ್ಧ ಚುನಾವಣೆಯತ್ತ ಒಂದು ಹೆಜ್ಜೆ ಕಾರ್ಯಕ್ರಮದಲ್ಲಿ ಶ್ರೀಗಳವರು ಆಶೀರ್ವಚನ ನೀಡಿದರು.
ಭ್ರಷ್ಟಾಚಾರದ ಕೊಂಬೆಗಳನ್ನು ಕಿತ್ತು ಹಾಕಿದರೆ ಪ್ರಯೋಜನವಿಲ್ಲ. ಬುಡವನ್ನೇ ಕಿತ್ತು ಹಾಕಬೇಕು. ಇಲ್ಲದೆ ಹೋದರೆ ಸುಧಾರಣೆ ಸಾಧ್ಯವಿಲ್ಲ ಎಂದರು.
ಪೂರಕ ಕಾರ್ಯಕ್ರಮ: ನೀತಿ ಸಂಹಿತೆಗೆ ಪೂರಕವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಓಟಿಗಾಗಿ ಗುರುಗಳ ಆಶೀರ್ವದ ಪಡೆಯಲು ಅಭ್ಯರ್ಥಿಗಳು ಹೋಗುತ್ತಾರೆ. ಆದರೆ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳು ಚುನಾವಣೆಯಲ್ಲಿ ಯಾವುದೇ ಅಕ್ರಮದಲ್ಲಿ ಚುನಾವಣೆ ನಡೆಸುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ ಎಂದರು.
ಮತೀಯ ದೃಷ್ಟಿಯಿಂದ ಧರ್ಮಗಳು ಹುಟ್ಟಿಕೊಂಡಿವೆ. ಆದರೆ ದೇವರು ಮಾತ್ರ ಒಂದೇ. ನಂಬಿಕೆ ವಿಚಾರದಲ್ಲಿ ಒಬ್ಬನೇ ದೇವರು. ಅದನ್ನು ಯಾರೂ ಕೂಡ ಅಲ್ಲಗಳೆಯುವುದಿಲ ಎಂದರು.
ಮಠ ಒಂದು ಜಾತಿಗೆ ಸೇರಿದ್ದದಾರೂ ವಿಚಾರಗಳು ಮಾತ್ರ ಜಾತ್ಯತೀತವಾದುದು. ಜಾತಿಗಳನ್ನು ಅಳಿಸಲು ಸಾಧ್ಯವಿಲ್ಲ. ಮಠಗಳು ಜಾತಿ ಜಾತಿಗಳ ನಡುವೆ ಸಾಮರಸ್ಯ ಬೆಳೆಸಬೇಕು. ನಮ್ಮ ಮಠಕ್ಕೆ ಬಂದವರು ಜಾತಿಯ ಶಿಷ್ಯರಲ್ಲ. ಅವರೆಲ್ಲರೂ ವೈಚಾರಿಕ ಶಿಷ್ಯರು. ವೈಚಾರಿಕತೆಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.
ದೇಶಪ್ರೇಮ, ಮೌಲ್ಯವಿತ್ತು: ದೇಶದಲ್ಲಿ ಸ್ವಾತಂತ್ರ ಬಂದ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ, ಭ್ರಷ್ಟಾಚಾರಗಳಿರಲಿಲ್ಲ. ದೇಶ ಪ್ರೇಮ, ಮೌಲ್ಯ ಇತ್ತು. ನೀತಿಯ ಮೇಲೆ ಚುನಾವಣೆಗಳು ನಡೆಯುತ್ತಿದ್ದವು. ಅವರಲ್ಲಿ ಅಪರ್ಣ ಮಾನೋಭಾವ ಇತ್ತು. ನಿಸ್ವಾರ್ಥವನ್ನು ಮೈಗೂಡಿಸಿಗೊಂಡಿದ್ದರು ಎಂದರು.
ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಅಕ್ರಮ ನಡೆದಿದೆ ಎಂದು ಜಿಲ್ಲಾಡಳಿತ ಹೇಳಿದೆ. ಇದು ತಲೆ ತಗ್ಗಿಸುವ ವಿಚಾರ. ಹಿಂದೆ ಜೈಲಿಗೆ ಹೋದವರು ಮಂತ್ರಿಗಳಾಗುತ್ತಿದ್ದರು, ಆದರೆ ಇದೀಗ ಮಂತ್ರಿಗಳಾಗಿ ಜೈಲಿಗೆ ಹೋಗುತ್ತಿದ್ದಾರೆ. ರಾಜಕಾರಣಿಗಳು ಭ್ರಷ್ಟರಾಗಲು ಮತದಾರರೂ ಕಾರಣಕರಾಗಿದ್ದಾರೆ. ಈ ವಾತಾವರಣ ಬದಲಾಗಬೇಕು ಎಂದು ತಿಳಿಸಿದರು.
ಫಾದರ್ ಫ್ಯಾಟ್ರಿಕ್ ಮಾತನಾಡಿ, ಜನಪ್ರತಿನಿಧಿಗಳು ದರ್ಪದಿಂದ ಕೆಲಸ ಮಾಡಬಾರದು. ಸೇವಾ ಮನೋಭಾವನೆ ಇರಬೇಕು ಎಂದರು. ಮಸೀದಿಯ ಗುರುಗಳಾದ ಔರಂಗಬೇಜ್ ಮಾತನಾಡಿ, ದೇವರು ನಮಗೆ ಕೈ ಕೊಟ್ಟಿರುವುದು ದುಡಿಯಲು ಹೊರತು ಭಿಕ್ಷೆ ಬೇಡಲು ಅಲ್ಲ ಎಂದರು.
ಅಭ್ಯರ್ಥಿಗಳು ಹೇಳಿದ್ದು
ಜೆಡಿಯು ಅಭ್ಯರ್ಥಿ ಟಿ. ಹರೀಶ್ ಮಾತನಾಡಿ, ನನ್ನ ಹತ್ತಿರ ದುಡ್ಡಿಲ್ಲ. ನಾನು ಬಡವ, ಆದರೆ ಸ್ವಾಭಿಮಾನಿ. ಚುನಾವಣಾ ಪ್ರಚಾರಕ್ಕಿಂತ ಪರಿಸರ ಮತ್ತು ವಿದ್ಯುತ್ ಉಳಿಸಲು ಜನರಿಗೆ ಅರಿವು ಮೂಡಿಸುತ್ತೇನೆ ಎಂದರು.
ಪಕ್ಷೇತರ ಅಭ್ಯರ್ಥಿ ಸ್ನೇಕ್ ನರೇಶ್ ಮಾತನಾಡಿ, ಹಣಕ್ಕಾಗಿ ಓಟು ಕೊಟ್ಟು ಗುಲಾಮರಾಗಬೇಡಿ. ಕ್ಷೇತ್ರವನ್ನು ಅಭಿವೃದ್ಧಿ ಮಾಡುವವರಿಗೆ ಮತ ಹಾಕಿ ಎಂದರು.
ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಮಾತನಾಡಿ, ಹಣ ಹಂಚದೆ, ಅಕ್ರಮದಲ್ಲಿ ತೊಡಗದೆ ಈ ಚುನಾವಣೆಯನ್ನು ಎದುರಿಸಲಾಗುವುದೆಂದು ಪ್ರಮಾಣ ಮಾಡಿ ಬಂದ ನಂತರದಲ್ಲಿ ಅಕ್ರಮ ನಡೆದಿದೆ.
ಪ್ರಮಾಣ ಮಾಡಿದ ನಮಗೆ ಆತ್ಮಸಾಕ್ಷಿ ಇರಬೇಕು. ನಾಟಕದ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕು. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಆಸೆಯನ್ನು ಹೊಂದಿರುವವರಿಗೆ ಮತದಾರರು ಪಾಠ ಕಲಿಸಬೇಕು ಎಂದರು.
ಉದ್ವೇಗ ಬೇಡ: ಬಿಜೆಪಿ ಅಭ್ಯರ್ಥಿ ಸಚಿವ ಸಿ.ಟಿ. ರವಿ ಮಾತನಾಡಿ, ಇನ್ನೊಬ್ಬರ ಕಡೆ ಬೆರಳು ಮಾಡಿ ತೋರಿಸುವುದಲ್ಲ. ತಮ್ಮ ಆತ್ಮಕ್ಕೆ ಕೇಳಿಕೊಳ್ಳಬೇಕು. ಭೀತಿಯಿಂದ ಹತಾಶ ಭಾವನೆಯಿಂದ ಉದ್ವೇಗಕ್ಕೆ ಒಳಗಾವುದರಲ್ಲಿ ಅರ್ಥವಿಲ್ಲ. ನಮ್ಮ ಯೋಗ್ಯತೆ ನಿಮಗೆ ತಿಳಿದಿದೆ. ಅಧಿಕಾರದಲ್ಲಿದ್ದಾಗ ಯಾರ ತಲೆ ಮೇಲೆ ಕಾಲಿಟ್ಟರು ಎಂಬುದು ನಿಮಗೆ ತಿಳಿದಿದೆ. ಯೋಗ್ಯತೆಯ ಆಧಾರದ ಮೇಲೆ ಆರಿಸಿ ಎಂದು ಹೇಳಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಮಾತನಾಡಿ, ಭ್ರಷ್ಟಚಾರಕ್ಕೆ ಕಾರಣ, ನಮ್ಮನ್ನು ಆಳುವವರು. ಮತದಾರರಲ್ಲ. ಹಸಿದ ಮನಸುಗಳು ಹಣ, ಹೆಂಡ ಮತ್ತು ಸೀರೆಗಳನ್ನು ತೆಗೆದುಕೊಳ್ಳುತ್ತಿವೆ ಎಂದರು.
ಮಾದರಿಯಾಗಲಿ: ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಶ್ರೀಗಳು, ಇದರಿಂದ ಬದಲಾವಣೆಯ ಕ್ರಾಂತಿಯ ಭ್ರಮೆ ಬೇಡ.
ಧರ್ಮ ಗುರುಗಳು ಧರ್ಮ ಸಂದೇಶದ ಮೂಲಕ ಬದಲಾವಣೆ ತರಬೇಕು. ಚಿಕ್ಕಮಗಳೂರು ಕ್ಷೇತ್ರ ಇಡೀ ದೇಶಕ್ಕೆ ಮಾದರಿಯಾಗಬೇಕು. ಕ್ರೀಡಾ ಮನೋಭಾವದಿಂದ ಸೋಲು ಗೆಲುವು ಒಪ್ಪಬೇಕು ಎಂದು ಹೇಳಿದರು.
ಚಿಕ್ಕಮಗಳೂರಿನ ಶ್ರೀ ಜಯಬಸವಾನಂದ ಶ್ರೀ. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ, ಕೆಜೆಪಿ ಅಭ್ಯರ್ಥಿ ವೇದಮೂರ್ತಿ ಮಾತನಾಡಿದರು. ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ಧರ್ಮೇಗೌಡ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

