ಜೀವರಾಜ್ ದಬ್ಬಾಳಿಕೆ ತಿಳಿಸಲು ಕಾರ್ಯಕ್ರಮ: ಸುರೇಶ್
ಕನ್ನಡಪ್ರಭ ವಾರ್ತ್ಣೆ ಕೊಪ್ಪ್ಣ ಏ.22
ಶೃಂಗೇರಿ ಕ್ಷೇತ್ರದಲ್ಲಿ ಸಚಿವ ಡಿ.ಎನ್. ಜೀವರಾಜ್ ಅವರು ಜನಸಮಾನ್ಯರಿಗೆ ಅವಮಾನ, ಅವಹೇಳನೆಗಳಿಂದ ನಿಂದಿಸಿ ದಬ್ಬಾಳಿಕೆ ರಾಜಕಾರಣವನ್ನು ಮಾಡಿರುವ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಜಾಪರಿಷತ್ ವೇದಿಕೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಎಂದು ವೇದಿಕೆ ಮುಖ್ಯಸ್ಥ ಕೆ.ಪಿ. ಸುರೇಶ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬೆಳೆಸು ಉದ್ದೇಶದಿಂದ ಜನ ಪರವಾದ ಹೋರಟದಲ್ಲಿ ತೋಡಗಿಕೊಂಡವರಾದ ಡಿ.ಸಿ. ದಿವಾಕರ್ಗೌಡ, ಚೇಪುಗೋಡು ಶಿವಶಂಕರ್, ರವಿಶಂಕರ್, ರಮೇಶ್, ಕೆ.ಪಿ. ಸುರೇಶ್, ಗುರು ಪ್ರಸಾದ್, ಕೆ.ವಿ. ವಿಶ್ವನಾಥ್, ಹಂಚಿಕೊಳಲು ಜಯಪ್ರಕಾಶ್ ಅವರು ಸೇರಿದಂತೆ ಇನ್ನಿತರನ್ನು ಒಳಗೊಂಡ ಪ್ರಜಾಪರಿಷತ್ ವೇದಿಕೆ ಕಾರ್ಯರೂಪಕ್ಕೆ ತಂದಿದೆ ಎಂದರು.
ಈ ಹಿಂದೆ 2004ರ ವಿಧಾನಸಭಾ ಚುನವಾಣೆಯಲ್ಲಿ ಡಿ.ಎನ್. ಜೀವರಾಜ್ ಅವರೊಂದಿಗೆ ಸೇರಿ ಮೌಲ್ಯಾಧಾರಿತ, ಆದರ್ಶ, ತತ್ವಗಳ ಆಧಾರ ಮೇಲೆ ಮತಗಳನ್ನು ಪಡೆದು ಜಯಗಳಿಸಿದ ನಂತರ ಅಭಿವೃದ್ಧಿ ನೆಪದಲ್ಲಿ ವಿವೇಚನೆ ಇಲ್ಲದ ಕಾಂಕ್ರಿಟ್ ರಸ್ತೆ, ಕೆರೆಗಳನ್ನು ನಿರ್ಮಿಸಿ ಗುತ್ತಿಗೆದಾರರಿಂದ ಕಮಿಷ್ನ್ ಪಡೆದಿದ್ದಾರೆ ಎಂದು ಆರೋಪಿಸಿದರು.
ಅಂದಿನ ಚುನಾವಣೆಯಲ್ಲಿ ಲಕ್ಷಧೀಶ್ವರರಾಗಿದ್ದವರು ಇಂದಿನ ಚುನಾವಣೆಯಲ್ಲಿ ಕೋಟ್ಯಧಿಪತಿಯಾಗಿರುವುದೇ ಅವರ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಸುವರ್ಣಭೂಮಿ ಯೋಜನೆಯ ಸಹಾಯಧನ ಅರ್ಹ ಫಲಾನುಭವಿಗಳಿಗೆ ದೊರೆತಿಲ್ಲ. ಫಾರಂ 50, 53ರಲ್ಲಿ ಅರ್ಜಿಯನ್ನು ನೀಡಿದ ಬಗರ್ಹುಕುಂ ಸಾಗುವಳಿದಾರಿಗೆ ಜಮೀನು ಹಕ್ಕು ಪತ್ರವನ್ನು ನೀಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ನವೀನ್ ಕರವಾನೆ, ಸುದೀಕ್ಕುಮಾರ್ ಮೊರಳ್ಳಿ, ಕಮಾಲಿ, ರಾಘವೇಂದ್ರ ಕಾಮತ್, ಪ್ರಜಾಪರಿಷತ್ ವೇದಿಕೆ ಪ್ರಮುಖರಾದ ಡಿ.ಸಿ.ದಿವಾಕರ್ಗೌಡ, ಚೇಪುಗೋಡು ಶಿವಶಂಕರ್, ರವಿಶಂಕರ್, ರಮೇಶ್, ಕೆ.ಪಿ. ಸುರೇಶ್, ಗುರು ಪ್ರಸಾದ್, ಕೆ.ವಿ. ವಿಶ್ವನಾಥ್, ಹಂಚಿಕೊಳಲು ಜಯಪ್ರಕಾಶ್ ಮತ್ತಿತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

