ಚಿಕ್ಕಮಗಳೂರು

ಸ್ಥಿರ, ಸದೃಢ ಸರ್ಕಾರಕ್ಕಾಗಿ ಕೈ ಬೆಂಬಲಿಸಿ

Published On :

ಬದಲಾವಣೆ ಗಾಳಿಯಲ್ಲಿ ಬಿಜೆಪಿ ಕೊಚ್ಚಿಹೋಗಲಿದೆ: ಹಿರೇಮಗಳೂರು ಪುಟ್ಟಸ್ವಾಮಿ


ಕಪ್ರ ವಾರ್ತೆ,ಚಿಕ್ಕಮಗಳೂರು, ಏ.23
ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜನರಲ್ಲಿ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ. ಈ ಬಿರುಗಾಳಿಯಲ್ಲಿ ಬಿಜೆಪಿ ಅಭ್ಯರ್ಥಿ ಕೊಚ್ಚಿ ಹೋಗುವುದು ನಿಶ್ಚಿತವಾಗಿದೆ ಎಂದು ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಹೇಳಿದ್ದಾರೆ.
 ಸಖರಾಯಪಟ್ಟಣ, ಹಳೆಹಟ್ಟಿ, ಹೊನ್ನವರಿಕೆ, ಪಿಳ್ಳೇನಹಳ್ಳಿ, ಬ್ಯಾಡರಹಳ್ಳಿ, ಹುಲಿಕೆರೆ, ಗಂಗನಬಸವನಹಳ್ಳಿ, ಹೂಡಿಗರಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಸ್ಥಿರ, ಸದೃಢ, ಅಭಿವೃದ್ಧಿ ಪರವಾಗಿ ಕೆಲಸ ಮಾಡುವ ಏಕೈಕ ಪಕ್ಷ ಕಾಂಗ್ರೆಸ್. ಒಂದು ಕಡೆ ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಅಭ್ಯರ್ಥಿ ರವಿ ಪರವಾಗಿ ಆ ಪಕ್ಷದ ಮುಖಂಡರು ಮತಯಾಚಿಸುತ್ತಿದ್ದಾರೆ. ಆದರೆ, ಇನ್ನೊಂದು ಕಡೆ ಸಮಸ್ಯೆಗಳು ತಾಂಡವಾಡುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ಸಮಸ್ಯೆಗಳನ್ನು ಮರೆಮಾಚುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ ಎಂದರು.
ನೀರಿನ ಸಮಸ್ಯೆ: ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಮೂಲ ಸೌಕರ್ಯಗಳಾದ ಮನೆ, ನೀರು, ನಿವೇಶನ, ರಸ್ತೆ, ಚರಂಡಿಗಳನ್ನು ಸಮರ್ಪಕವಾಗಿ ಕೊಡಲು ಸಾಧ್ಯವಾಗಿಲ್ಲ. ದೇವನೂರಿಗೆ ಸಮೀಪದ ಮಂಗೇನಹಳ್ಳಿಯಲ್ಲಿ ಕುರುಬರು ಸೇರಿದಂತೆ ಹಿಂದುಳಿದ ಜನಾಂಗದವರಿಗೆ ಸೂಕ್ತ ಮನೆಗಳು ದೊರಕಿಲ್ಲ. ಹೆಚ್ಚಿನ ಜನರುಗೆ ತೆಂಗಿನ ಸೋಗೆಗಳ ಮನೆಗಳನ್ನೆ ಕಟ್ಟಿಕೊಂಡಿದ್ದಾರೆ. ನೀರಿನ ಸಮಸ್ಯೆ ತೀವ್ರವಾಗಿದೆ. ಡಿ.ಕಾರೇಹಳ್ಳಿಗೆ ಸಮೀಪದ ಬೋವಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರ್ ಕಂಡಿಲ್ಲ. ಊರಿನ ರಸ್ತೆ ಕಾಂಕ್ರಿಟ್ ಕಂಡಿಲ್ಲ. ಜನರ ಸ್ಥಿತಿ ಶೋಚನಿಯವಾಗಿದೆ. ಇದು ಯಾವ ಅಭಿವೃದ್ಧಿ ಎಂಬುದರ ಬಗ್ಗೆ ಸಚಿವ ಸಿ.ಟಿ. ರವಿ ಉತ್ತರಿಸಬೇಕು ಎಂದು ಹೇಳಿದರು.
ಪ್ರಮಾಣ ಕಡೆಗಣನೆ: ವೀರಶೈವ ಮುಖಂಡ ಕಲ್ಮರಡಪ್ಪ ಮಾತನಾಡಿ, ಜನರು ಬಿಜೆಪಿ ಸರಕಾರದಿಂದ ಬೇಸತ್ತು ಹೋಗಿದ್ದಾರೆ. ಚುನಾವಣೆಯನ್ನು ಮುಕ್ತ ಮತ್ತು ಸ್ವಚ್ಛವಾಗಿ ನಡೆಸುವ ಉದ್ದೇಶದಿಂದ ಸಿರಿಗೆರೆ ಬೃಹನ್ಮಠದ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕೈಗೊಂಡ ಪ್ರಮಾಣವನ್ನು ಕಡೆಗಣಿಸಿ ಬಿಜೆಪಿ ಮುಖಂಡರು ಹೆಂಡ, ಹಣ, ಸೀರೆ ಹಂಚುತ್ತಿದ್ದಾರೆ. ಅವರಿಗೆ ಶಾಪ ತಟ್ಟುತ್ತದೆ. ನಮ್ಮ ಪಕ್ಷದ ಪ್ರಾಮಾಣಿಕ, ಶಾಂತ ಸ್ವಭಾವದ ಶಾಂತೇಗೌಡ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
 ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎನ್.ಎಸ್. ಚಂದ್ರಪ್ಪ ಮಾತನಾಡಿ, ಬಿಜೆಪಿ ಸರಕಾರದ ಆಡಳಿತವನ್ನು ಜನರ ಕಂಡಿದ್ದಾರೆ. ಅವರ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಇತಿಹಾಸದಲ್ಲಿ ಮುಖ್ಯ ಮಂತ್ರಿಯೊಬ್ಬ ಜೈಲು ಸೇರಿರುವುದನ್ನು ಜನರು ಕಂಡಿದ್ದಾರೆ. ಇಂಥಾ ಸರಕಾರ ಮತ್ತೆ ಅಸ್ಥಿತ್ವಕ್ಕೆ ಬರಬೇಕೆ ಎಂಬುದನ್ನು ಜನರು ಒಮ್ಮೆ ಯೋಚಿಸಬೇಕು ಎಂದು ಹೇಳಿದರು.
ಕಿಸಾನ್ ಘಟಕ ಅಧ್ಯಕ್ಷ ಎನ್.ಡಿ. ಚಂದ್ರಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧನಂಜಯ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭಗವಾನ್, ಗಂಗಬಸವನಹಳ್ಳಿಯ ಚಂದ್ರೇಗೌಡ, ನಿಂಗೇಗೌಡ, ಹಳೆಹಟ್ಟಿಯ ಸೀತಾರಾಮನಾಯ್ಕ, ಪ್ರವೀಣ್, ಮುಖಂಡರಾದ ನಗರಸಭೆ ಮಾಜಿ ಸದಸ್ಯ ಚಂದ್ರೇಗೌಡ, ಜಗದೀಶ್, ಕೀರ್ತಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.