ವಿವಿಧ ಪಕ್ಷಗಳು ಮತದಾರರ ಓಲೈಕೆಯಲ್ಲಿ ನಿರತ
ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು, ಪ್ರಮುಖ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ಈ ಬಾರಿ 8 ಮಂದಿ ಕಣದಲ್ಲಿದ್ದು, ಬಿಜೆಪಿಯಿಂದ ಡಿ.ಎನ್. ಜೀವರಾಜ್, ಕಾಂಗ್ರೆಸ್ನಿಂದ ಟಿ.ಡಿ. ರಾಜೇಗೌಡ, ಜೆಡಿಎಸ್ನಿಂದ ತಳಕಾನೆ ರಾಜೇಂದ್ರ ಈ ಭಾರಿಯ ಪ್ರಮುಖ ಸ್ಪರ್ಧಿಗಳು. ಇಲ್ಲಿ ಎಷ್ಟು ಮಂದಿ ಸ್ಪರ್ಧೆ ಮಾಡಿದರೂ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಎಂಬ ಮಾತು ಮೊದಲನೆ ಹಂತದಲ್ಲಿತ್ತು. ನಂತರದಲ್ಲಿ ಜೆಡಿಎಸ್ ಸಾಕಷ್ಟು ಪ್ರಚಾರ ವೇಗ ಪಡೆದುಕೊಳ್ಳದೆ ಇರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಇದರಿಂದ ಜೆಡಿಎಸ್ ಕಾರ್ಯಕರ್ತರು ಮತ್ತು ಮತದಾರಲ್ಲಿ ಗೊಂದಲದ ವತಾವರಣ ಉಂಟಾಗಿರುವುದನ್ನು ಗಮನಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಅವರನ್ನು ತಮ್ಮ ಪಕ್ಷದತ್ತ ಸೆಳೆಯುಲು ತೆರಮರೆಯ ತಂತ್ರಗಾರಿಕೆ ರೂಪಿಸಿ ಕೆಲವು ಕಡೆ ಸಫಲರಾಗಿದ್ದು, ಇನ್ನೂ ಕೆಲವು ಕಡೆ ವಿಫಲವಾಗಿದ್ದಾರೆ ಎನ್ನಲಾಗುತ್ತಿದೆ.
ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವರೆ ಹೊರತು ಕ್ಷೇತ್ರದ ಸಮಸ್ಯೆಗಳಾದ ಒತ್ತುವರಿ ಸಮಸ್ಯೆ, ಅಡಕೆ ಹಳದಿ ರೋಗ, ಉದ್ಯೋಗ ಕೊರತೆ, ಹುಲಿಯೋಜನೆ, ಕುಡಿಯುವ ನೀರು ಇಂತಹ ಸಮಸ್ಯೆಗಳ ಬಗ್ಗೆ ಯಾವ ಪಕ್ಷದ ಅಭ್ಯರ್ಥಿಗಳು ಚಕಾರವೆತ್ತದೆ ಇರುವುದರಿಂದ ಮತದಾರಲ್ಲಿ ಚುನಾವಣೆಯ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪ್ರಚಾರದ ಸಭೆಗಳಲ್ಲಿ ಸಮ ಪ್ರಮಾಣದ ಜನಸ್ತೋಮ ಸೇರುತ್ತಿದ್ದು, ಈ ಭಾರಿಯ ಶೃಂಗೇರಿ ಕ್ಷೇತ್ರದ ಫಲಿತಾಂಶದ ಸ್ಪಷ್ಟ ಚಿತ್ರಣ ಗೋಚರವಾಗುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

