ಚಿಕ್ಕಮಗಳೂರು

ಆಮಿಷದಿಂದ ಜನರನ್ನು ಕೊಳ್ಳಲು ಸಾಧ್ಯವಿಲ್ಲ'

Published On :


ಕ.ಪ್ರ.ವಾರ್ತೆ ಟಿ ಕಡೂರು ಟಿ  ಏ.25
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರ ಪ್ರೀತಿ ಹಾಗೂ ವಿಶ್ವಾಸವು ಮತಗಳಾಗಿ ಜೆಡಿಎಸ್‌ಗೆ ಪರಿವರ್ತನೆಯಾಗಲಿದ್ದು, ಯಾವುದೇ ಹಣ ಆಮಿಷದಿಂದ ಮತದಾರರನ್ನು ಕೊಳ್ಳಲಾಗುವುದಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತ ಹೇಳಿದರು.
ಕಡೂರು ವಿಧಾನಸಭಾ ಕ್ಷೇತ್ರದ ಕಲ್ಲಾಪುರ,ಬಿಳುವಾಲ, ಮಚ್ಚೇರಿ, ಎಂ. ಕೋಡಿಹಳ್ಳಿ, ಮಲ್ಲೇಶ್ವರ ಮತ್ತಿತರ ಗ್ರಾಮಗಳಲ್ಲಿ ಮತಯಾಚನೆ ಸಮಯದಲ್ಲಿ ಮಾತನಾಡಿ, ಇಡೀ ಕ್ಷೇತ್ರಾದ್ಯಂತ ಜನರೊಂದಿಗಿನ ಅಭಿಮಾನ ಹಾಗೂ ಪ್ರೀತಿಯೊಂದಿಗೆ ರಾಜಕಾರಣ ಮಾಡಿಕೊಂಡು ಬುರುತ್ತಿರುವುದಕ್ಕೆ ಕ್ಷೇತ್ರದ ನನ್ನ ಮತದಾರ ಪ್ರಭುಗಳು ಸಾಕ್ಷಿಯಾಗಿದ್ದಾರೆ ಎಂದರು.
ಜನರೇ ದಾರಿ: ಹಣವಿಲ್ಲದೆ ಜನರ ಪ್ರೀತಿಯಿಂದ ರಾಜಕಾರಣ ಮಾಡುತ್ತಿರುವ ನನಗೆ ಜನರೇ ನನ್ನ ನಾಯಕರಾಗಿದ್ದು, ಅವರೇ ನನ್ನ ಮುಂದಿನ ರಾಜಕೀಯ ತೋರಿಸುವವರಾಗಿದ್ದಾರೆ ಎಂದು ಹೇಳಿದರು.
ಒಮ್ಮತದ ನಿರ್ಧಾರ: ಮುಖಂಡರಾದ ಕೆ.ಎಸ್. ರಮೇಶ್, ಮಚ್ಚೇರಿ ಕರಿಯಪ್ಪ ಮತ್ತು ಎಚ್. ಉಮೇಶ್ ಮಾತನಾಡಿದರು.
 ಉತ್ತಮ ವ್ಯಕ್ತಿತ್ವದಿಂದ ಬಡವರ ನೋವು ನಲಿವುಗಳಿಗೆ ಸದಾಕಾಲ ಸ್ಪಂದಿಸುವ ಮತ್ತು ಕ್ಷೇತ್ರದ ಪ್ರತಿಯೊಬ್ಬರ ಒಡನಾಡಿಯಾಗಿ ಕೆಲಸ ಮಾಡುತ್ತಿರುವ ವೈಎಸ್‌ವಿ ಒಮ್ಮತದ ತೀರ್ಮಾನ ಕೈಗೊಂಡು ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಭಂಡಾರಿ ಶ್ರೀನಿವಾಸ್, ಎನ್. ಇಮಾಮ್, ಕೆ.ಹೆಚ್. ಲಕ್ಕಣ್ಣ, ಕೆ.ಎಸ್. ರಮೇಶ್, ಹೆಚ್. ಉಮೇಶ್, ಕಂಸಾಗರ ಶೇಖರ್, ತಮ್ಮಯಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.