ಚಿಕ್ಕಮಗಳೂರು

ಚುನಾವಣಾ ಪ್ರಕ್ರಿಯೆಗೆ ಸಕಲ ಸಜ್ಜು: ನಾಯ್ಕ

Published On :

ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ 1,49,980 ಮಂದಿ ಮತದಾರು, 249 ಮತಗಟ್ಟೆಗಳು ಇದ್ದು, ಚುನಾವಣೆಗೆ ಬೇಕಾದ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶೃಂಗೇರಿ ಕ್ಷೇತ್ರದ ಚುನಾವಣಾಧಿಕಾರಿ ರತ್ನಕಾರ್ ನಾಯ್ಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ 74,781 ಮಂದಿ ಪುರುಷರು, 75,197  ಸ್ತ್ರೀಯರು ಇದ್ದಾರೆ. ಶೃಂಗೇರಿ ತಾಲೂಕಿನಲ್ಲಿ 49, ಕೊಪ್ಪ ತಾಲೂಕಿನಲ್ಲಿ 106, ಎನ್.ಆರ್.ಪುರ ತಾಲೂಕಿನಲ್ಲಿ 94 ಮತಗಟ್ಟೆಗಳು ಇದ್ದು, ಇವುಗಳಲ್ಲಿ 90 ಅತಿಸೂಕ್ಷ್ಮ,93 ಸೂಕ್ಷ್ಮ, 66 ಸಾಮಾನ್ಯ ಮತಗಟ್ಟೆಳೆಂದು ಗುರುತಿಸಲಾಗಿದೆ ಎಂದರು.
ತೀವ್ರ ನಕ್ಸಲ್ ಪ್ರದೇಶ: ಇದರಲ್ಲಿ ತೀವ್ರ  ನಕ್ಸಲ್ ಪ್ರದೇಶದ ಮತಗಟ್ಟೆಗಳನ್ನು ಕೊಪ್ಪ ತಾಲೂಕಿನಲ್ಲಿ 24 ಮತ್ತು ಶೃಂಗೇರಿ ತಾಲೂಕಿನಲ್ಲಿ 18 ಮತಗಟ್ಟೆಗಳು ಎಂದು ಗುರುತಿಸಲಾಗಿದ್ದು, 24 ನೀತಿ ಸಂಹಿತೆ ಉಲ್ಲಂಘನಾ ತಂಡಗಳನ್ನು ರಚಿಸಲಾಗಿದ್ದು, ದಿನದ 24 ಗಂಟೆಗಳ ಕಾಲದ ಕಾರ್ಯನಿರತವಾಗಿರುತ್ತಾರೆ ಎಂದವರು ತಿಳಿಸಿದರು.
  ಇದುವರೆಗೆ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ಸಾಮೂಹಿಕವಾಗಿ ಊಟ ಬಡಿಸಿದ್ದರಿಂದ ಸುರೇಶ್ ಎಂಬುವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಗಡಿಕಲ್ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ದಾಖಲೆಗಳಿಲ್ಲದ ರು. 2.66 ಲಕ್ಷ ನಗದು  ವಶಪಡಿಸಿಕೊಂಡು ಕಾರ್ಕಳ ಮೂಲದ ರವೀಂದ್ರ ಪ್ರಭು ಎನ್ನುವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.