ಕಪ್ಪುಚುಕ್ಕೆ ಇಲ್ಲದಂತೆ ಉತ್ತಮ ಆಡಳಿತ
ಕ.ಪ್ರ.ವಾರ್ತೆ, ಕಡೂರು, ಏ.26 ಕೇವಲ 9 ತಿಂಗಳಲ್ಲಿ ಸರ್ಕಾರಕ್ಕೆ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ರಾಜ್ಯದ ರೈತರ ಸಾಲಮನ್ನಾ ಮಾಡಿ ಉತ್ತಮ ಆಡಳಿತ ನೀಡಿದ ಬಿಜೆಪಿ ಮತ್ತೊಮ್ಮೆ ಜನ ಸಾಮಾನ್ಯರ ಪರವಾದ ಪಕ್ಷವಾಗಿ ಬಹೊರ ಹೊಮ್ಮುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉದಯಿಸಲಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಅವರು ಕಡೂರು ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೀರೂರು ದೇವರಾಜು ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಬಡ್ಡಿರಹಿತ ಸಾಲ: ನಾನು ಮುಖ್ಯಮಂತ್ರಿಯಾದಾಗ ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಬರಗಾಲದಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರ ಸ್ಥಿತಿ ಅರಿತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ರೈತರ ಸಾಲಮನ್ನಾ ಮಾಡಲಾಯಿತು. ಅವಧಿ ಮೀರಿದ ರೈತರ ರು. 1,500 ಕೋಟಿ ಸಾಲ ಮರುಪಾವತಿ ಮಾಡಲು ಅವಕಾಶ ಮಾಡಿಕೊಟ್ಟು ಬಡ್ಡಿ ರಹಿತ ಸಾಲ ನೀಡಲಾಯಿತು ಎಂದವರು ಹೇಳಿದರು.
16,50,000 ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ, 6.50 ಲಕ್ಷ ಬೈಸಿಕಲ್ ವಿತರಿಸಲಾಗಿದ್ದು, ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ 23 ಶಾಶ್ವತ ನೀರಾವರಿ ಯೋಜನೆಗಳನ್ನು ಮುಗಿಸಿ ಜನರಿಗೆ ನೀರು ನೀಡುವ ಮೂಲಕ ರು. 10 ಸಾವಿರ ಕೋಟಿ ಖರ್ಚು ಮಾಡಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ ಎಂದರು.
ಅಭಿವೃದ್ಧಿಗೆ ಆದ್ಯತೆ: ಲೋಕೋಪಯೋಗಿ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಉದ್ದೇಶಿತ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿ, ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು ಎಂದರು.
ಜೆಡಿಎಸ್ ಹಳೇ ಮೈಸೂರು ಸೇರಿದಂತೆ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಗೆಲ್ಲಲಿರುವುದರಿಂದ ಜೆಡಿಎಸ್ನಿಂದ ಸರ್ಕಾರ ರಚನೆ ಸಾಧ್ಯವಿಲ್ಲ. ಕೆಜೆಪಿ ಕೇವಲ ಐದಾರು ಸ್ಥಾನ ಮಾತ್ರ ಗಳಿಸಲಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ ಎಂದರು.
ರಾಜ್ಯದಲ್ಲಿ ಮತ್ತೊಮ್ಮೆ ರಾಜ್ಯದ ಜನರ ಅಭಿಲಾಷೆಗೆ ತಕ್ಕಂತೆ ಪಾರದರ್ಶಕ, ಸ್ವಚ್ಛ, ಚಿಕ್ಕ ಮತ್ತು ಚೊಕ್ಕ ಆಡಳಿತ ನೀಡಲು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ವ್ಯಕ್ತಿಯಾಗಿರುವ ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜುರವರನ್ನು ಗೆಲ್ಲಿಸಿ ನನಗೆ ನೀಡಿ ಎಂದು ಮನವಿ ಮಾಡಿದರು.
ಶಾಸಕ ಡಾ ವೈ.ಸಿ. ವಿಶ್ವನಾಥ್, ಸಿ.ಟಿ. ರವಿ, ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜು, ಬಿಜೆಪಿ ಮುಖಂಡ ಕಾಮನಕೆರೆ ಶಶಿಧರ್, ಎಂ.ಕೆ. ಪ್ರಾಣೇಶ್, ರೇಖಾ ಹುಲಿಯಪ್ಪಗೌಡ, ಅರೇಕಲ್ ಪ್ರಕಾಶ್, ಪದ್ಮಾ ಚಂದ್ರಪ್ಪ, ಮಾಲಿನಿಬಾಯಿ ರಾಜನಾಯ್ಕ, ಶಶಿರೇಖಾ ಎಂ.ಆರ್.ಟಿ. ಸುರೇಶ್, ಕೆ.ಎಚ್. ಶಂಕರ್, ಎಸ್. ರಮೇಶ್, ಕಲ್ಮರುಡಪ್ಪ, ಶಾಂತಾ ದೇವರಾಜು, ಕೆ.ಎಸ್. ಸೋಮ ಪ್ರಸಾದ್, ಕೆ.ಟಿ. ಜಗನ್ನಾಥ್, ಎ.ಮಣಿ, ಆರ್. ಶಿವಕುಮಾರ್, ನಾಗೇಂದ್ರ ದೇವರಾಜ್, ರುದ್ರೇಗೌಡ, ಶಿವಶಂಕರ್, ಟೊಮೆಟೊ ಗೌಡ, ಜಿಗಣೇಹಳ್ಳಿ ಮಂಜು , ಕುರುಬಗೆರೆ ಮಹೇಶ್, ಸ್ಮಿತಾ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

