ಚಿಕ್ಕಮಗಳೂರು

ಕೆಜೆಪಿ ಗೆಲುವು ನಿಶ್ಚಿತ: ವಿಶ್ವಾಸ

Published On :

ತರೀಕೆರೆ: ಕೆಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್ ಅವರ ಗೆಲವು ನಿಶ್ಚಿತ ಎಂದು ಕೆಜೆಪಿ ಮುಖಂಡರು ಮಿಲ್ಟ್ರಿ ಶ್ರೀನಿವಾಸ್ ಹೇಳಿದರು.  ಅವರು ಪಟ್ಟಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಹಮಾಲಿ ಕಾರ್ಮಿಕರ ಸಂಘದ ಸದಸ್ಯರು ಕೆಜೆಪಿಗೆ ಸೇರ್ಪಡೆ ಸಮಾರಂಭದ ಸಂದರ್ಭದಲ್ಲಿ ಮಾತನಾಡಿದರು. ಕ್ಷೇತ್ರದ ವಿಧಾನಸಭಾ ಚುನಾವಣೆಯ ಕೆಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್ ಸಾತ್ವಿಕ ಸ್ವಭಾವದವರಾಗಿದ್ದು, ತಾಲೂಕಿನಾದ್ಯಂತ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮ ನಿರ್ವಹಿಸಿದ್ದು, ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸ ಪಡೆದಿದ್ದಾರೆ ಎಂದರು. ಕೆಜೆಪಿ ಮುಖಂಡ ಡಿ.ಎಸ್.ಗಿರೀಶ್ ಅವರು ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದ  ಹಮಾಲಿ ಕಾರ್ಮಿಕರ ಸಂಘದ ಸದಸ್ಯರನ್ನು ಸ್ವಾಗತಿಸಿದರು. ಪಕ್ಷದ ಮುಖಂಡ ಸತೀಶ್ ಕುಮಾರ್, ಬೇಲೇನಹಳ್ಳಿ ಸೋಮಶೇಖರ್, ಮೋಹನ್‌ಕುಮಾರ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಇಂದು ಶೃಂಗೇರಿಗೆ ಅನಂತ್ ಕುಮಾರ್
ಶೃಂಗೇರಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಸೋಮವಾರ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪಪಂ ಕಚೇರಿ ಮುಂಭಾಗದ ಗೌರೀಶಂಕರ ಸಭಾಂಗಣದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಪರ ಮತಯಾಚಿಸಲಿದ್ದಾರೆ. ರಾಜ್ಯ ನಾಯಕರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಮತಯಾಚನೆ
ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನ ಕುಮಾರ್ ಪರವಾಗಿ ನಗರದ ಬಿ.ಬಿ ರಸ್ತೆ ನಿವಾಸಿಗಳು ಭಾನುವಾರ ಮತ ಯಾಚಿಸಿದರು. ಇಲ್ಲಿನ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 8.30ಕ್ಕೆ ಪೂಜೆ ಸಲ್ಲಿಸಿ, ನಂತರ ಮತಯಾಚಿಸಿದರು. ತಿಮ್ಮಪ್ಪನಕೊಪ್ಪಲು, ಕುಂಬಾರಗುಂಡಿಯ ಸುತ್ತ- ಮುತ್ತ ಪ್ರಚಾರ ಮಾಡಿದರು. ಈ ವೇಳೆ ಹರಿಪ್ರಿಯ ಭಜನಾ ಮಂಡಳಿಯ ಅಧ್ಯಕ್ಷೆ ರುಕ್ಮಿಣಿ ವೇದವ್ಯಾಸ, ವಾರಿಜಾ ಜಗದೀಶ್, ಗಾಯತ್ರಿ ಕೃಷ್ಣಮೂರ್ತಿ, ಶೇಷಪ್ಪ ಸ್ಥಳೀಯರು ಇದ್ದರು.
ಕೆಜೆಪಿಗೆ ಸೇರ್ಪಡೆ
ಜೋಗ್‌ಫಾಲ್ಸ್: ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ರಾಜು ಇತ್ತೀಚಿಗೆ ಜೋಗ್ ಕಾರ್ಗಲ್ ಪಪಂ ವ್ಯಾಪ್ತಿಯ ಅಧ್ಯಕ್ಷ ಜೆ.ಎಸ್. ಚಂದ್ರಶೇಖರ್ ಭಟ್ ಅವರ ಮುಖಂಡತ್ವದಲ್ಲಿ ಕೆಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಜೋಗ್ ಕಾರ್ಗಲ್ ಪಪಂ ವ್ಯಾಪ್ತಿಯ ಅಧ್ಯಕ್ಷ ಚಂದ್ರಶೇಖರ್ ಭಟ್, ಬಿಎಸ್‌ವೈ ಅಭಿವೃದ್ಧಿ ಕಾರ್ಯಗಳನ್ನು ಕಂಡು ಮತ್ತು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ಬೆಂಬಲಿಸಲು ಕೆಜೆಪಿಗೆ ಹೆಚ್ಚಿನ ಜನ ಸೇರ್ಪಡೆಗೊಳ್ಳುತ್ತಿದ್ದು, ಭ್ರಷ್ಟಾಚಾರ ಮುಕ್ತ ಮತ್ತು ಅಭಿವೃದ್ಧಿ ಪರ ಚಿಂತನೆ ಹೊಂದಿರುವ  ಅಭ್ಯರ್ಥಿ ಬಿ.ಆರ್. ಜಯಂತ್‌ರನ್ನು ಬೆಂಬಲಿಸಲು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.