ಚಿಕ್ಕಮಗಳೂರು

ಅರಣ್ಯ ಉಪ ಉತ್ಪನ್ನ ಹರಾಜು ಪದ್ಧತಿ ಕೈಬಿಡಿ

Published On :

ಕಾರಣಗಿರಿ (ಹೊಸನಗರ): ಅಕೇಶಿಯಾವನ್ನು ಅರಣ್ಯ ಭೂಮಿಯಲ್ಲಿ ಬೆಳೆಸುವುದನ್ನು ನಿಷೇಧ ಮಾಡಿದ್ದರೂ ಮಲೆನಾಡಿನಲ್ಲಿ ಏಕ ಜಾತಿ ನೆಡತೋಪು ಮತ್ತು ಅಕೇಶಿಯಾಕ್ಕೆ ಆದ್ಯತೆ ನೀಡುವ ಪದ್ಧತಿ ಜಾರಿಯಲ್ಲಿದ್ದು, ಇದನ್ನು ಅರಣ್ಯ ಇಲಾಖೆ ನಿಲ್ಲಿಸಬೇಕು ಎಂದು ವೃಕ್ಷ ಮಿತ್ರ ಸಮ್ಮೇಳನ ಹಕ್ಕೊತ್ತಾಯ ಮಾಡಿದೆ.
ಗ್ರಾಮ ಭಾರತಿ ಟ್ರಸ್ಟ್ ಹಾಗೂ ವೃಕ್ಷಲಕ್ಷ ಆಂದೋಲನದ ಆಶ್ರಯದಲ್ಲಿ ಶುಕ್ರವಾರ ಕಾರಣಗಿರಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ನಿರ್ಣಯ ಸೇರಿದಂತೆ ಹಲವು ಪರಿಸರ ರಕ್ಷಣೆಗೆ ಪೂರಕವಾದ ನಿರ್ಣಯ ಕೈಗೊಳ್ಳಲಾಯಿತು.
- ಪಶ್ಚಿಮಘಟ್ಟದ ನದೀ ಕಣಿವೆಗಳಲ್ಲಿ ಬೃಹತ್ ವಿದ್ಯುತ್ ಹಾಗೂ ಗಣಿಗಾರಿಕೆ ಯೋಜನೆಗಳನ್ನು ಕೈಬಿಡಬೇಕು, ಅರಣ್ಯ ಇಲಾಖಎ ಅರಣ್ಯ ಉಪ ಉತ್ಪನ್ನ ಹರಾಜು ಪದ್ಧತಿ ಕೈಬಿಡಬೇಕು.
- ಶಿವಮೊಗ್ಗ ಜಿಲ್ಲೆಯ ಅರಣ್ಯ ಪರಿಸ್ಥಿತಿ ವರದಿ ಆಧರಿಸಿ ವಿಶೇಷ ಅರಣ್ಯ ಸಂರಕ್ಷಣಾ ಯೋಜನೆಯನ್ನು ರೂಪಿಸಬೇಕು ಹಾಗೂ ಗ್ರಾಮ ಅರಣ್ಯ ಸಮಿತಿ ಮೂಲಕ ಸರ್ಕಾರ ಯೋಜನೆ ಜಾರಿ ಮಾಡಬೇಕು.
- ಶರಾವತಿ ಅಭಯಾರಣ್ಯ ಹಾಗೂ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ತಲಾ 10 ಪರಿಸರ ಅಭಿವೃದ್ಧಿ ಸಮಿತಿ ರಚಿಸಬೇಕು. ಕಾನು ಅರಣ್ಯ ಸಂರಕ್ಷಣಾ ಯೋಜನೆಯನ್ನು 2012-13ರಲ್ಲಿ ಜಾರಿ ಮಾಡಲಾಗಿತ್ತು, ಈ ಯೋಜನೆಯನ್ನು 2013-14ರಲ್ಲಿ ಮುಂದುವರಿಸಬೇಕು.
- ಅರಣ್ಯ ಜನಸಂಪರ್ಕ ಸಭೆಗಳನ್ನು ಅರಣ್ಯ ಇಲಾಖೆ ಹಾಗೂ ರೆವೆನ್ಯೂ ಇಲಾಖೆಯವರು ಜಂಟಿಯಾಗಿ ನಡೆಸಬೇಕು. ವನವಾಸಿಗಳಿಗೆ ಅರಣ್ಯ ಅಂಚಿನ ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು, ಅವರ ಅಹವಾಲಿಗೆ ಸ್ಪಂದನೆ ನೀಡಬೇಕು. ಪಶ್ಚಿಮಘಟ್ಟ ಕಾರ್ಯಪಡೆ ನೀಡಿದ ಶಿಫಾರಸನ್ನು ಸರ್ಕಾರ ಜಾರಿಗೊಳಿಸಬೇಕು ಹಾಗೂ ಪಶ್ಚಿಮಘಟ್ಟ ಉಳಿಸಿ ಆಂದೋಲನದಲ್ಲಿ ರೈತರು ತೊಡಗಿಸಿಕೊಳ್ಳುವಂತೆ ಸಮ್ಮೇಳನ ಕರೆ ನೀಡಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.