ಸುಳ್ಳಿನ ರಾಜಕಾರಣ ಮಾಡಿದ್ದರೆ ಆಯ್ಕೆಯಾಗುತ್ತಿರಲಿಲ್ಲ
ಕ.ಪ್ರ.ವಾರ್ತೆ, ಕಡೂರು, ಆ.2
ಶಾಸಕರಾದ ವೈ.ಎಸ್.ವಿ. ದತ್ತ ಸುಳ್ಳು ಹೇಳಿ ರಾಜಕಾರಣ ಮಾಡಿದ್ದರೆ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜನರ ಪ್ರೀತಿ ಗಳಿಸುವ ಮೂಲಕ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲು ಸಾದ್ಯವಾಗುತ್ತಿರಲಿಲ್ಲ ಎಂಬುದನ್ನು ಕಾಂಗ್ರೆಸ್ ಮುಖಂಡರು ತಿಳಿದುಕೊಳ್ಳಬೇಕು ಎಂದು ಕಡೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪತ್ರಿಕೆಗಳಲ್ಲಿ ಜಿಲ್ಲಾ ಕಾಂಗ್ರೆಸ್ನ ಮಾಧ್ಯಮ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಅವರು, ದತ್ತ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಡೂರು ಬೀರೂರು ಪಟ್ಟಣಕ್ಕೆ ನೀರೊದಗಿಸುವ ನೆನೆಗುದಿಗೆ ಬಿದ್ದಿದ್ದ ಭದ್ರಾ ಯೋಜನೆ ಜಾರಿ ಕುರಿತಂತೆ ದತ್ತ ನಾನೇ ಸಂಪೂರ್ಣ ಕಾರಣ ಎಂದು ಎಲ್ಲಿಯೂ ಹೇಳಲಿಲ್ಲ.
ಪ್ರಾಮಾಣಕ ಪ್ರಯತ್ನ: ಈ ಹಿಂದಿನ ಶಾಸಕರೂ ಕೂಡ ಪ್ರಯತ್ನಿಸಿದ್ದು, ವಿಳಂಬಕ್ಕೆ ಕಾರಣವಾಗಿದ್ದ ಕಾನೂನು ತೊಡಕು ನಿವಾರಣೆ ಮಾಡುವ ಪ್ರಯತ್ನ ಮಾಡುವ ಮೂಲಕ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ ಎಂದವರು ಹೇಳಿದರು.
ಅವರು ಮಾಡಿರುವ ಪ್ರಯತ್ನದ ಕುರಿತು ದಾಖಲೆಗಳ ಸಮೇತ ನೀಡಲು ಜೆಡಿಎಸ್ ಸಿದ್ಧವಿದೆ. ದತ್ತ ವಿಪ ಸದಸ್ಯರಾದ ಅವಧಿಯಲ್ಲಿ ಕೋಟ್ಯಂತರ ರೂ. ಅನುದಾನ ತಂದು ಕಡೂರು ಕ್ಷೇತ್ರದ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗೆ ದುಡಿದಿರುವುದನ್ನು ಹೇಳಿದ್ದಾರೆಯೇ ಹೊರತು, ಶಾಸಕರಾದ ಮೇಲೆ ಕೋಟ್ಯಾಂತರ ರು. ಅನುದಾನ ತಂದಿದ್ದೇನೆ ಎಂದು ಎಲ್ಲಿಯ ಹೇಳಿಲ್ಲ ಎಂದು ಮಹೇಶ್ವರಪ್ಪ ಹೇಳಿದರು.
ಅವರು ತಂದಿರುವ ಅನುದಾನದ ಕುರಿತು ವಿ.ಪ. ಅವಧಿಯಲ್ಲಿಯೇ ಪುಸ್ತಕ ಮಾಡಿ ಇಡೀ ಕ್ಷೇತ್ರಕ್ಕೆ ಹಂಚಲಾಗಿದೆ. ಇದಕ್ಕಿಂತ ದಾಖಲೆ ಬೇಕೇ. ಮಹೇಶ್ ಆರೋಪಿಸಿರುವಂತೆ ಸುಳ್ಳು ಹೇಳಿ ರಾಜಕಾರಣ ಮಾಡುವ ಅಗತ್ಯ ದತ್ತರವರಿಗಿಲ್ಲ ಎಂದಿದ್ದಾರೆ.
ಶೋಭೆ ತಾರದು: ಮನಸ್ಸಿಗೆ ಬಂದಂತೆ ಆರೋಪ ಮಾಡಿರುವ ಮಹೇಶ್ ಅವರ ವ್ಯಕ್ತಿತ್ವಕ್ಕೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ ಎಂದು ಹೇಳಿದ ಮಹೇಶ್ವರಪ್ಪ, ಕಾಂಗ್ರೆಸ್ ಮುಖಂಡರಿಗೆ ಕಡೂರು ಕ್ಷೇತ್ರದ ಬಗ್ಗೆ ಕಾಳಜಿ ಇದ್ದಲ್ಲಿ ಶಾಸಕರ ಜೊತೆ ಸಹಕರಿಸಿ ಸರ್ಕಾರದಿಂದ ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲಿ.
ಅದನ್ನು ಬಿಟ್ಟು ದತ್ತರವರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಬಾರದು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

