ಅಚ್ಚುಕಟ್ಟು ರೈತರಿಗೆ ಉಚಿತ ಹನಿ ನೀರಾವರಿ
ಕ.ಪ್ರ.ವಾರ್ತೆ, ಕಡೂರು, ಆ.5
ತಾಲೂಕಿನ ಅಯ್ಯನಕೆರೆ ಮತ್ತು ಮದಗದಕೆರೆ ಅಭಿವೃದ್ದಿಪಡಿಸಿ ಅಚ್ಚುಕಟ್ಟುದಾರರಿಗೆ ಉಚಿತ ಹನಿ ನೀರಾವರಿ ಪೂರೈಕೆ ಮಾಡುವ ರು. 35 ಕೋಟಿ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಶೀಘ್ರದಲ್ಲಿ ಮಂಜೂರಾಗಿ, ಕಾಮಗಾರಿ ಆರಂಭವಾಗಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಅವರು ಕಡೂರು ತಾಲೂಕು ಸಖರಾಯಪಟ್ಟಣದ ಅಯ್ಯನಕೆರೆಗೆ ಪತ್ನಿ ಪಲ್ಲವಿ ರವಿ, ವಿಪ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಪಂ ಸದಸ್ಯ ಕಲ್ಮರುಡಪ್ಪ, ಎಪಿಎಂಸಿ ಅಧ್ಯಕ್ಷ ಲಕ್ಷ್ಮಣನಾಯ್ಕರವರೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದರು.
35 ಕೋಟಿ ಪ್ರಸ್ತಾವನೆ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಯ್ಯನಕೆರೆ ಮತ್ತು ಕಡೂರು ಕ್ಷೇತ್ರಕ್ಕೆ ಸೇರುವ ಮದಗದಕೆರೆ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರು. 35 ಕೋಟಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಶೀಘ್ರದಲ್ಲಿಯೇ ಯೋಜನೆ ಮಂಜೂರಾಗಲಿದೆ ಎಂದರು.
ಯೋಜನೆಯಿಂದ ಅಯ್ಯನಕೆರೆ ವ್ಯಾಪ್ತಿಯ ಅಚ್ಚುಕಟ್ಟುದಾರರಿಗೆ ಗುರುತ್ವಾಕರ್ಷಣೆ ಮೂಲಕ ನೀರು ಸರಬರಾಜಾಗುವ ಮೂಲಕ ಸಾವಿರಾರು ಎಕರೆ ಅಚ್ಚಕಟ್ಟುದಾರ ರೈತರ ಜಮೀನುಗಳಿಗೆ ಉಚಿತವಾಗಿ ಹನಿ ನೀರಾವರಿ ಪೂರೈಸುವ ಯೋಜನೆ ಕೈಗೊಳ್ಳಲು ಅನುಕೂಲವಾಗಲಿದೆ.
ಮುಗಿದ ಕಾಮಗಾರಿ: ರು. 11ಕೋಟಿ ವೆಚ್ಚದಲ್ಲಿ ಅಯ್ಯನಕೆರೆ ವ್ಯಾಪ್ತಿಯ ಬಸವನ ಕಾಲುವೆ, ಊರಗಾಲುವೆ, ಬ್ರಹ್ಮಸಮುದ್ರ ಕಾಲುವೆ ಮತ್ತು ಕಡೇಕಾಲುವೆ ಸೇರಿದಂತೆ ನಾಲ್ಕು ಕಾಲುವೆಗಳ ಕಾಮಗಾರಿ ಮುಗಿದಿದೆ. ಇನ್ನು ಅಯ್ಯನಕೆರೆ ಅಭಿವೃದ್ದಿಪಡಿಸುವ ರು. 3 ಕೋಟಿ ಕಾಮಗಾರಿ ಬಾಕಿಯಿದೆ ಎಂದರು.
ತಮ್ಮ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಮತ್ತು ಸಖರಾಯಪಟ್ಟಣದ ಕಾಲುವೆಗಳು ಬಿಟ್ಟರೆ ಬೆಳವಾಡಿ, ದೇವನೂರು ಸೇರಿದಂತೆ ಕೆರೆಗಳು ತುಂಬಿ ಹರಿಯುತ್ತಿರುವುದು ನಮ್ಮ ಸೌಭಾಗ್ಯ. ಇದರಿಂದ ನಮ್ಮ ರೈತರ ನೀರಿನ ಸಮಸ್ಯೆ ಪರಿಹಾರವಾಗುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಕೂಡ ನೀಗಲಿದೆ ಎಂದರು.
ಬೆಳೆ ಕಳೆದುಕೊಂಡು ನಷ್ಟಕ್ಕೀಡಾಗಿರುವ ರೈತರಿಗೆ ಮತ್ತು ರಸ್ತೆ, ಸೇತುವೆಗಳು ಕುಸಿದು ಹಾನಿಗೊಳಗಾಗಿರುವ ಪ್ರದೇಶ ದುರಸ್ತಿಗೆ ವಿಶೇಷ ಪ್ಯಾಕೆಜ್ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದು, ಮುಖ್ಯಮಂತ್ರಿಗಳು ಪರಿಹಾರದ ಭರವಸೆ ನೀಡಿದ್ದಾರೆ ಎಂದರು.
ವಿ.ಪ. ಸದಸ್ಯೆ ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ, ಕಲ್ಮರುಡಪ್ಪ, ಲಕ್ಷ್ಮಣನಾಯ್ಕ, ಮುಖಂಡ ಮಾಜಿ ಜಿಪಂ ಉಪಾಧ್ಯಕ್ಷ ಎನ್.ಎಸ್. ಚಂದ್ರಪ್ಪ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಲೋಕೇಶ್, ಕಲ್ಮರುಡಪ್ಪ, ಚಂದ್ರಶೇಖರ್, ರುದ್ರಸ್ವಾಮಿ, ವರಸಿದ್ದಿ ವೇಣುಗೋಪಾಲ್, ವೆಂಕಟೇಶ್ ಮೊದಲವಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

