ವೇದಾನದಿಗೆ ಕಡೂರು ಪುರಸಭೆ ಸದಸ್ಯರ ಬಾಗಿನ
ಕಡೂರು: ಜನರ ಬಾಯಾರಿಕೆ ತಣಿಸುತ್ತಿದ್ದ ವೇದಾನದಿ ಹಲವು ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆ ಸದಸ್ಯರು ಬಾಗಿನ ಅರ್ಪಿಸಿದರು.
ಕಳೆದ ಹಲವು ವರ್ಷದಿಂದ ವೇದಾನದಿಗೆ ನೀರು ಹರಿಯದೆ ಬತ್ತಿದ ಪರಿಣಾಮ ಪಟ್ಟಣದಲ್ಲಿ ನೀರಿನ ಭವಣೆ ಸವಾಲಾಗಿ ಪರಿಣಮಿಸಿತ್ತು. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವೇದಾನದಿ ಮೈದುಂಬಿ ಹರಿಯುತ್ತಿದ್ದು, ಪುರಸಭೆಯ ನೂತನ ಸದಸ್ಯರು ಹಾಗೂ ಅಧಿಕಾರಿಗಳು ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಸದಸ್ಯರು, ಮಳೆ ಬಾರದ ಹಿನ್ನೆಲೆಯಲ್ಲಿ ಕಡೂರು ಪಟ್ಟಣಕ್ಕೆ ನೀರು ಪೂರೈಸುವುದು ಸವಾಲಾಗಿತ್ತು. ಇದೀಗ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆಕಟ್ಟೆಗಳು ತುಂಬುತ್ತಿವೆ. ಅದರಂತೆ ವೇದಾನದಿ ತುಂಬಿ ಹರಿಯುತ್ತಿರುವುದರಿಂದ ಪಟ್ಟಣದ ಜನರ ನೀರಿನ ಭವಣೆ ನೀಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪುರಸಭೆ ಮುಖ್ಯಾಧಿಕಾರಿ ಕುಮಾರನಾಯ್ಕ, ಸದಸ್ಯರಾದ ತೋಟದಮನೆ ಮೋಹನ್, ಎಂ. ಸೋಮಶೇಖರ್, ಪುಷ್ಪಲತಾ ಸೋಮೇಶ್, ಈರಳ್ಳಿ ರಮೇಶ್, ಕೋಳಿ ಲೋಕೇಶ್, ಹರೀಶ್, ಜಿ. ಸೋಮಯ್ಯ, ಕೆ.ಎನ್. ಜಯಣ್ಣ, ಬಶೀರ್ ಶಾಬ್, ರಾಜೇಶ್, ರೇಣುಕಾರಾಧ್ಯ, ಕೆ.ವಿ. ವೆಂಕಟೇಶ್, ಕೆ.ಬಿ. ಸೋಮೇಶ್, ಪುರಸಭೆ ಸಿಬ್ಬಂದಿ ಈಶ್ವರ್, ರವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

