ವಿದ್ಯಾರ್ಥಿನಿ ನಿಲಯಕ್ಕೆ ತಾಪಂ ಅಧ್ಯಕ್ಷರ ದಿಢೀರ್ ಭೇಟಿ
ಕ.ಪ್ರ.ವಾರ್ತೆ , ಮೂಡಿಗೆರೆ , ಆ.7
ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಅನುಮತಿ ಇಲ್ಲದೆ ಗೈರು ಹಾಜರಾದರೇ ವಸತಿ ಸೌಕರ್ಯಗಳನ್ನು ಕಡಿತಗೊಳಿಸಿ ಎಂದು ತಾಲೂಕ್ ಪಂಚಾಯಿತ್ ಅಧ್ಯಕ್ಷ ಎಂ.ಎ. ಶೇಷಗಿರಿ ನಿಲಯ ಪಾಲಕರಿಗೆ ತಿಳಿಸಿದರು.
ಪಟ್ಟಣದ ಸಮೀಪದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಸೇರಿದಂತೆ ಇನ್ನೇರಡು ನಿಲಯಗಳಿಗೆ ದಿಢೀರ್ ಭೇಟಿ ನೀಡಿದ ಅವರು, ಊಟ ಪರಿಶೀಲನೆ ನಡೆಸಿದರು. ವಸತಿ ನಿಲಯಗಳ ಅವ್ಯವಸ್ಥೆ ಬಗ್ಗೆ ದಿನವೂ ತಮಗೆ ದೂರು ಬರುತ್ತಿದ್ದು ಅದನ್ನು ಪರಿಶೀಲಿಸುವ ಸಲುವಾಗಿ ವಸತಿ ನಿಲಯಗಳಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು.
ಮೆಟ್ರಿಕ್ ಪೂರ್ವ ಮತ್ತು ಸಮಾಜ ಕಲ್ಯಾಣ ಇಲಾಖೆಯ ನಿಲಯದಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಂಜೆ ಒಂದು ಚಪಾತಿ ರಾತ್ರಿ ಅರ್ಧ ಊಟ ನೀಡುತ್ತಿರುವ ಬಗ್ಗೆ ಅಡುಗೆ ಯವರನ್ನು ವಿಚಾರಿಸಿದಾಗ ಹಾರಕೆಯ ಉತ್ತರ ನೀಡಿದ್ದು. ಪಾಲಕರನ್ನು ಕರೆಯುವಂತೆ
ಆದೇಶಿಸಿದಾಗ ಮೇಲ್ವಿಚಾರಕರು ಸಂಜೆ 7 ಗಂಟೆಗೆ ಮನೆಗೆ ತೆರಳುತ್ತಿರುವ ವಿಚಾರ ತಿಳಿದು ಕೆಂಡ ಮಂಡಲವಾದರು. ಸಧ್ಯದಲ್ಲೇ ತಾಲೂಕ್ ಪಂಚಾಯಿತ್ ಆವರಣದಲ್ಲಿ ನಿಲಯ ಪಾಲಕರ ಮತ್ತು ಅಡುಗೆಯವರಿಗೆ ಸಭೆಯನ್ನು ಕರೆಯುವುದಾಗಿ ಪತ್ರಕರ್ತರಿಗೆ ತಿಳಿಸಿದರು.
ಆಕ್ಷೇಪ: ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ತಾವು ಅಧ್ಯಕ್ಷರಾಗಿದ್ದಾಗ ಕಟ್ಟಡ ಶೀಥಿಲವಸ್ಥೆಯಲ್ಲಿದ್ದು ಅದನ್ನು ನವೀಕರಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಟೈಲ್ಸ್, ಊಟದ ಟೇಬಲ್ಗಳನ್ನು ಅಳವಡಿಸಲಾಗಿದೆ. ಇಷ್ಟಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದರು ವಾರ್ಡನ್ಗಳು ರಾತ್ರಿ 9 ರ ತನಕವು ಇರದೇ, 7 ಗಂಟೆಯ ಒಳಗೆ ಮನೆಯನ್ನು ಸೇರುತ್ತಿರುವುದು ಸರಿಯಲ್ಲ ಎಂದರು.
ಹೆಣ್ಣು ಮಕ್ಕಳ ಸಂಪೂರ್ಣ ಜವಾಬ್ದಾರಿ ಪಾಲಕರದ್ದೆ. ಹೀಗಿರುವಾಗ ರಾತ್ರಿ 9 ಗಂಟೆಯ ತನಕ ಕಡ್ಡಾಯವಾಗಿ ವಸತಿ ನಿಲಯಗಳಲ್ಲಿದ್ದು ಕರ್ತವ್ಯ ನಿರ್ವಹಿಸಿ. ಮನೆಗೆ ಹೋಗುವಾಗ ಗೇಟಿಗೆ ಬೀಗ ಹಾಕಿ ಹೋಗಬೇಕು ಎಂದು ವಸತಿ ಮುಖ್ಯಸ್ಥರಿಗೆ ದೂರವಾಣಿ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

