ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಲು ಸೂಚನೆ
ಕ.ಪ್ರ.ವಾರ್ತೆ , ತರೀಕೆರೆ , ಆ.7
ಹಳಸಲು ವಾಸನೆ ಬರುತ್ತಿರು ಈರುಳ್ಳಿ, ಇಟ್ಟ ಜಾಗದಲ್ಲೇ ಮಾರುದ್ದ ಮೊಳಕೆ ಬಂರುವ ಸೀಮೆಬದನೆ ಕಾಯಿ, ಗುಂಗುರು ಮುತ್ತಿರುವ ಕ್ಯಾರೆಟ್, ಕೊಳೆತು ಹೋಗಿರುವ ಮೂಲಂಗಿ, ದನವೂ ತಿನ್ನಲು
ನಿರಾಕರಿಸುವ ಈ ತರಕಾರಿಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಾಕುತ್ತೀದ್ದರಲ್ರೀ..,
ಈ ಮಳೆಗಾಲದಲ್ಲಿ ಎಷ್ಟು ಫ್ರೆಶ್ ಆದ ತಾಜಾ ತರಕಾರಿ ಪೇಟೆಯಲ್ಲಿ ಸಿಗುತ್ತದೆ, ಜನಪ್ರತಿನಿಧಿಗಳ ಎದುರೇ ಇಂತಹ ಪರಿಸ್ಥಿತಿ ಜೀವಂತವಿದೆ. ಇನ್ನು ದಿನವಹಿ ಮಕ್ಕಳನ್ನು ನೀವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೀದ್ದೀರಿ ಎನ್ನುವುದಕ್ಕೆ ಇದಕ್ಕಿಂತ ಬೇರೇ ಸಾಕ್ಷಿ ಬೇಕೆನ್ರೀ....
ವಿವಿಧ ಹಾಸ್ಟೆಲ್ಗೆ ಭೇಟಿ: ಇದು ಟೀವಿ ಧಾರವಾಹಿ ಅಥವಾ ಸಿನಿಮಾದ್ದೋ ಡೈಲಾಗ್ ಅಲ್ಲ, ತರೀಕೆರೆ ಪಟ್ಟಣದಲ್ಲಿರುವ ಸರ್ಕಾರಿ ಬಾಲಕರ ಬಿಸಿಎಂ ಹಾಸ್ಟೆಲ್ನ ಪರಿಸ್ಥಿತಿ ನೋಡಿ ಬರಲು ಬುಧವಾರ ಪಟ್ಟಣದ ಸರ್ಕಾರಿ ವಿವಿಧ ಹಾಸ್ಟೆಲ್ಗಳಿಗೆ ಭೇಟಿ ನೀಡಿದ ಚಿಕ್ಕಮಗಳೂರು ಜಿಪಂ ಉಪಾಧ್ಯಕ್ಷೆ ಸುಜಾತ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಿವಣ್ಣ, ಜಿಪಂನ್ಯಾಯ ಸಮಿತಿ ಸದಸ್ಯರು, ಜಿಪಂ ಸದಸ್ಯ ಕುಮಾರ್, ಹೇಮಾವತಿ ಕೃಷ್ಣಪ್ಪ ಮತ್ತಿತರ ಜನಪ್ರತಿನಿಧಿಗಳ ಬಾಯಿಂದ ಬಂದ ನೋವಿನ ಮಾತುಗಳು ಇದು.
ನಂತರ ಬುಧವಾರ ತಾಪಂ ಸಭಾಂಗಣದಲ್ಲಿ ನಾಲ್ಕು ಗಂಟೆ ಕಾಲ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಬಿಸಿಎಂ.ಹಾಸ್ಟೆಲ್ ವಾರ್ಡನ್ಗಳು, ಅಡುಗೆ ಮಾಡುವವರಿಗಾಗಿ ಏರ್ಪಾಡಾಗಿದ್ದ ಒಂದು ದಿನದ ಕಾರ್ಯಾಗಾರದ ಉದ್ಘಾಟಿಸಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿದರು.
ಸರ್ಕಾರ ಎಷ್ಟೊಂದು ಹಣ ಖರ್ಚು ಮಾಡಿ ವಿದ್ಯಾರ್ಥಿಗಳಗೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುತ್ತಿವೆ. ಆದರೆ ಈ ಸೌಲಭ್ಯ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ, ಹಾಸ್ಚೆಲ್ ಅಧಿಕಾರಿಗಳು, ವಾರ್ಡನ್ಗಳು ನಿಜವಾಗಿ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳನ್ನು ಬೆಳಗಿನ ಮುಂಚೆ ಏಳಿಸಿ ಓದಿಕೊಳ್ಳಲು ಹೇಳಿ, ವಿದ್ಯಾರ್ಧಿಗಳಿಗೆ ನೈತಿಕ ಶಿಕ್ಷಣ ಹೇಳಿಕೊಡಿ ಎಂದು ಹಾಸ್ಟೆಲ್ ವಾರ್ಡನ್, ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕೆಟ್ಟುಹೋದ ಬಲ್ಪ್: ಜಿ.ಪಂ. ಸದಸ್ಯ ಕೆ.ಆರ್. ಆನಂದಪ್ಪ ಮಾತನಾಡಿ, ಕುಂಟನಮಡು ವಿದ್ಯಾರ್ಥಿ ಹಾಸ್ಟಲ್ ಕತ್ತಲೆಯಲ್ಲಿ ಮುಳುಗಿದೆ. ವಿದ್ಯುತ್ ಬಲ್ಬು ಕೆಟ್ಟುಹೋಗಿ 6 ತಿಂಗಳಾಯಿತು. ಹಲವು ಸಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಇಲ್ಲಿಯವರೆಗೂ ಬಲ್ಪು ಬೇರೆ ಹಾಕಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ಅವರು ಹಾಸ್ಟೆಲ್ಗಳಿಗೆ ಬರೆದ 12 ಆಂಶದ ಪತ್ರವನ್ನು ಅಧಿಕಾರಿಗಳು ನೋಡೇ ಇಲ್ಲ ಅಂದರೆ ಸಭೆಯನ್ನು ಏಕೆ ನಡಸಬೇಕು ಎಂದು ಪ್ರಶ್ನಿಸಿದರು.
ಹಾಸ್ಟೆಲ್ ಅಭಿವೃದ್ಧಿ ಕುರಿತಂತೆ ಆಯಾ ಪ್ರದೇಶಗಳ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಹಾಸ್ಟೆಲ್ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳನ್ನೂ ಸೇರಿಸಿಕೊಳ್ಳಿ, ಅದರಿಂದ ಹಾಸ್ಟೆಲ್ ಸಮಸ್ಯೆ ಪರಿಹರಿಸಬಹುದು, ಹೆಚ್ಚು ವಿದ್ಯಾರ್ಥಿಗಳನ್ನು ಹಾಸ್ಟೆಲ್ಗಳಿಗೆ ಕರೆತರಬಹುದು ಎಂದು ಅವರು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಪಂ ಉಪಾಧ್ಯಕ್ಷರಾದ ಸುಜಾತ, ಸದಸ್ಯರಾದ ಹೇಮಾವತಿ ಕೃಷ್ಣಪ್ಪ, ಕೆ.ಪಿ. ಕುಮಾರ್, ಶಿವಣ್ಣ, ಎಸ್.ಬಿ. ಆನಂದಪ್ಪ, ಬೆಳ್ಳಿ ಪ್ರಕಾಶ್ ಮಾತನಾಡಿದರು. ಸುಧಾ ಅಮೃತೇಶ್, ವಿಶಾಲ ತಿಪ್ಪೇಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಅಧಿಕಾರಿ ಸಿಂಗಾರಿಗೌಡ, ಇ.ಒ. ದೇವರಾಜ್, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್ ಮೊದಲಾದರು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

