ಚಿಕ್ಕಮಗಳೂರು

ಪ್ರತಿಯೊಂದರಲ್ಲೂ ಧರ್ಮವಿದೆ: ರಂಭಾಪುರಿ ಶ್ರೀ

Published On :

ಬಾಳೆಹೊನ್ನೂರು: ಪ್ರತಿಯೊಂದಕ್ಕೂ ಧರ್ಮವಿದ್ದು, ಸೂರ್ಯ, ಚಂದ್ರ ಹಾಗೂ ಭೂಮಿಗೂ ಒಂದು ಧರ್ಮವಿದೆ. ಪವಿತ್ರವಾದ ಧರ್ಮವೆಂಬ ದೋಣಿಗೆ ರಂಧ್ರ ಕೊರೆಯಬಾರದೆಂದು ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ರಂಭಾಪುರೀ ಪೀಠದಲ್ಲಿ ಬುಧವಾರದಿಂದ ಪ್ರಾರಂಭಗೊಂಡ 22ನೇ ವರ್ಷದ ಶ್ರಾವಣ ತಪೋನುಷ್ಠಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳುಗಳಿದ್ದು, ಬಹಳಷ್ಟು ಜಾಗೃತೆಯಿಂದ ಹೆಜ್ಜೆ ಹಾಕಬೇಕಾಗಿದೆ. ಈ ಪವಿತ್ರ ಧರ್ಮ ನಾಡಿನಲ್ಲಿ ಆಚಾರ್ಯರು, ಋಷಿಮುನಿಗಳು ಮತ್ತು ಸಾಧು ಸಂತ ಮಹಾತ್ಮರು ಅವತರಿಸಿ ಜನಮನದಲ್ಲಿ ಧರ್ಮಪ್ರಜ್ಞೆ ತುಂಬಿ ಬೆಳಕು ತೋರಿದ್ದಾರೆ.
ಜಗದ್ಗುರು ರೇಣುಕಾಚಾರ್ಯರು ಮಲಯಾಚಲದಲ್ಲಿ ತಪೋ ನಿರತರಾದ ಅಗಸ್ತ್ಯ ಮುನಿಗಳಿಗೆ ಶಿವಜ್ಞಾನಾಮೃತ ನೀಡಿ ಉದ್ಧರಿಸಿದ್ದು ಉಲ್ಲೇಖನೀಯ. ಆದರ್ಶ ಮೌಲ್ಯಗಳು ಮತ್ತು ಅವುಗಳ ಆಚರಣೆ ಮುಖ್ಯವೆಂದು ಹೇಳಿದರು.
ಹಲಗೂರು ಬೃಹನ್ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನವನ್ನು ಮಾಡಿ ಮಾತನಾಡಿ, ಪರಮಾಚಾರ್ಯರ ಆದರ್ಶ ಚಿಂತನೆಗಳು ಜೀವನ ವಿಕಾಸಕ್ಕೆ ಭದ್ರವಾದ ಅಡಿಪಾಯವೆಂದರು.
ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರು ವೇದಘೋಷ ಮಾಡಿ, ಕುಮಾರ ಪಂಚಾಕ್ಷರಿ ಪ್ರಾರ್ಥಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ಸ್ವಾಗತಿಸಿ, ನಿರೂಪಿಸಿದರು.
ಶ್ರಾವಣ ಮಾಸದ ಪ್ರಯುಕ್ತ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ವೀರಭದ್ರಸ್ವಾಮಿಗೆ, ಶಕ್ತಿಮಾತೆ ಚೌಡೇಶ್ವರಿಗೆ ಹಾಗೂ ಲಿಂಗೈಕ್ಯ ಜಗದ್ಗುರುವಳವರ ಗದ್ದುಗೆಗೆ ವಿಶೇಷ ಪೂಜೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.