'ಸೂರಿಗಾಗಿ ಸಮರ': 14ರಿಂದ ಅನಿರ್ದಿಷ್ಟಾವಧಿ ಧರಣಿ
ಕ.ಪ್ರ.ವಾರ್ತೆ , ಮೂಡಿಗೆರೆ , ಆ.9
ನಿವೇಶನ ರಹಿತರ ಹೋರಾಟ 'ಸೂರಿಗಾಗಿ ಸಮರ' ಎರಡು ವರ್ಷಪೂರೈಸಿದರೂ ನಿವೇಶನ ಸಮಸ್ಯೆ ಬಗೆಹರಿಯದಿರುವುದರಿಂದ ತಾಲ್ಲೂಕು ಕಚೇರಿ ಎದರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ತಾಲೂಕು ಘಟಕದ ಕಾರ್ಯದರ್ಶಿ ಗೋಪಾಲ್ ಎನ್. ಶೆಟ್ಟಿ ತಿಳಿಸಿದ್ದಾರೆ.
ಬಡವರಿಗಾಗಿ ಸೂರಿಗಾಗಿ ಸಮರ ಹೋರಾಟ ಎರಡು ವರ್ಷ ಪೂರೈಸಿದೆ. ಆದರೆ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಇದುವರೆಗೂ ನಿವೇಶನಕ್ಕೆ ಗುರುತಿಸಿರುವ ಜಾಗದಲ್ಲಿರುವ ಮರಗಳನ್ನು ತೆರವು ಮಾಡಿಲ್ಲ ಆದರೆ ಬಡವರು ಕಟ್ಟಿರುವ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸಲು ಮುಂದಾಗುತ್ತಾರೆ ಎಂದು ಅವರು ಪ್ರಕಟಯಲ್ಲಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಹಲವಾರು ಅನಧಿಕೃತ ರೇಸಾರ್ಟ್ಗಳು, ಹೋಂ ಸ್ಟೇಗಳು ನಿರ್ಮಾಣಗೊಂಡಿದ್ದು, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿವೆ. ಅರಣ್ಯ ಆದರೆ ಇವುಗಳನ್ನು ತೆರವುಗೊಳಿಸುವ ಬದಲು ಇಲಾಖೆ ಬಡವರ ಜೊತೆ ಚೆಲ್ಲಾಟವಾಡುತ್ತಿದೆ. ಇಂತಹ ಅಧಿಕಾರಿಗಳ ನಿಜವಾದ ಬಣ್ಣವನ್ನು 14ರಂದು ತಾಲೂಕು ಕಚೇರಿ ಎದುರು ನಿವೇಶನ ರಹಿತರ ಧರಣಿಯಲ್ಲಿ ಬಯಲು ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಗ್ರಾಪಂಗಳು ಕಂದಾಯ ಇಲಾಖೆಗೆ ಸೇರಿದ ಜಾಗವಿದ್ದರು ಅರಣ್ಯ ಇಲಾಖೆಯ ಡೀಮ್ಡ್ ಅರಣ್ಯವನ್ನು ನಿವೇಶನಕ್ಕೆ ಗುರುತಿಸಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

