ಚಿಕ್ಕಮಗಳೂರು

ಬಿಎಸ್‌ವೈ ಗೆಲವು ನೈಜ ಗೆಲವಲ್ಲ: ಆಯನೂರು

Published On :

ಶಿಕಾರಿಪುರ: ಬಿಜೆಪಿ ಎಂಬ ಭದ್ರಕೋಟೆ ಇಲ್ಲದೆ ಸೇನಾಧಿಪತಿ ಗೆಲವು ಅಸಾಧ್ಯವಾಗಿದ್ದು, ಈ ಹಿಂದಿನ ಬಿಜೆಪಿ ಎಂಬ ಭದ್ರಕೋಟೆಯ ರಕ್ಷಣೆಯಿಂದಾಗಿಮಾತ್ರ ಯಡಿಯೂರಪ್ಪನವರು ಚುನಾವಣೆಯಲ್ಲಿ ಗೆಲ್ಲಲು ಸಾದ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಆಯನೂರು ಮಂಜುನಾಥ್ ಹೇಳಿದರು.
 ಶನಿವಾರ ಸಂಜೆ ಪಟ್ಟಣದ ಗುರುಭವನದಲ್ಲಿ ತಾಲೂಕು ಬಿಜೆಪಿ ವತಿಯಿಂದ ನೂತನ ಜಿಲ್ಲಾದ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬಿಜಿಪಿ ಕಾರ್ಯಕರ್ತರ ಸಂಖ್ಯೆಯು ಕಡಿಮೆಯಾಗಿರಬಹುದು ಆದರೆ ಮುಂದೆ ಇದು ವರವಾಗಿ ಪರಿಣಮಿಸಲಿದೆ ಎಂದರು.
ಬಿಎಸ್‌ವೈ ಗೆಲವು ನೈಜವಲ್ಲ: ಯಡಿಯೂರಪ್ಪನವರ ಗೆಲವು ನೈಜ ಗೆಲುವಲ್ಲ ಎಂದ ಅವರು ದೇಶದಲ್ಲಿನ ದುರ್ಬಲ ನಾಯಕರಿಂದಾಗಿ ಸ್ವಾತಂತ್ರ ದಿನಾಚರಣೆಯನ್ನು ಮಿಲಿಟರಿ,ಪೋಲಿಸ್ ರಕ್ಷಣೆಯಲ್ಲಿ ಆಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಸದೃಡ ಭಾರತ ನಿರ್ಮಾಣಕ್ಕಾಗಿ ಅಟಲ್‌ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ರೀತಿಯ ನಾಯಕರ ಅವಶ್ಯಕತೆ ಹೆಚ್ಚಿದೆ ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸಿದ್ರಾಮಣ್ಣ ಮಾತನಾಡಿ, ಯಡಿಯೂರಪ್ಪನವರಿಗೆ ಹೆಸರು ಹೋರಾಟದಿಂದ ಬಂದಿದ್ದಲ್ಲ ಎಲ್ಲಾ ಹೋರಾಟದ ಹಿಂದೆ ವೈಯುಕ್ತಿಕ ಶ್ರಮಕ್ಕಿಂತ ಮಂಜುನಾಥ್ ಅಂತಹ ಅನೇಕ ಕಾರ್ಯಕರ್ತರ ಹೋರಾಟ, ಶ್ರಮ ಅಡಗಿದೆ ಎಂದರು.
ತಾಲೂಕು ಬಿಜೆಪಿಅಧ್ಯಕ್ಷ ಕೊಪ್ಪಲು ಮಂಜುನಾಥ್ ಮಾತನಾಡಿ, ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ಕೆಲವೇ ತಿಂಗಳಲ್ಲಿ ಘೋಷಣೆಯಾಗಲಿದ್ದು, ಜನತೆಯ ವಿಶ್ವಾಸಗಳಿಸಿ ಬಿಜೆಪಿ ಜಯಗಳಿಸಬೇಕಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.