ಚಿಕ್ಕಮಗಳೂರು

ಅಭಿವೃದ್ಧಿಯಲ್ಲಿ ಸಂಸದರ ನಿರ್ಲಕ್ಷ್ಯ; ಆರೋಪ

Published On :

ಕ.ಪ್ರ.ವಾರ್ತೆ  ತರೀಕೆರೆ   ಆ.17
ಕಳೆದ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಲು ಕಾರಣವಾದ ತರೀಕೆರೆ ವಿಧಾನ ಸಬಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಂಸದ ಜಯಪ್ರಕಾಶ್ ಹೆಗಡೆ ಅವರು ನಿರ್ಲಕ್ಷಿಸಿದ್ದಾರೆ ಎಂದು ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಅರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದರು ತಮ್ಮ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದ್ದು, ಕೇಂದ್ರ ಸರ್ಕಾರದಿಂದ ಸಂಸದರ ನಿಧಿಯಲ್ಲಿ ಇದುವರೆಗೆ ಬಿಡುಗಡೆಯಾದ 14 ಕೋಟಿ ರು.ಗಳಲ್ಲಿ ಕೇವಲ 7 ಕೋಟಿ ರು.ಗಳನ್ನು ಮಾತ್ರ ಬಳಸಿದ್ದಾರೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನೀತಿ ಸಂಹಿತೆ ಜಾರಿಯಾದರೆ ಉಳಿದ ಅನುದಾನ ಹಾಗೇಯೇ ಉಳಿಯಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು  ಕ್ಷೇತ್ರಕ್ಕೆ ತರುವಲ್ಲಿ ವಿಫಲರಾಗಿರುವ ಸಂಸದರು, ಪ್ರಾರಂಭದಲ್ಲಿ ಪಟ್ಟಣಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂದಪಟ್ಟಂತೆ ಹಲವು ಆಶ್ವಾನನೆ ನೀಡಿದ್ದರು, ಈ ಕಾಮಗಾರಿಯ ಅಂದಾಜು ಮೊತ್ತ 22 ಕೋಟಿ ರು.ಗಳಾಗಿದ್ದು, ಇದರಲ್ಲಿ ಸಂಸದರ ನಿಧಿಯ ವಿವರವನ್ನು ಬಹಿರಂಗಗೊಳಿಸಬೇಕು ಎಂದು ಅವರು ತಿಳಿಸಿದರು.
ಹೆಬ್ಬೆ ಜಲಪಾತ: ತಾಲೂಕಿನ ನೀರಾವರಿ ಬಗ್ಗೆ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಏನೇನೂ ಮಾಹಿತಿ ಇಲ್ಲ, ನೆನಗುದಿಗೆ ಬಿದ್ದಿರುವ ಜಂಬದಹಳ್ಳ ನೀರಾವರಿ ಯೋಜನೆಗೆ ಟೆಂಡರ್ ಕರೆಯಲಾಗುವುದು ಎಂದು ಪದೇ ಪದೇ ಹೇಳುತ್ತಿರುವುದು ಶೋಬೆ ತರುವಂತಹುದಲ್ಲ.
 ತಾವು ಶಾಸಕರಾಗಿದ್ದಾಗ ಯೋಜನೆಯ ಜಾರಿಗಾಗಿ ಕೇಂದ್ರ ಅರಣ್ಯ ಇಲಾಖೆ ಹಾಗೂ ಪರಿಸರ ಸಚಿವಾಲಯದಿಂದ ಟ್ರಯಲ್ ಫೀಟ್ ಹಾಗೂ ಟ್ರಯಲ್ ಬೋರ್ಡ್ ಕಾಮಗಾರಿ ಪ್ರಾರಂಭಿಸಲಾಗಿತ್ತು, ಗೋವಿಂದಪುರದ ಬಡಗಕಟ್ಟೆಯಿಂದ ರಾಮನಾಯ್ಕನ ಕೆರೆಗೆ ನೀರು ಹರಿಸುವ ಚಿಂತನೆ ನೆಡಸಲಾಗಿತ್ತು.
ಆದರೆ ನೂತನ ಶಾಸಕರು ಯೋಜನೆಯನ್ನೇ ಕೈಬಿಟ್ಟಿದ್ದಾರೆ, ತಾಲೂಕಿನಲ್ಲೇ ಹುಟ್ಟುವ ಹೆಬ್ಬೆ ಜಲಪಾತದ ನೀರನ್ನು ತಾಲೂಕಿಗೆ ಬಳಸಿಕೊಳ್ಳಲು ಹಿಂದಿನಿಂದಲೂ ಹೋರಾಟ ನೆಡೆದಿದೆ.
 ಆದರೆ ಶಾಸಕರು ಕಡೂರು ಕ್ಷೇತ್ರಕ್ಕೆ ನೀರು ಕೊಂಡೊಯ್ಯುವಲ್ಲಿ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ತಾಲೂಕಿನ ರೈತರ ಹಿತಾಸಕ್ತಿಯನ್ನು ಬಲಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.