ಮಳೆ: ತೋಟಗಾರಿಕೆ ಬೆಳೆಗೆ ರು. 345.33 ಕೋಟಿ ನಷ್ಟ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಅಂದರೆ ಜನವರಿ 1 ರಿಂದ ಆಗಸ್ಟ್ 19ರವರೆಗೆ ಜಿಲ್ಲೆಯಲ್ಲಿ ಶೇ. 136 ರಷ್ಟು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಿದ್ದ ಮಳೆ ಶೇ. 91ರಷ್ಟಿತ್ತು.
ಸತತವಾಗಿ ಎರಡು ತಿಂಗಳಿಗೂ ಅಧಿಕ ಕಾಲ ಸುರಿದ ಮಳೆಗೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಈವರೆಗೆ ಆಗಿರುವ ನಷ್ಟ 345.33 ಕೋಟಿ ರುಪಾಯಿ.
ಅಡಕೆಗೆ ಕೊಳೆ ರೋಗ, ಆಲೂಗೆಡ್ಡೆಗೆ ಅಂಗಮಾರಿ ರೋಗ, ಮೆಣಸು, ಈರುಳ್ಳಿ, ಮೆಣಸಿನಕಾಯಿ ಹಾಗೂ ತರಕಾರಿ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಜಿಲ್ಲೆಯಲ್ಲಿ ಮುಂಗಾರಿನಲ್ಲಿ 3,859 ಹೇಕ್ಟೆರ್ನಲ್ಲಿ ಆಲೂಗೆಡ್ಡೆ ಬೆಳೆಯಾಗಿತ್ತು. ಇದರಲ್ಲಿ ಅಂಗಮಾರಿ ರೋಗದಿಂದಾಗಿ 2,430 ಹೆಕ್ಟೇರ್ಗೆ ಹಾನಿ ಸಂಭವಿಸಿದ್ದು, ಇದರಿಂದ ಸುಮಾರು 36 ಕೋಟಿ ರುಪಾಯಿ ನಷ್ಟವಾಗಿದೆ. ತರೀಕೆರೆ ಹಾಗೂ ಕಡೂರು ತಾಲೂಕಿನಲ್ಲಿ 7,550 ಹೆಕ್ಟೇರ್ನಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಇದರಲ್ಲಿ 3,387 ಹೆಕ್ಟೇರ್ನಲ್ಲಿನ ಈರುಳ್ಳಿ ಬೆಳೆಗೆ ಮಳೆಯಿಂದ ಹಾನಿ ಸಂಭವಿಸಿದ್ದು, 34.6 ಕೋಟಿ ರುಪಾಯಿ ನಷ್ಟವಾಗಿದೆ.
ಚಿಕ್ಕಮಗಳೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ 1,012 ಹೆಕ್ಟೇರ್ನಲ್ಲಿ ಮೆಣಸಿನ ಕಾಯಿ ಬೆಳೆಯಲಾಗಿದ್ದು, ಇವುಗಳಲ್ಲಿ 400 ಹೆಕ್ಟೇರ್ನಲ್ಲಿ ಹಾನಿ ಸಂಭವಿಸಿದ್ದು, ಇದರ ಅಂದಾಜು ನಷ್ಟ 24.10 ಕೋಟಿ, ಇತರೆ ತರಕಾರಿ ಬೆಳೆಯ ಹಾನಿಯಿಂದಾಗಿ 60.14 ಕೋಟಿ ನಷ್ಟವಾಗಿದೆ.
ಜಿಲ್ಲೆಯ ಏಳು ತಾಲೂಕುಗಳಲ್ಲಿ ಮಳೆಯಿಂದಾಗಿ 15,625 ಹೆಕ್ಟೇರ್ ಪ್ರದೇಶದ ಅಡಕೆ ತೋಟಗಳಿಗೆ ಹಾನಿಯಾಗಿದ್ದು, ಇದರ ಅಂದಾಜು ನಷ್ಟ 166.13 ಕೋಟಿ ರು. 3,197 ಹೆಕ್ಟೇರ್ಗಳ ಪೈಕಿ 3,070 ಹೆಕ್ಟೇರ್ ಪ್ರದೇಶದಲ್ಲಿನ ಕಾಳು ಮೆಣಸು ಬೆಳೆಗೆ ಹಾನಿ ಸಂಭವಿಸಿದ್ದು, ಇದರ ಅಂದಾಜು ನಷ್ಟ 24.36 ಕೋಟಿ.
ವಾಡಿಕೆ ಮೀರಿ ಮಳೆ: ಕಳೆದ ವರ್ಷ ಚಿಕ್ಕಮಗಳೂರು ತಾಲೂಕಿನಲ್ಲಿ ಈವರೆಗೆ ಶೇ. 90 ರಷ್ಟು ಮಳೆಯಾಗಿತ್ತು. ಆದರೆ, ಈ ವರ್ಷದಲ್ಲಿ ಶೇ.146 ರಷ್ಟು ಮಳೆ ಬಂದಿದೆ. ಮೂಡಿಗೆರೆ ತಾಲೂಕಿನಲ್ಲಿ ಶೇ. 137, ಕೊಪ್ಪ- ಶೇ. 134, ಶೃಂಗೇರಿ- ಶೇ. 128, ಎನ್.ಆರ್. ಪುರ- ಶೇ.137, ತರೀಕೆರೆ- ಶೇ.168, ಕಡೂರು- ಶೇ.129 ರಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಈಗ ಮಳೆ ಬಿಡುವು ನೀಡಿದಂತೆ ಕಂಡು ಬಂದರೂ ಮಲೆನಾಡಿನ ಹಲವೆಡೆ ತುಂತುರು ಮಳೆ ಮುಂದುವರೆದಿದೆ.
ತೋಟಗಾರಿಕೆ ಬೆಳೆ ಹಾನಿ ವಿವರ
ಬೆಳೆಗಳು ಬಿತ್ತನೆ (ಹೆಕ್ಟೇರ್) ನಷ್ಟ (ಹೆಕ್ಟೇರ್) ಹಾನಿ (ಕೋಟಿ )
ಆಲೂಗೆಡ್ಡೆ 3859 2430 36
ಈರುಳ್ಳಿ 7550 3387 34.6
ಮೆಣಸಿನಕಾಯಿ 1,012 400 24.10
ತರಕಾರಿ 402 112 60.14
ಅಡಕೆ 40,603 15,625 166.13
ಕಾಳುಮೆಣಸು 3197 3070 24.36
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

